ಹಾವೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 3 ರಂದು ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸರ್ಕಾರದ ಮಂತ್ರಿ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ವಾಹನ ಚಲಾಯಿಸಿ ರೈತರನ್ನು ಹತ್ಯೆ ಮಾಡಿದ್ದು, ಅಂದಿನ ಘಟನೆಯಲ್ಲಿ ಹುತಾತ್ಮರಾದ ಐದು ಜನ ರೈತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಸಂಯುಕ್ತ ಕಿಸಾನ್ – ಕರ್ನಾಟಕ ಕರೆಯ ಅಂಗವಾಗಿ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ರೈತ ಹುತಾತ್ಮ ಸ್ಮಾರಕದ ಹತ್ತಿರ ಹುತಾತ್ಮರಾದ ರೈತರು ಹಾಗೂ ಪತ್ರಕರ್ತನಿಗೆ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನು ಓದಿ: ಲಖಿಂಪುರ ಹಿಂಸಾಚಾರದಲ್ಲಿ ಮಡಿದ ರೈತರ ‘ಅಂತಿಮ ದರ್ಶನ’ಕ್ಕೆ ಎಸ್ಕೆಎಂ ನಾಯಕರ ಭೇಟಿ
ಈ ಸಂದರ್ಭದಲ್ಲಿ ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲ್ಲೂಕು ಅಧ್ಯಕ್ಷ ದಿಳೇಪ್ಪ ಮಣ್ಣುರ, ಜಿಲ್ಲಾ ಕಾರ್ಯಧ್ಯಕ್ಷ ಶಿವಬಸಪ್ಪ ಗೋವಿ, ಅಖಿಕ ಭಾರತ ವಕೀಲರ ಸಂಘ(ಎಐಎಲ್ಯು) ಮುಖಂಡ ನಾರಾಯಣ ಕಾಳೆ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ರೈತ ಸಂಘಟನೆ ಮಹಿಳಾ ಮುಖಂಡರಾದ ಮಂಜುಳಾ ಎಸ್ ಅಕ್ಕಿ, ಸುಮಾ ಕೆ ಪುರದ, ಚಂದನ್ ಅಕ್ಕಿ, ರೈತ ಮುಖಂಡರಾದ ಚಂದ್ರಶೇಖರ ಜಾಲಗಲ್, ಜಾನ್ ಪುನೀತ್, ಗುಡ್ಡಪ್ಪ ಹೊಂಬರಡಿ, ನಂಜುಡಸ್ವಾಮಿ, ಕೊಟ್ರೇಶ ಕರ್ಜಗಿ, ಕರಬಸಪ್ಪ ಬ್ಯಾಡಗಿ, ಸಂಘಟನೆಯ ವಿವಿಧ ಮುಖಂಡರು ಭಾಗವಹಿಸಿದ್ದರು.