ಹಾಸನ: ಹೇಮಾವತಿ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ಶನಿವಾರ ನಡೆದ ದುರ್ಘಟನೆಯಲ್ಲಿ, ಹೇಮಾವತಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಮೃತರನ್ನು ಕಲೇಶಪುರ ತಾಲೂಕಿನ ಕಾಟಳ್ಳಿ ಗ್ರಾಮದ ಪ್ರಕಾಶ್ (29) ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಭರತ್ (27) ಎಂದು ಗುರುತಿಸಲಾಗಿದೆ.

ಇದನ್ನು ಓದಿ:ಪ್ರತ್ಯೇಕತಾವಾದಿಗಳೊಂದಿಗೆ ಬಿಜೆಪಿ ಗುಪ್ತ ಮೈತ್ರಿ – ಎಡ ಕಾರ್ಯಕರ್ತರ ಮೇಲೆ ಹಲ್ಲೆ– ಕೊಲೆ- ಗೂಂಡಾಗಿರಿ

ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ನದಿಯಿಂದ ಯುವಕರ ಶವಗಳನ್ನು ಹೊರತೆಗೆದಿದ್ದಾರೆ. ಈ ಘಟನೆ ಸಂಬಂಧ ಸಕಲೇಶಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದುರ್ಘಟನೆಯು ಸ್ಥಳೀಯರಲ್ಲಿ ಆಘಾತವನ್ನುಂಟುಮಾಡಿದ್ದು, ನದಿಯಲ್ಲಿ ಈಜಲು ಹೋಗುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಅಗತ್ಯವಿದೆ.  ಸ್ಥಳೀಯ ಆಡಳಿತವು ಸಾರ್ವಜನಿಕರಿಗೆ ನದಿಗಳಲ್ಲಿ ಈಜಲು ಹೋಗುವಾಗ ಎಚ್ಚರಿಕೆಯಿಂದ ಇರಲು, ಮತ್ತು ಅಪರಿಚಿತ ಪ್ರದೇಶಗಳಲ್ಲಿ ಈಜುವುದನ್ನು ತಪ್ಪಿಸಲು ಸಲಹೆ ನೀಡಿದೆ.

ಇದನ್ನು ಓದಿ:ಊರೊಂದು ಬಸ್ ನಿಲ್ದಾಣ ಮೂರು

Donate Janashakthi Media

Leave a Reply

Your email address will not be published. Required fields are marked *