ಬೆಂಗಳೂರು: ಕಳೆದ 10 ವರ್ಷಗಳಿಂದ ಧಾರ್ಮಿಕ ಮೂಲಭೂತವಾದದಲ್ಲಿ ಮುಳುಗಿರುವ ದ್ವೇಷಪೂರಿತ ಅಜೆಂಡಾವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ಸಂವಿಧಾನದ ಪ್ರತಿಯೊಂದು ಸಿದ್ಧಾಂತವನ್ನು ಚೂರು ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದ್ವೇಷಪೂರಿತ
ಆಡಳಿತಾರೂಢ ಬಿಜೆಪಿ ಹಿಂದುಳಿದ ಯುವಕರನ್ನು ‘ರಾಷ್ಟ್ರೀಯತೆ’ ಮತ್ತು ‘ಧಾರ್ಮಿಕ ಪಾರಮ್ಯ’ದ ಧ್ವಜವನ್ನು ಹಿಡಿಯುವಂತೆ ಮಾಡುವ ಮೂಲಕ ಹುಸಿ-ರಾಷ್ಟ್ರೀಯತೆಯನ್ನು ಅಭ್ಯಾಸವನ್ನು ಮಾಡಿಸುತ್ತಿದೆ. ಸಂವಿಧಾನದ ವಿಚಾರಗಳು ಮತ್ತು ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜನರು ಸಂರಕ್ಷಿಸಲು ಇದು ಸೂಕ್ತ ಸಮಯ ಎಂದು ಈ ಕುರಿತು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಹೇಳಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಹಾವಳಿಗೆ ನೂತನ ಮಸೂದೆಯ ಕಡಿವಾಣ: ಸಿಎಂ ಸಿದ್ದರಾಮಯ್ಯ
ನಮ್ಮ ಸಂಸ್ಥಾಪಕರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಎತ್ತಿಹಿಡಿಯುತ್ತೇವೆ. ಸಂವಿಧಾನವನ್ನು ರಕ್ಷಿಸಲು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿರಿ. ಇದು ನಾವು ನಮ್ಮ ಪೂರ್ವಜರಿಗೆ ಕೊಡುವ ನಿಜವಾದ ಗೌರವವಾಗಿದೆ. ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಮತ್ತು ಜಾತ್ಯತೀತರನ್ನು ಗೋಬೆಲ್ಸಿಯನ್ ಪ್ರಚಾರದ ಬಣ್ಣದಿಂದ ಕಳಂಕಗೊಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ಪ್ರತಿಯೊಂದು ಪವಿತ್ರ ತತ್ವವನ್ನು ಸರ್ವಾಧಿಕಾರಿ ಆಡಳಿತವು ತುಂಡುಗಳಾಗಿ ಚೂರುಚೂರು ಮಾಡುತ್ತಿದೆ. ಆದ್ದರಿಂದ, ನನ್ನ ಪ್ರೀತಿಯ ಸಹ ನಾಗರಿಕರೇ, ನಾವು ನಮ್ಮ ಸಂವಿಧಾನದ ಕಲ್ಪನೆಗಳು ಮತ್ತು ಆದರ್ಶಗಳನ್ನು ಸಂರಕ್ಷಿಸಲು ಇದು ಸೂಕ್ತ ಸಮಯವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ನೋಡಿ: ಬ್ಯಾಂಕ್ ರಾಬರಿ ಯಾರು ಹೊಣೆ? Janashakthi Media