ಹರಕೆ ತೀರಿಸಲು ಸರಕಾರದ ದುಡ್ಡು ಬಳಸಿದ ಶಾಸಕ!

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಫಲ್ಗುಣಿಯ ಶ್ರೀಕಲಾನಾಥೇಶ್ವರ ದೇವಸ್ಥಾನಕ್ಕೆ ಸುಸಜ್ಜಿತ ರಥವನ್ನು ಮಾಡಿಸಿಕೊಡುವುದಾಗಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಹರಕೆ ಹೊತ್ತಿದ್ದರು.

ದೇವರ ಮೇಲೆ ನಂಬಿಕೆ ಇಟ್ಟು, ಪ್ರೀತಿ ಪಾತ್ರರ ಹೆಸರಲ್ಲಿ ಹರಕೆ ಹೊರುವುದು ನಮ್ಮಲ್ಲಿ ಸರ್ವೆಸಾಮಾನ್ಯ. ಹರಕೆ ಈಡೇರಿದಾಗ ಸ್ವಂತ ದುಡ್ಡಿನಲ್ಲಿ ಹರಕೆಯನ್ನು ತಿರಿಸುವುದು ವಾಡಿಕೆ. ಆದರೆ ಶಾಸಕರಾದವರು ಸರಕಾರದ ದುಡ್ಡಲ್ಲಿ ಹರಕೆ ತೀರಿಸುವ ಯೋಜನೆ!? ಒಂದಿದೆ ಎಂಬುದು ಈಗ ಹೊರಬಿದ್ದಿದೆ.!!?

ದೇವಸ್ಥಾನ ಜೀರ್ಣೋದ್ದಾರ, ಐತಿಹಾಸಿಕ ಸ್ಥಳಗಳನ್ನು ಉನ್ನತೀಕರಿಸುವುದಕ್ಕಾಗಿ ಹಣ ಬಿಡುಗಡೆ ಮಾಡಿದ್ದರೆ ಅದನ್ನು ಒಪ್ಪಬಹುದಿತ್ತು. ಯಾಕೆಂದರೆ ನಮ್ಮ ಸರಕಾರಗಳು ದೇವಸ್ಥಾನಕ್ಕೆ ಯಥೇಚ್ಛವಾಗಿ ಹಣ ಬಿಡುಗಡೆ ಮಾಡುತ್ತವೆ. ದೇವಸ್ಥಾನಕ್ಕೆ ನೀಡುವ ಹಣದಲ್ಲಿ 2% ಹಣವನ್ನು ಸರಕಾರಿ ಶಾಲೆಗೆ ನೀಡಿದ್ದರೆ ಸರಕಾರಿ ಶಾಲೆಗಳು ಬಲಗೊಂಡಿರುತ್ತಿದ್ದವು. ಈಗ ವಿಷಯಕ್ಕೆ ಬರುವುದಾದರೆ ಶಾಸಕರು 2019-20 ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರವೊಂದನ್ನು ಬರೆಯುತ್ತಾರೆ.

ಪತ್ರದ ಸಾರಾಂಶ ಈ ರೀತಿ ಇದೆ…….

“ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಪಲ್ಗುಣಿ ಗ್ರಾಮದಲ್ಲಿ ಶ್ರೀ ಕಲಾನಾಥೇಶ್ವರ ದೇವಸ್ಥಾನಕ್ಕೆ ಮರದ ರಥವನ್ನು ಮಾಡಿಸಿ ಕೊಡುವುದಾಗಿ
ಹಾಗೂ ಬೆಟಗೇರಿ ಗ್ರಾಮದ ಶ್ರೀ ಕಾಲಬೈರವೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಹಣ ನೀಡುವುದಾಗಿ ಹರಕೆ ಹೊತ್ತಿದ್ದೇನೆ ಹಾಗಾಗಿ ತಾವೂ ಮುಜರಾಯಿ ಸಚಿವರಿಗೆ ಸೂಚಿಸಿ 35 ಲಕ್ಷ ರೂ ಅನುದಾನ ನೀಡಬೇಕು ಎಂದು ಪತ್ರ ಬರೆದಿದ್ದರು.

ಇವರ ಪತ್ರವನ್ನು ಮನ್ನಿಸಿ ಯಡಿಯೂರಪ್ಪನವರು ಜನವರಿ 13 ರಂದು ಕಂದಾಯ ಇಲಾಖೆಗೆ ಪತ್ರ ಬರೆದು ವಿಶೇಷ ಪ್ರಕರಕ ಎಂದು ಪರಿಗಣಿಸಿ 25 ಲಕ್ಷ ರೂ ಹಣವನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಸ್ವತಃ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮ ಫೆಸ್ಬುಕ್ ಖಾತೆಯಲ್ಲಿ ಹಣ ಬಿಡುಗಡೆ ಮಾಡಿದ ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸಿರುವ ಪೋಸ್ಟ್ ಹಾಕಿ ಸಂಭ್ರಮಿಸಿದ್ದಾರೆ.

ಶಾಸಕ ಮತ್ತು ಮುಖ್ಯಮಂತ್ರಿಗಳ ಈ ನಿರ್ಧಾರ ಎಷ್ಟು ಸರಿ. ಕೊರೊನಾ ಹಾಗೂ ಲಾಕ್ಡೌನ್ ಸಂಕಷ್ಟದಿಂದ ಬಳಲಿದ ಕುಟುಂಬಕ್ಕೆ, ಸಮುದಾಯಕ್ಕೆ ಘೋಷಿಸಿದ ಹಣ ಬಹುತೇಕರ ಕೈ ಸೇರಿಲ್ಲ. ಅನೇಕ ಸಾರ್ವಜನಿಕ ಅಭಿವೃದ್ಧಿ ಕೆಲಸಗಳು ಆರ್ಥಿಕ ಕೊರತೆಯ ನೆಪವೋಡ್ಡಿ ಸ್ಥಗಿತಗೊಂಡ ಪ್ರಕರಣಗಳು ಸಾಕಷ್ಟು ಇವೆ. ಶಾಸಕರ ಕ್ಷೇತ್ರದಲ್ಲಿಯೇ ಅತೀವೃಷ್ಠಿ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಭತ್ತದ ಬೆಳೆ ಹಾಳಾಗಿದೆ. ರೈತರಿಗೆ ಪರಿಹಾರ ನೀಡುವುದು ಬದಿಗರಲಿ, ಧೈರ್ಯ ಕೊಡುವ ಕಾರ್ಯವನ್ನು ಎಂ.ಪಿ ಕುಮಾರಸ್ವಾಮಿ ಮಾಡಿಲ್ಲ

ಅವರ ಪೋಸ್ಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ ನನ್ನ ಹರಕೆ ತೀರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಹರಕೆಯನ್ನು ತೀರಿಸುವುದಕ್ಕಾಗಿ ಸರಕಾರ ದುಡ್ಡು ಕೊಡುವುದಾದರೆ ಹರಕೆ ಹೊರುವವರ ಸಂಖ್ಯೆ ಹೆಚ್ಚಾಗಬಹುದು. ಆದರೆ ಸಾಮಾನ್ಯ ಜನ ಮಾತ್ರ ಇಂತಹ ಸರಕಾರದ ಕೈಯಲ್ಲಿ ಸಿಕ್ಕು ನಲುಗುವಂತಾಗಿದೆ. ಅಭಿವೃದ್ಧಿ ಕೆಲಸಕ್ಕೆ ಸರಕಾರದ ಬಳಿ ದುಡ್ಡಿಲ್ಲ, ಆದರೆ ಹರಕೆ ತೀರಿಸಲು ದುಡ್ಡಿದೆ. ಸಾರ್ವಜನಿಕರು ಮಾತ್ರ ಹರಕೆಯ ಕುರಿಯಾಗುತ್ತಿದ್ದಾರೆ.

 

Donate Janashakthi Media

One thought on “ಹರಕೆ ತೀರಿಸಲು ಸರಕಾರದ ದುಡ್ಡು ಬಳಸಿದ ಶಾಸಕ!

  1. 👍
    ಸರಿಯಾಗಿದೆ.
    ವಿಶೇಷ ವೇನು ಕಾಣುತ್ತಿಲ್ಲ.

    ನಮೋ ಭುಧಯ ಜೈ ಭೀಮ್.

    ಬಸವಣ್ಣ ನವರಿಗೆ ತಲೆಯೇ ಹೊನ್ನ ಕಳಸ, ಲೇಖನಿಯಲ್ಲಿ ಗುಡಿ ಗೋಪುರ ಹೊರ ಬಂದ ಕುವೆಂಪು, ಕುಡಿವ
    ನೀರಿಗಾಗಿ ಹೋರಾಟ ಅಂಬೇಡ್ಕರ್, ಧರ್ಮ ಮತ್ತು ಕತ್ತೆ ಪದ್ಯ ಬರೆದ ಸಿದ್ದಲಿಂಗಯ್ಯ…

    ಬುದ್ಧ
    ಅಮೃತ ಸಿಂಚನ ಇಲ್ಲದ ಮನೆಯಲ್ಲಿ ಹರಕೆ ಪರಂಪರೆ ನಿತ್ಯ ಸತ್ಯ. ಬಾಹ್ಯಕಾಶ ತಂತ್ರಜ್ಞಾನ ಬಳಸಿ ” ದನಪಿಶಾಚಿಗೆ ” ಹರಕೆಯ ಪಾತ್ರ ಟಿವಿ ಯಲ್ಲಿ ಬಂದಾಗ..ಬಹುಸಂಖ್ಯಾ ಜನ ಮಾಡುವುದನ್ನೇ ಶಾಸಕರು ಮಾಡಿದ್ದಾರೆ.

    ” ಬೇವು ಬಿತ್ತಿ ಮಾವು ಪಡೆವ ತವಕ ಬೇಡ ಮಾನವ : ಜಯತೇ, ಜಯತೇ.. ಜಯತೇ.. ಸತ್ಯಮೇವ ಜಯತೇ.”
    ಮನ್ನಾಡೆ, ಗಾಯನ, ಕನ್ನಡ ಸಿನಿಮಾ ಕಲ್ಪ ವೃಕ್ಷ

    ಪರಿಸರದ ಅರಿವು ತಿಳಿಯೋದು..
    ಪರಿಸರ ಪ್ರಜ್ಞೆ ” ಗಣಪತಿ ಬದಲು ಬೀದಿಯಲ್ಲಿ ಬುದ್ಧನ ಕೂರಿಸಿ : ಮನೆಗೆ ಓಯ್ಯುವುದು, ಹರಕೆ ಸೆರೆ ಮನೆ ಮಾನಸಿಕ ದಾರಿದ್ಯ ದಿಂದ ಬಿಡುಗಡೆ ಪಡೆಯೋದು.
    ಜ ವಿ,
    ಡಿಪ್ಲೋಮ ವಿದ್ಯಾರ್ಥಿ ಬುದ್ಧಅಧ್ಯಯನ ಮಹಾಭೋದಿ ಸಂಸ್ಕೃತ ವಿ ವಿ
    ಪರಿಸರ ವಿಜ್ಞಾನಿ ಇಸ್ರೋ ನಿವೃತ್ತ
    ಮೈಸೂರು

Leave a Reply

Your email address will not be published. Required fields are marked *