ಹಾಸನ: ಮನೆಯಲ್ಲಿ ಆಟವಾಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು ವಿನ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್ ಮೂಲಕ ಪುಟ್ಟ ಕಂದಮ್ಮನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಜೀರೋ
ಚಿಕ್ಕಮಗಳೂರು ತಾಲೂಕಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ಎಂಬುವರ ಒಂದುವರೆ ವರ್ಷದ ವಿಜಯ್ ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿರೆ ಮೆಟ್ಟಿಲಿನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಮಗುವನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾದ ಸಂದರ್ಭದಲ್ಲಿ ವೈದ್ಯರು ತಪಾಸಣೆ ನಡೆಸಿದ್ದಾ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ. ಬೆಂಗಳೂರಿಗೆ
ಇದನ್ನೂ ಓದಿ:ಹಾಸನ ಜಿಲ್ಲೆಯಲ್ಲಿ H3N2 ವೈರಸ್‌ಗೆ ರಾಜ್ಯದ ಮೊದಲ ಬಲಿ
ನಂತರ ಆಂಬುಲೆನ್ಸ್ ಚಾಲಕ ಪೋಷಕರಿಂದ ಯಾವುದೇ ಹಣ ಪಡೆಯದೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲು ಉಚಿತ ಸೇವೆ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಆಂಬುಲೆನ್ಸ್ ಚಾಲಕ ಮಧು ಮಾತನಾಡಿ, ನೆನ್ನೆ ಮಗುವನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್ ಬೇಕು ಎಂದು ಕರೆ ಬಂದ ಹಿನ್ನೆಲೆಯಲ್ಲಿ ತಾನು ಸ್ಥಳಕ್ಕೆ ಆಗಮಿಸಿ ವಿಚಾರಿಸಲಾಗಿ ಮಗುವಿನ ಪೋಷಕರು ತುಂಬಾ ಬಡವರು ಎಂದು ತಿಳಿಯಿತು. ಎ.ಕೆ.ಎಸ್ ಗ್ರೂಪ್ ಅವರ ಸಹಕಾರದೊಂದಿಗೆ ಮಗುವನ್ನು ಉಚಿತವಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದೇನೆ, ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎ.ಕೆ.ಎಸ್ ಗ್ರೂಪ್ ವತಿಯಿಂದ ಹಾಸನದಿಂದ ಬೆಂಗಳೂರಿನ ವರೆಗೆ ಸುಗಮ ಸಂಚಾರಕ್ಕೆ ರಸ್ತೆಯನ್ನು ಕ್ಲಿಯರ್ ಮಾಡಿಕೊಟ್ಟಿದ್ದು ಎರಡು ಗಂಟೆ ಒಳಗೆ ಬೆಂಗಳೂರು ತಲುಪಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಜೀರೋ
ವಿಡಿಯೋ ನೋಡಿ:ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media