ಹಾಸನ: ಇತ್ತೀಚೆಗೆ ಸಕಲೇಶಪುರ ತಾಲೂಕಿನ ಬೈಕರವಳ್ಳಿಯಲ್ಲಿ ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪದ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆ ಸೇರಿದಂತೆ ಐವರನ್ನು ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಎಂ.ಎಸ್ ಮಾತನಾಡಿ, “ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಕಾಂತರಾಜ್ ನೀಡಿದ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಮಗುವಿನ ತಾಯಿ ಗಿರಿಜಾ ಅವರನ್ನು ಬಂಧಿಸಿದ್ದಾರೆ. ಆಶಾ ಕಾರ್ಯಕರ್ತೆ ಸುಮಿತ್ರಾ; ಮಗುವನ್ನು ಖರೀದಿಸಿದ ಮಹಿಳೆ ಉಷಾ; ಕಾಫಿ ಎಸ್ಟೇಟ್ ಮಾಲೀಕ ಸುಬ್ರಮಣಿ; ಮತ್ತು ಎಸ್ಟೇಟ್ ಉದ್ಯೋಗಿ ಶ್ರೀಕಾಂತ್ ಇತರ ಆರೋಪಿಗಳು” ಎಂದು ಅವರು ತಿಳಿಸಿದ್ದಾರೆ. ನವಜಾತ ಶಿಶು
ಇದನ್ನೂ ಓದಿ: ‘ಸೇವೆ ಖಾಯಂಗೊಳಿಸಿ’ | ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ
ಸಕಲೇಶಪುರ ತಾಲೂಕಿನ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಿರಿಜಾ ಅವರು ನವೆಂಬರ್ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮರುದಿನವೇ ಮಗುವನ್ನು ಚಿಕ್ಕಮಗಳೂರು ಮೂಲದ ಉಷಾ ಎಂಬುವವರಿಗೆ ಸುಮಿತ್ರಾ ಎಂಬುವವರ ಮೂಲಕ ಮಾರಾಟ ಮಾಡಿ ಡೀಲ್ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಮೊಹಮ್ಮದ್ ಸುಜೀತ ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಉಷಾಳನ್ನು ಚಿಕ್ಕಮಗಳೂರಿನಲ್ಲಿ ಪತ್ತೆ ಹಚ್ಚಿದ ಪೊಲೀಸರು ಆಕೆ ಹಾಗೂ ಮಗುವನ್ನು ಬುಧವಾರ ಹಾಸನಕ್ಕೆ ಕರೆತಂದಿದ್ದಾರೆ. ನಂತರ ಪೊಲೀಸರು ಮಗು ಮತ್ತು ತಾಯಿಯನ್ನು ಹಾಸನದ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ನವಜಾತ ಶಿಶು
ಗಿರಿಜಾ ಅವರು ಸಹ ಆರೋಪಿ ಸುಬ್ರಮಣಿ ಅವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ವಿಡಿಯೊ ನೋಡಿ: “ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ : ರಾಜಕೀಯ ಲಾಭದ ಹೋರಾಟ ನಿಲ್ಲಿಸಿ, ಆತನಿಗೆ ಮೊದಲು ಜಾಮೀನು ಕೊಡಿಸಿ”