ಹರ್ದೀಪ್ ಸಿಂಗ್ ಪುರಿಯವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕು – ಸಿಪಿಐ(ಎಂ) ಆಗ್ರಹ

ನವದೆಹಲಿ: ಎಪ್ಸ್ಟೀನ್ ಕಡತಗಳ ಅತ್ಯಂತ ಅಸಹ್ಯಕರ ಮತ್ತು ಹೇಯಕರ ವಿಷಯವು ಪ್ರತಿದಿನವೂ ಪ್ರಕಟಗೊಳ್ಳುತ್ತಿದೆ. ಯುಎಸ್‍ ನ ನ್ಯಾಯ ಇಲಾಖೆ ಮತ್ತು ಟ್ರಂಪ್ ಆಡಳಿತ ಈ ಪ್ರಕರಣವನ್ನು ಮುಚ್ಚಿಹಾಕಲು ಭಾರೀ ಪ್ರಯತ್ನ ನಡೆಸುತ್ತಿದ್ದರೂ, ಸತ್ಯಸಂಗತಿಗಳು ಹೊರಬರುತ್ತಿವೆ. ಹರ್ದೀಪ್

ರಾಜಕಾರಣಿಗಳು, ಹಣಕಾಸು ದೊರೆಗಳು, ತಂತ್ರಜ್ಞಾನ ದೈತ್ಯರು ಮತ್ತು ಪ್ರಸಿದ್ಧ ಅಧಿಕಾರಸ್ಥ ಗಣ್ಯರನ್ನು ಒಳಗೊಂಡ ಕ್ರಿಮಿನಲ್ ಜಾಲದ ಆಕ್ರಮಣಕಾರಿ ಅಪರಾಧ ಸ್ವರೂಪದ ಬಗ್ಗೆ ಮತ್ತು ಭಂಡತನದ ಬಗ್ಗೆ ಅದಕ್ಕೆ ಅನುಕೂಲ ಮಾಡಿ ಕೊಡುತ್ತಿದ್ದ ಮುಖ್ಯಸ್ಥ ಈ ಎಪ್ಸ್ಟೀನ್‍ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ.

ಹಲವಾರು ದೇಶಗಳಲ್ಲಿ ನಿರ್ದಿಷ್ಟ  ಕಾನೂನು ಮತ್ತು ಶಿಕ್ಷೆಯ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ರಾಜಕುಮಾರ ಆಂಡ್ರ್ಯೂನ ಬಿರುದುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಆತನನ್ನು ಯುಕೆಯಲ್ಲಿ ಬಂಧಿಸಲಾಗಿದೆ. ಇತರ ಹಲವಾರು ಜನರನ್ನು ಆಯಾ ದೇಶಗಳಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಬಲವಂತ ಪಡಿಸಲಾಗಿದೆ.

ಇದನ್ನೂ ಓದಿ: 23 ಕ್ಯಾಂಪಸ್‌’ಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಿ ಹರ್ದೀಪ್ ಸಿಂಗ್ ಪುರಿ ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಇದರಲ್ಲಿ ಭಾಗಿಯಾಗಿರುವುದಕ್ಕೆ ಸ್ಪಷ್ಟ ಪುರಾವೆಗಳಿದ್ದರೂ, ಒಂದು ವಿವರಣೆಯನ್ನು ಕೊಡುವಂತೆ ಮಾಡುವ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ  ಯಾವುದೇ ಪ್ರಯತ್ನವನ್ನು ಒಕ್ಕೂಟ ಸರ್ಕಾರ ಮಾಡುತ್ತಿಲ್ಲ.

ಅದು ಸಂಸತ್ತಿನ ಸದನದಲ್ಲಿ ಎಪ್ಸ್ಟೀನ್ ಕಡತಗಳ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ಲಭ್ಯವಿರುವ ಪುರಾವೆಗಳ ನಡುವೆಯೂ, ಹರ್ದೀಪ್ ಸಿಂಗ್ ಪುರಿ ತಮ್ಮದೇ ಆದ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ. ಆದರೂ, ಅವರನ್ನು ವಜಾಗೊಳಿಸುವ ಬದಲು, ಎಲ್ಲಾ ರೀತಿಯ ವಂಚಕ ವಿಧಾನಗಳಿಂದ ರಕ್ಷಿಸಲಾಗುತ್ತಿದೆ.

ಈ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಮುಜುಗರ ಮತ್ತು ಅವಮಾನವನ್ನು ಎದುರಿಸಲು ಹರ್ದೀಪ್ ಸಿಂಗ್ ಪುರಿ ಅವರನ್ನು ಕೇಂದ್ರ ಮಂತ್ರಿಮಂಡಲದಿಂದ ವಜಾಗೊಳಿಸಬೇಕೆಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಪ್ರಧಾನ ಮಂತ್ರಿಗಳನ್ನು ಬಲವಾಗಿ  ಆಗ್ರಹಿಸಿದೆ.

ಇದನ್ನೂ ನೋಡಿ: “ಪಶುಗಳು ಮೇವು ತಿನ್ನುವುದಿಲ್ಲವೇ? ಕಾರಣಗಳೇನು?” | ಡಾ. ಎನ್.‌ ಬಿ ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *