ಹಸಿರು ಶ್ಯಾಲು ಹಾಕುತ್ತಾರೆ ಆದರೆ ರೈತ ನಾಯಕ ಅಲ್ಲ : ಸಿದ್ದರಾಮಯ್ಯ

ಬಸವ ಕಲ್ಯಾಣ : ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ಶ್ಯಾಲು ಹಾಕಿಕೊಂಡು ರೈತ ನಾಯಕ ಎಂದು ಹೇಳಿಕೊಂಡರೂ ಸಹ ಅವರಿಂದ ಯಾವ ಭರವಸೆಗಳು ಈಡೇರಿಸಲು ಸಾಧ್ಯವಾಗಿಲ್ಲ. ನಾನು ಭರವಸೆಗಳೇನೂ ಕೊಟ್ಟಿಲ್ಲ ಆದರೂ ಕೆಲಸ ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಮಾಲಾ ಬಿ.ನಾರಾಯಣರಾವ್‌ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ಓದಿ : ಮುಂದುವರೆದ ಸಾರಿಗೆ ನೌಕರರ ಮುಷ್ಕರ : ನಾಳೆಯೂ ಸ್ತಬ್ದವಾಗುತ್ತೆ ಸಾರ್ವಜನಿಕ ಸಾರಿಗೆ

ಬಹಿರಂಗ ಪ್ರಚಾರವನ್ನು ಉದ್ದೇಶಿ ಮಾತನಾಡಿದ ಸಿದ್ದರಾಮಯ್ಯ ʻʻಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು ಎನ್ನುವ ಹಾಗೆ ಜನರ ದುಡ್ಡನ್ನು ಜನರಿಗೆ ನೀಡಬೇಕಾದ್ದ ಕರ್ತವ್ಯ ಆಡಳಿತ ನಡೆಸುವವರದ್ದು. ಇವರಪ್ಪ ಮನೆಯಿಂದ ಕೊಡ್ತಾರ ದುಡ್ಡು, ನಾನು ಕೊಟ್ರು ಅಷ್ಟೇ, ನೀವು ಕೊಟ್ಟರು ಅಷ್ಟೇ, ಜನ್ರ ದುಡ್ಡು, ಜನರಿಗೆ ಕೊಡಬೇಕಲ್ಲವೇ.

ಜನರಿಗೆ ನೀಡುವ ಅಕ್ಕಿ ಕಡಿತ ಮಾಡಿದ್ದಾರೆ. ಅದೇಗೆ ಜನರಿಗೆ ಮುಖ ತೋರಿಸುತ್ತಾರೋ, ಆಡಳಿತದಲ್ಲಿ ಜಾತಿ ಮುಖ್ಯವಲ್ಲ ಕೆಲಸಗಳು ಮುಖ್ಯವಾಗಬೇಕು.

ನಾವು ಅಧಿಕಾರಕ್ಕೆ ಬಂದಲ್ಲಿ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ಭತ್ಯೆ ಕೊಡುತ್ತೇವೆ. ಈಗ ಕೊಡುತ್ತಿರುವ ೫ ಕೆ.ಜಿ. ಅಕ್ಕಿಯ ಬದಲಾಗಿ ೧೦ ಕೆ.ಜಿ. ಅಕ್ಕಿಯನ್ನು ನೀಡುತ್ತೇವೆ ಎಂದು ಘೋಷಣೆ ಮಾಡಿದರು.

ಇದನ್ನು ಓದಿ : ಉಪಚುನಾವಣೆ – ಲೆಕ್ಕಾಚಾರ ಹೇಗಿದೆ? ‘ಸಿಡಿ’ಯುತ್ತಾ ಅಸ್ತ್ರ, ಜಾತಿ, ಹಣದ್ದೆ ಕಾರ್ಬಾರು

ಹೈದರಾಬಾದ್ ಕರ್ನಾಟಕ : ಹೈದರಾಬಾದ್‌ ಕರ್ನಾಟಕ್ಕೆ ವಿಶೇಷ ಸ್ಥಾನಮಾನಕ್ಕೆ ಬಿಜೆಪಿ ಎಲ್‌.ಕೆ.ಅಡ್ವಾಣಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ಪತ್ರ ಬರೆದಿದ್ದರೂ ಆದರೂ ಆ ಬಗ್ಗೆ ಜಾರಿಮಾಡಲಿಲ್ಲ. ಆದರೆ ಕಾಂಗ್ರೆಸ್‌ ಪಕ್ಷ ಹೈದರಾಬಾದ್‌ ಕರ್ನಾಟಕ್ಕೆ 371 ಜೆ ಸ್ಥಾನಮಾನ ನೀಡಿತು. ಮನಮೋಹನ್‌ ಸಿಂಗ್‌ ಪ್ರಧಾನಮಂತ್ರಿಯಾಗಿದ್ದಾಗ ಹೈದರಾಬಾದ್‌ ಕರ್ನಾಟಕ್ಕೆ 371 ಜೆ ಕಲಂ ಜಾರಿಗೆ ಬಂದಿದ್ದು. ಬಿಜೆಪಿ ನಾಯಕರು ಇದರ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಕಲಂ ಜಾರಿಯೆ ಬಗ್ಗೆ ಯಾರೇ ಬಂದರೂ ಅವರೊಂದಿಗೆ ಬಹಿರಂಗ ಚರ್ಚೆ ಸಿದ್ದ ಎಂದು ಸವಾಲ್‌ ಹಾಕಿದರು. ಬಿಜೆಪಿಯಿಂದ ಕಲ್ಯಾಣ ಕರ್ನಾಟಕ ಎಂಬ ಹೆಸರು ಬಂತು ಅಷ್ಟಕ್ಕೆ ನಾವು ಸಂತೋಷ ಪಡಬೇಕಾಗಿದೆ.

ನಕಲಿ ಮತದಾರರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪತ್ನಿ ದಂಡಾಧಿಕಾರಿ ಆಗಿದ್ದರು. 18 ಸಾವಿರ ಕಳ್ಳ ಮತದಾರರು ಇದ್ದರೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಕಾಂಗ್ರೆಸ್‌ ಕಾರ್ಯಕರಿಗೆ ಒಮ್ಮೆ ಪರಿಶೀಲನೆ ಮಾಡಿ ಎಂದು ಹೇಳಿದರು. ಶರಣು ಸಲಗರ ಹಣ ಇದೆ. ಅವರ ಬಳಿ ನೂರು ಕೋಟಿ ಇದೆ. ಮಾಲಾ ಅವರ ಬಳಿ ಹಣ ಇಲ್ಲ. ಅವರಿಂದ ಹಣ ಪಡೆದು ಮಾಲಾ ಅವರಿಗೆ ಮತ ನೀಡಿ ಎಂದು ಸಭಿಕರಿಗೆ ಆಗ್ರಹಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅಭಿವೃದ್ಧಿಯ ಕಡೆ ಗಮನ ನೀಡಿದ್ದೆ. ಆಗ ಅನುಭವ ಮಂಟಪ ಯೋಜನೆ ಘೋಷಣೆ ಮಾಡಿದ್ದೆ. ಅದಕ್ಕಾಗಿ ಒಂದು ಸಮಿತಿಯನ್ನು ನೇಮಕ ಮಾಡಿ ಯೋಜನೆಗಳನ್ನು ಸಿದ್ಧಪಡಿಸಲು ಸೂಚಿಸಿದ್ದೆ. ಅಷ್ಟರಲ್ಲಿ ಚುನಾವಣಾ ಬಂತು. ಚುನಾವಣೆ ನಂತರ ಸಮ್ಮಿಶ್ರ ಸರಕಾರ ಅಧಿಕಾರವಧಿಯಲ್ಲಿ ನಾರಾಯಣರಾವ್‌ ಅವರು ಅನುಭವ ಮಂಟಪದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆ ಪ್ರಯತ್ನದಲ್ಲಿ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ರಹೀಂ ಖಾನ್ , ನಾರಾಯಣರಾವ್ ಜೊತೆಯಾಗಿದ್ದರು.

ಇದನ್ನು ಓದಿ : ಪಶ್ಚಿಮ ಬಂಗಾಳ : ಬಿರುಸಿನಿಂದ ಸಾಗಿದೆ ಚುನಾವಣಾ ಪ್ರಚಾರ

ದಿವಂಗತ ನಾರಾಯಣರಾವ್‌ ಒಳ್ಳೆಯ ಹೋರಾಟಗಾರರಾಗಿದ್ದರು. ಕೋವಿಡ್‌ ಕಾರಣದಿಂದ ನಿಧನರಾಗಿದ್ದು ನನ್ನ ಆಪ್ತವಲಯದವರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ನಾರಾಯಣರಾವ್‌ ನಿಧನರಾಗಿದ್ದು ನನಗೆ ನಂಬಲಾಗಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ಅವರಿಗೆ ಪಕ್ಷವು ಅಭ್ಯರ್ಥಿ ಮಾಡುವ ಬಗ್ಗೆ ನನ್ನ ಹಾಗೂ ಧರ್ಮಸಿಂಗ್‌ ಅವರ ಪಾತ್ರವಿತ್ತು. ಅವರ ಒಳ್ಳೆಯ ಕೆಲಸಗಳನ್ನು ನೋಡಿ ಜನತೆ ಶಾಸಕರನ್ನಾಗಿ ಮಾಡಿದ್ದರು. ಮುಂದಿನ ಚುನಾವಣೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರು. ಆವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಈಗ ಉಪ ಚುನಾವಣೆ ಎದುರಾಗಿದೆ. ಪಕ್ಷದಲ್ಲಿ ಟಿಕೇಟ್‌ ಆಕಾಂಕ್ಷಿಗಳೂ ಸಾಕಷ್ಟು ಜನ ಇದ್ದರೂ ಸಹ ನಾರಾಯಣರಾವ್‌ ಪತ್ನಿಯವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಮಾಡಿ ಚುನಾವಣಾಗೆ ಇಳಿಸಿದೆ. ನಾರಾಯಣರಾವ್‌ ಅವರ ಸ್ಥಾನವನ್ನು ಭರ್ತಿ ಮಾಡಬೇಕಿದೆ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಿಯಾಂಕ ಖರ್ಗೆ, ರಹೀಂ ಖಾನ್, ರಾಜಶೇಖರ ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಬೈರತಿ ಸುರೇಶ್ ಜೊತೆಗಿದ್ದರು.

Donate Janashakthi Media

Leave a Reply

Your email address will not be published. Required fields are marked *