ನುಹ್‌ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರ ಪಲಾಯನ:ಹೂಡಾ

ಚಂಡೀಗಢ: ಹರಿಯಾಣ ಸರ್ಕಾರವು ನುಹ್‌ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ  ಪಲಾಯನ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಆರೋಪಿಸಿದ್ದು, ಘಟನೆ ಕುರಿತು ಬಿಜೆಪಿ, ಜೆಜೆಪಿ ಸರ್ಕಾರವು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳವಲ್ಲಿ ವಿಫಲವಾಗಿದೆ . ಆದರೆ ಈಗ ಘಟನಯ ನಂತರದ ನ್ಯಾಯಾಂಗ ತನಿಖೆಯಿಂದ ಸರ್ಕಾರವು ಏಕೆ ಓಡಿ ಹೋಗುತ್ತಿದೆ ಎಂದು ಹರಿಯಾಣ ವಿಧಾನಸಭಯ ವಿರೋಧ ಪಕ್ಷದ ನಾಯಕ ಹೂಡಾ ಪ್ರಶ್ನಿಸಿದ್ದಾರೆ.

ರಾಜ್ಯ ವಿಧಾನಸಭೆಯ ಮುಂಬರುವ ಮುಂಗಾರು ಅಧಿವೇಶನದಲ್ಲಿ ತಮ್ಮ ಕಾಂಗ್ರೆಸ್‌ ಪಕ್ಷವು  ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪ್ರವಾಹ ಸಮಸ್ಯೆಗಳ ಕುರಿತು ನಿಲುವಳಿ ಸೂಚನೆ ಮಂಡಿಸಲಿದೆ ಎಂದು ಹೂಡಾ ತಿಳಿಸಿದ್ದಾರೆ. ಹರಿಯಾಣ ವಿಧಾನಸಭೆಯ ಮುಂಗಾರು ಅಧಿವೇಶನ ಆಗಸ್ಟ್‌ 25ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಹರಿಯಾಣ ಹಿಂಸಾಚಾರ: 44 ಎಫ್‌ಐಆರ್‌ಗಳು ಮತ್ತು 139 ಬಂಧನ

ಗೃಹ ಸಚಿವರ ಬಳಿ ಸಿಐಡಿ ಇಲಾಖೆ ಇಲ್ಲದಿರುವುದು ಅಚ್ಚರಿ ಮೂಡಿಸಿದೆ,ಸಿಐಡಿ ಇಲ್ಲದೆ ಗೃಹ ಇಲಾಖೆ ಕಣ್ಣು ಕಿವಿ ಇಲ್ಲದ ಸಚಿವಾಲಯವಾಗಿ ಮಾರ್ಪಟ್ಟಿದ. ಇದರಿಂದ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಸರ್ಕಾರದೊಳಗ ಸಮನ್ವಯದ ಕೊರತೆ ಇದೆ ಎಂದು ಹೂಡಾ ವಾಗ್ದಾಳಿ ನಡೆಸಿದ್ದಾರೆ

ಜುಲೈ 31ರಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ವೇಳ ಪ್ರಾರಂಭವಾದ ಕೋಮುಗಲಭೆಯು ತೀರ್ವ ಹಿಂಸಾಚಾರ ರೂಪಕ್ಕೆ ತಿರುಗಿತ್ತು ಇದು ಪಕ್ಕದ ಗುರುಗ್ರಾಮ ಜಿಲ್ಲೆಗೂ ಹರಿಡಿತ್ತು.ಈ  ಘಟನೆಯಲ್ಲಿ  7 ಮಂದಿ ಸಾವಿಗೀಡಾಗಿ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *