ಹತ್ರಾಸ್ ಪ್ರಕರಣ; ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲಿ : ಅನುಪಮಾ ಶಣೈ

  • ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದೆ

ಬಳ್ಳಾರಿ : ಯುಪಿಯಲ್ಲಿ ನಡೆದ ಹತ್ರಾಸ್ ಯುವತಿಯ ಹತ್ಯಾಚಾರ ಪ್ರಕರಣ ಮತ್ತು ಕೇಂದ್ರ ಸರ್ಕಾರ , ಯುಪಿ ಸರ್ಕಾರದ ವಿರುದ್ಧ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಹಾಗೂ ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯುಪಿಯ ಹತ್ರಾಸ್ ನಲ್ಲಿ ನಡೆದ ಯುವತಿಯ ಹತ್ಯಾಚಾರ ಪ್ರಕರಣ ಖಂಡನೀಯ, ಯುಪಿಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸಾಕ್ಷಿ ನಾಶಪಡಿಸಲು ಪೊಲೀಸ್ ರು ಶವವನ್ನು ಸುಟ್ಟುಹಾಕಿದ್ದಾರೆ. ಈ ಹಿಂದೆ ನಿರ್ಭಯಾ ಪ್ರಕರಣ ಹೈಲೆಟ್ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಯುಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಾರ್ಟಿ ಇಡಿ ದೇಶದಲ್ಲಿ ತನ್ನ ವರ್ಚಸ್ಸು ಕುಸಿಯುತ್ತಿದೆ. ಯುಪಿಯಲ್ಲಿ ಕಾಂಗ್ರೆಸ್ ಬೆಳೆಯಬೇಕು, ಆ ಕಾರಣಕ್ಕೆ ರಾಹುಲ್ ಗಾಂಧಿ ಸರ್ಕಸ್ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದ ಈ ಹಿಂದಿನ ಶಿಕ್ಷಣ ನೀತಿ ಈಗಿನ ಪಕ್ಷಗಳೇ ಮಹಿಳೆಯರ ಇಂದಿನ ಪರಿಸ್ಥಿತಿಗೆ ಕಾರಣವಾಗಿವೆ. ಕಾನೂನು ಬದಲಾವಣೆಯ ತರುವ ಹಬ್ಬರದಲ್ಲಿ ರೇಪಿಸ್ಟ್ ಗಳು ಹುಟ್ಟಿಕೊಂಡಿದ್ದಾರೆ. ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರದಲ್ಲಿಯೂ ಈ ಘಟನೆಗಳು ನಡೆದಿವೆ. ಇದಕ್ಕೆ ಇಬ್ಬರ ಕೊಡುಗೆಯೂ ಇದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸ್ ಇಲಾಖೆಯಲ್ಲಿ ತನಿಖೆ ಹಾದಿ ತಪುತ್ತಿದೆ,  ಪೊಲೀಸ್ ಇಲಾಖೆಯು ಇಂತಹ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಸುಶಾಂತ್ ಸಿಂಗ್ ರಜಪೂಜ್, ನಮ್ಮ ರಾಜ್ಯದ ಡಿಕೆ. ರವಿ, ಎಂಕೆ. ಗಣಪತಿ, ಕಲ್ಲಪ್ಪ ಹಂಡಿಬಾಗ್ ಪ್ರಕರಣಗಳಲ್ಲಿ ರಾಜಕೀಯ ಪ್ರಭಾವಿಗಳ ಕೈವಾಡವಿದೆ,  ಯುಪಿಯ ಹತ್ರಾಸ್ ಹತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರ ಆಗಿಲ್ಲ ಎಂದು ವಾದಿಸುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಒತ್ತಡ ಇದೆ ಎಂದು ಕೇಂದ್ರ ಸರ್ಕಾರ , ಯುಪಿ ಸರ್ಕಾರದ ವಿರುದ್ಧ ಅನುಪಮಾ ಶಣೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹತ್ರಾಸ್ ಹತ್ಯಾಚಾರ ಘಟನೆಯಲ್ಲಿ ಸಾಕ್ಷಿ ನಾಶ ಮಾಡಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು, ಬಿಜೆಪಿಯೂ ಈ ಪ್ರಕರಣದಲ್ಲಿ ಮೂಗೂ ತೂರಿಸಬಾರದು. ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ಉದ್ದೇಶ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಇರುವುದರಿಂದ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನ್ಯಾಯಯುತವಾಗಿ ತನಿಖೆ ನಡೆಸಬೇಕು, ಇನ್ನೂ ಅತ್ಯಾಚಾರ ಮಾಡಿದವರಿಗೆ ಪುರುಷತ್ವ ಹರಣ ಶಿಕ್ಷೆ ನೀಡಬೇಕು, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಪಕ್ಷದ ಬಲವರ್ಧನೆಗೆ ಮುಂದಾಗುತ್ತೇವೆ, ನಾನು ಭ್ರಷ್ಟಾಚಾರ ವಿರೋಧಿಸಿ ಇಲಾಖೆಯಿಂದ ಹೊರ ಬಂದಿರುವೆ. ಬೇರೆ, ಬೇರೆಯವರಿಗೆ ಸಹಾಯ ಕೇಳಿದ್ದೇನೆ, ಬಳ್ಳಾರಿ, ಬೀದರ್, ಬೆಳಗಾವಿ, ಚಿಕ್ಕೋಡಿ, ಬೆಂಗಳೂರಲ್ಲಿ ನಮ್ಮ ಪದಾಧಿಕಾರಿಗಳಿದ್ದಾರೆ. ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ನಿಲ್ಲಿಸುವ ಯೋಚನೆ ಇದೆ. ನಾನು ರಾಜೀನಾಮೆ ನೀಡಿದ ನಂತರ ಕೆಲ ಅಧಿಕಾರಿಗಳ ಮೇಲೆ ಕೇಸ್ ಹಾಕಿರುವೆ, ಆ ಕೇಸ್ ಮತ್ತೆ ಚಿಗುರೋಡೆಯಬಹುದು. ಆ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ಅನುಪಮಾ ಶಣೈ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *