ಹರಿಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಬಂಧನ

ಚಂಡೀಗಢ: ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ನೀಡಿದ ಆರೋಪದಡಿ ಹರಿಯಾಣದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ರನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೇ 16ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಹರಿಯಾಣ

ಪೊಲೀಸರ ಮುಂದೆ ಎಲ್ಲ ವಿಚಾರಗಳನ್ನು ಹೇಳಿರುವ ಜ್ಯೋತಿ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜ್ಯೋತಿ ಅವರನ್ನು ಐದು ದಿನಗಳವರೆಗೆ ಪೊಲೀಸ್‌ ವಶಕ್ಕೆ ನೀಡಿದೆ.

ಇದನ್ನೂ ಓದಿ: ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಟರ್ಕಿ ಕಂಪನಿಯ ಸೇವೆ ಸ್ಥಗಿತ:’ಸಿಂಧೂರ’ ನಂತರ ಟರ್ಕಿ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ

ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಸಿಬ್ಬಂದಿ ಎಹ್ಸಾನ್‌ ಉರ್‌ ರಹೀಮ್‌ ಅಲಿಯಾಸ್‌ ಡ್ಯಾನಿಷ್‌ ಅವರೊಂದಿಗೆ ಜ್ಯೋತಿ ಸಂಪರ್ಕ ಹೊಂದಿದ್ದರು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್‌ ಅವರನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು.

ಜ್ಯೋತಿ ಯಾರು?

‘ಟ್ರಾವೆಲ್‌ ವಿತ್‌ ಜ್ಯೋ’ ಎನ್ನುವ ಯೂಟ್ಯೂಬ್‌ ಚಾನೆಲ್‌ ಮೂಲಕ ಪ್ರವಾಸದ ವಿಡಿಯೊಗಳನ್ನು ಮಾಡುತ್ತಿದ್ದ ಜ್ಯೋತಿ ಅವರಿಗೆ 3.77 ಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 1.33 ಲಕ್ಷ ಚಂದಾದಾರರಿದ್ದರು. ಪಾಕಿಸ್ತಾನದ ಪರವಾದ ಅಭಿಪ್ರಾಯ ಮೂಡಿಸುವಂತೆ ಜ್ಯೋತಿ ಅವರು ವಿಡಿಯೊಗಳನ್ನು ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.

‘ಇಂಡಿಯನ್‌ ಗರ್ಲ್‌ ಇನ್‌ ಪಾಕಿಸ್ತಾನ್‌’, ‘ಇಂಡಿಯನ್‌ ಗರ್ಲ್‌ ಎಕ್ಸ್‌ಪ್ಲೋರಿಂಗ್‌ ಪಾಕಿಸ್ತಾನ್‌’, ‘ಇಂಡಿಯನ್‌ ಗರ್ಲ್‌ ಅಟ್‌ ಕಟಾಸ್‌ ರಾಜ್ ಟೆಂಪಲ್‌’ ಮತ್ತು ‘ಇಂಡಿಯನ್‌ ಗರ್ಲ್‌ ಲೆಕ್ಸುರಿ ಬಸ್‌ ಇನ್‌ ಪಾಕಿಸ್ತಾನ್‌’ ಹೆಸರಿನ ವಿಡಿಯೊಗಳನ್ನು ಮಾಡಿದ್ದಾರೆ. ಈವರೆಗೆ ಜ್ಯೋತಿ ಅವರು ಸುಮಾರು 487 ವಿಡಿಯೊಗಳನ್ನು ಮಾಡಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ 158|‌ ಹಲವು ಸಿನಿಮಾಗಳ ಪಕ್ಷಿನೋಟ |ಮ. ಶ್ರೀ. ಮುರಳಿಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *