ಹಾಸನ: ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಪರಸ್ಪರ ಹಲ್ಲೆ ಯತ್ನ ಆರೋಪ ಮಾಡಿರುವ ಘಟನೆಯು ಹಾಸನ ನಗರಸಭೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಸದಸ್ಯರ ನಡುವೆ ಭಾರೀ ಜಟಾಪಟಿ ನಡೆದಿದೆ.
ಸಾಮಾನ್ಯ ಸಭೆ ವೇಳೆ ಪರಸ್ಪರ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದ ಗಲಾಟೆಯು ವಿಕೋಪಕ್ಕೆ ತಿರುಗಿತ್ತು. ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿಲ್ಲ, ಚರ್ಚೆಮಾಡದೇ ನಿರ್ಣಯ ಅಂಗೀಕಾರ ಆಗುತ್ತಿದೆ ಎಂದು ಜೆಡಿಎಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷರ ಪೀಠದ ಎದುರು ನುಗ್ಗಿದ ಜೆಡಿಎಸ್ ಸದಸ್ಯರು ಆಕ್ರೋಶಗೊಂಡು ಕೈಕೈ ಮಿಲಾಯಿಸಿದರು. ಈ ವೇಳೆ ಜೆಡಿಎಸ್ ಬಿಜೆಪಿ ಸದಸ್ಯರ ನಡುವೆ ಭಾರೀ ಜಟಾಪಟಿ ನಡೆದಿದೆ.
ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರ ಧರಣಿ ನಡೆಸಿದ್ದಾರೆ. ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನು ಅಮಾನತು ಮಾಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.
ಪೌರಾಯುಕ್ತರ ಕಛೇರಿ ಎದುರು ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರ ಧರಣಿ ನಡೆಸಿದರು. ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನ ಅಮಾನತು ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಸಭಾಂಗಣದಲ್ಲಿ ಜೆಡಿಎಸ್ ಸದಸ್ಯರ ಧರಣಿ ನಡೆಸಿದರು. ಬಿಜೆಪಿ ಸದಸ್ಯರು ದುರ್ವರ್ತನೆ ತೋರಿದ್ದಾರೆ ಅವರ ವಿರುದ್ದ ಕ್ರಮಕೈಗೊಳ್ಳಿ ವಿನಾಕಾರಣ ಪದೇ ಪದೆ ಸಭೆ ಮುಂದೂಡುತ್ತಿದ್ದಾರೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು.
ಪ್ರಶ್ನೆ ಮಾಡಿದರೆ ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಎಂದು ಜೆಡಿಎಸ್ ಸದಸ್ಯರು ಆರೋಪ ಮಾಡಿದರು.