ತಿಪಟೂರು : ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಾಳಲಾರದೆ ತಿಪಟೂರಿನ ಅರಳಗುಪ್ಪೆ ಗ್ರಾಮದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೀವ್ರ ಬರಗಾಲ ಹಿನ್ನೆಲೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ ಸ್ವಲ್ಪಕಾಲಾವಕಾಶ ನೀಡಿ ಎಂದು ಮನವಿ ಮಾಡಿದರೂ, ಹಣ ಕಟ್ಟುವಂತೆ ಒತ್ತಡ ಹೇರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಯಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಈ ಅನ್ಯಾಯದ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಇದನ್ನು ಓದಿ : ಕಾಶ್ಮೀರದ 3 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ; ಜನರ ಹೃದಯ ಗೆಲ್ಲಲು ಸಾಧ್ಯವಾಗಲಿಲ್ಲ: ಒಮರ್ ಅಬ್ದುಲ್ಲಾ
ಸ್ಥಳೀಯರು ಜನಶಕ್ತಿ ಮೀಡಿಯ ಜೊತೆ ಮಾತನಾಡಿ ಈ ಘಟನೆಯನ್ನು ಖಂಡಿಸಿದ್ದಾರೆ. ಅರಳಗುಪ್ಪೆ ಗ್ರಾಮದಲ್ಲಿ 33 ಮೈಕ್ರೋ ಫೈನಾನ್ಸ್ ಗಳಿವೆ. ಒಬ್ಬ ಮಹಿಳೆ 17 ರಿಂದ 20 ಫೈನಾನ್ಸ್ ಗಳಲ್ಲಿ 10 ರಿಂದ 12 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.
ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಎಷ್ಟರ ಮಟ್ಟಿಗೆ ಇದೆ ಎಂದರೆ ಈ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 9 ಜನ ಊರು ಬಿಟ್ಟುಹೋಗಿದ್ದಾರೆ ಎಂದು ಗ್ರಾಮಸ್ಥರು ಕಿರುಕುಳದ ವಿವರಗಳನ್ನುಬಿಚ್ಚಿಟ್ಟಿದ್ದಾರೆ. ಬರಗಾಲವಿದೆ., ಕೆಲಸವಿಲ್ಲ, ನೀರಿಲ್ಲ, ತೆಂಗು ಮತ್ತಿತರ ಬೆಳೆಗಳು ಒಣಗುತ್ತಿವೆ. ಕೂಲಿ ಕೆಲಸವೂ ಇಲ್ಲ.
ಬಡವರ ಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು. ಸರಕಾರ ಈ ಬಗ್ಗೆ ತಕ್ಷಣವೇ ಗಮನ ಹರಿಸಿ ಸಹಾಯಕ್ಕೆ ಧಾವಿಸದಿದ್ದರೆ ನಮಗೂ ಅದೊಂದೇ ದಾರಿ ಉಳಿದಿದೆ ಎಂದು ಇತರ ಮಹಿಳೆಯರು ತಮ್ಮ ವೇದನೆಯನ್ನು ಹಂಚಿಕೊಂಡಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯ ನಿಯೋಗದ ವರದಿ ಈ ಕೆಳಗಿನಂತಿದೆ
ತುಮಕೂರು ಜಿಲ್ಲೆ ತಿಪಟೂರು ತಾಲೂಕು ಅರಳಗುಪ್ಪೆ ಗ್ರಾಮ ಭಾಗ್ಯಮ್ಮ ಎಂಬ ಮಹಿಳೆ mfi ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಡಿದ್ದಾರೆ .
ಭಾಗ್ಯಮ್ಮ 17 mfi.ಸಂಸ್ಥೆಗಳಿಂದ ಸಾಲ ಪಡೆದು 9 ಲಕ್ಷದ 50 ಸಾವಿರ ಸಾಲ ಮಾಡಿದ್ದಾರೆ ಆತ್ಮಹತ್ಯೆ ಮಾಡಿಕೊಳ್ಳವ ಹಿಂದಿನ ದಿನ ಬೇರೆ ಊರಿಗೆ ಹೋಗಿರುತ್ತಾರೆ. ಅಷ್ಟೋತ್ತಿಗೆ .mfi ಸಂಘದವರು ಸಾಲ ಕಟ್ಟಿಲ್ಲ ಎಂದು ಮೂರು ಬಾರಿ ಮನೆ ಹತ್ತಿರ ಬಂದು ಹೋಗಿರುತ್ತಾರೆ .ಮತ್ತು ಬಾಯಿಗೆ ಬಂದಂಗೆ ಮಾತನಾಡಿ ಹೋಗಿರುತ್ತಾರೆ ಊರಿಗೆ ಬಂದ ವಿಚಾರ ತಿಳಿದ ಮೇಲೆ MFI ಸಂಸ್ಥೆಯವರು ಮನೆಯ ಹತ್ತಿರ ಬಂದಿದ್ದಾರೆ ಎಂದು ಗೋತ್ತಾಗಿ ಮತ್ತೆ ಬೆಳಿಗ್ಗೆ ಬರ್ತಾರೆ ಸಾಲ ಕಟ್ಟಿಲ್ಲ ಅಂದರೆ ಮರ್ಯಾದೆ ಹೋಗುತ್ತೆ ಎಂದು ಊರೆಲ್ಲಾ ಅಲೆದಾಡಿದ್ದಾರೆ ಅವರಿವ ಸಾಲ ಕೇಳಿದ್ದಾರೆ ಎಲ್ಲೂ ಸಾಲ ಸಿಕ್ಕಿಲ್ಲದಿದ್ದಾಗ ಮನೆಗೆ ಬಂದವಳೆ ಮರ್ಯಾದೆಗೆ ಹೆದುರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಈ ಹಳ್ಳಿಯಲ್ಲಿ 33 MFI ಸಂಸ್ಥೆ ಗಳು ಇದ್ದು ಒಬ್ಬ ಮಹಿಳೆ 17 ರಿಂದ 20 ಸಂಸ್ಥೆಯಲ್ಲಿ ಸಾಲ ಪಡೆದಿರುತ್ತಾರೆ ಕನಿಷ್ಠ ಒಬ್ಬ ಮಹಿಳೆ 10 ರಿಂದ 12 ಲಕ್ಷ ಸಾಲ ಪಡೆದಿರುತ್ತಾರೆ .
ಒಂದು ಸಂಘದ ಸಾಲ ತೀರಿಸಲು ಇನ್ನೊಂದು ಸಂಘದಲ್ಲಿ ಸಾಲ ಪಡೆಯುವುದು ಮತ್ತುಕೃಷಿ ,ಆರೋಗ್ಯ , ಶಿಕ್ಷಣ , ಮದುವೆ , ಮನೆ ರಿಪೇರಿ . ಆಹಾರ ಹಬ್ಬ ಹರಿದಿನಗಳಿಗೆ ಆಡು ಕುರಿ ಹಸು ಖರೀದಿಸಲು ಬೋರ್ ವೆಲ್ ಕೊರೆಸುವುದಕ್ಕೆ ಸಾಲ ಮಾಡಿರುತ್ತಾರೆ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳಿಸುತ್ತಿದ್ದಾರೆ ಧನ ಕರು ಹಾಗೂ ಆಡು, ಕುರಿ ಮಾರಟ ಮಾಡಿ ಸಾಲ ಕಟ್ಟಿದ್ದಾರೆ ಅಂದರು ಸಾಲ ತೀರಿಲ್ಲ .
ಇಬ್ಬರು ಆತ್ಮಹತ್ಯೆ ಮಾಡಿಕೊಡಿದ್ದಾರೆ . 9 ಜನ ಊರು ಬಿಟ್ಟು ಹೋಗಿದ್ದಾರೆ ಸಾಲಕ್ಕೆ ಹೆದರಿ .ಬರಗಾಲದಿಂದಗಿ ಕೂಲಿ ಇಲ್ಲ ಬೋರ್ ವೆಲ್ ನೀರು ಬರ್ತಿಲ್ಲ ತೆಂಗಿನ ಗಿಡ ಒಣಗಿ ಹೋಗಿದೆ ಕೊಬ್ಬರಿಗೆ ಬೆಲೆ ಇಲ್ಲ ಆಹಾರ ಪದಾರ್ಥಗಳನ್ನು ಪಡೆಯಲು ಸಾಲ ಮಾಡಬೇಕಾಗಿದೆ ಸಾಲದಿಂದ ಮುಕ್ತಿಗೊಳಿಸಿ ಎಂದು ಮಹಿಳೆಯರು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಇಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಅನ್ನುತ್ತಿದ್ದಾರೆ
ಇದನ್ನು ನೋಡಿ : ಲೋಕಸಭಾ ಚುನಾವಣೆ : ಹಣ ಹಂಚುವವರನ್ನು ಸೋಲಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ