ಹೊಸ ವರ್ಷ 2026 ಸಂಭ್ರಮಾಚರಣೆ: ಬೆಂಗಳೂರು ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು :ಹೊಸ ವರ್ಷ 2026ರ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸಜ್ಜಾಗುತ್ತಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸಲು ಕ್ರಮ ಕೈಗೊಳ್ಳುತ್ತಿವೆ. ಹೊಸ ವರ್ಷ

ಹೊಸ ವರ್ಷದ ಕಾರ್ಯಕ್ರಮಗಳಿಗಾಗಿ ಎಲ್ಲಾ ಪಬ್, ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ಮುಖ್ಯ ಉದ್ದೇಶವಾಗಿದೆ. ಆಯೋಜಕರು ಎಲ್ಲಾ ಕಡ್ಡಾಯ ಅನುಮತಿಗಳನ್ನು ಪಡೆಯಬೇಕು ಮತ್ತು ಕಾರ್ಯಕ್ರಮದ ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿದೆ.

ಧ್ವನಿವರ್ಧಕಗಳ ಶಬ್ದ ಮಟ್ಟವನ್ನು “ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ನಿಯಂತ್ರಣ ನಿಯಮಗಳು, 2000” ಅಡಿಯಲ್ಲಿ ನಿರ್ಧರಿಸಲಾಗಿದ್ದು, ಹೆಚ್ಚು ಶಬ್ದದ ಕಾರಣದಿಂದ ಸಾರ್ವಜನಿಕರ ಅಸೌಕರ್ಯವಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಜನಸಂಖ್ಯೆಯನ್ನು ನಿಯಂತ್ರಿಸಲು ಟಿಕೆಟ್ ಮತ್ತು ಪಾಸ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ನೆಲಮಾಳಿಗೆ, ಪಾರ್ಕಿಂಗ್ ಪ್ರದೇಶಗಳು ಮತ್ತು ಟೆರೇಸ್‌ಗಳಲ್ಲಿ ಕಾರ್ಯಕ್ರಮ ನಡೆಸಲು ನಿರ್ಬಂಧವಿದ್ದು, ಸಾರ್ವಜನಿಕರಿಗೆ ಗೋಚರಿಸುವ ಲೈವ್ ಸ್ಕ್ರೀನ್‌ಗಳು ಮತ್ತು ಧ್ವನಿವರ್ಧಕ ವ್ಯವಸ್ಥೆಗಳನ್ನು ಆವರಣದೊಳಗೆ ಮಾತ್ರ ಅನುಮತಿಸಲಾಗಿದೆ. ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ರಸ್ತೆಗಳ ನೆಲಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ.

ಇದನ್ನೂ ಓದಿ : ತಿರುವನಂತಪುರದ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಹೊಸ ವರ್ಷಾಚರಣೆ ನಿಯಮ

  • ಹೊಸ ವರ್ಷದ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ
  • ಸಂಭ್ರಮಾಚರಣೆಗೆ ನಿಗದಿತ ಸಮಯ ಕಡ್ಡಾಯ ಫಾಲನೆ
  • ಹೊಸ ವರ್ಷಕ್ಕೆ ಕಡ್ಡಾಯ ಧ್ವನಿರ್ವಕ ಪರವಾನಗಿ ಪಡೆಯಬೇಕು
  • ಧ್ವನಿರ್ವಕಗಳ ತೀವ್ರತೆ ನೈಟ್ ಟೈಮ್ ಜನವಸತಿ ಪ್ರದೇಶಗಳಲ್ಲಿ 45DB ಇರಬೇಕು
  • ಕಮರ್ಷಿಯಲ್ – 55DB ಹಾಗೂ ಇಂಡಸ್ಟ್ರೀಯಲ್ ಏರಿಯಾ ಮಿತಿ 70DB
  • ಸ್ಥಳವಕಾಶಕ್ಕೆ ತಕ್ಕಂತೆ ಪಾಸ್ ಅಥವಾ ಟಿಕೇಟ್ ನೀಡಬೇಕು
  • ನೆಲಮಹಡಿ, ಪಾರ್ಕಿಂಗ್ ಹಾಗೂ ಟೆರೆಸ್ ಗಳಲ್ಲಿ ಪಾರ್ಟಿ ಆಯೋಜನಗೆ ಬ್ರೇಕ್
  • ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳ ಒಳಭಾಗಕ್ಕೆ ಮಾತ್ರ LED ಹಾಕಬೇಕು
  • ಸಾರ್ವಜನಿಕರಿಗೆ ಕಾಣುವಂತೆ LED ಹಾಕುವಂತಿಲ್ಲ
  • ಭದ್ರತೆ ದೃಷ್ಟಿಯಿಂದ ಗ್ರಾಹಕರ ಸ್ಕ್ರಿನಿಂಗ್ ತಪಾಸಣೆ ಮಾಡಬೇಕು
  • ಕಾರ್ಯಕ್ರಮದಲ್ಲಿ ಅಗ್ನಿ ನಿರೋಧಕ ಬಳಕೆ ಇರಬೇಕು
  • ಕಾಲ್ತುಳಿತ ಪ್ರಕರಣ ಆಗದಂತೆ ನೋಡಿಕೊಳ್ಳಬೇಕು
  • ತುರ್ತು ನಿಗಮಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು
  • ಹೋಟೆಲ್ ಪ್ರವೇಶ, ನಿರ್ಗಮನ, ಪಾರ್ಕಿಂಗ್ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಅಳವಡಿಸಬೇಕು
  • ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳಲ್ಲಿ ಮಾದಕ ದ್ರವ್ಯ ಮಾರಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು
  • ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು
  • NO SMOKING/ NO DRUGS ಫಲಕಗಳನ್ನ ಅಳವಡಿಸಬೇಕು
  • ಹೊಸ ವರ್ಷಕ್ಕೆ ಆಗಮಿಸುವ ಸೆಲೆಬ್ರಿಟೀಸ್, ಅತಿಥಿ ಕಲಾವಿದರ ಮಾಹಿತಿ ಮೊದಲೇ ಪೊಲೀಸ್ ಇಲಾಖೆಗೆ ತಿಳಸಬೇಕು
  • ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಗಳಲ್ಲಿ ಮಹಿಳೆಯರಿಗೆ ಭದ್ರತೆ

ಮಹಿಳೆಯರ ರಕ್ಷಣೆ ಹಾಗೂ ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಶಾಪ್​ಗಳು, ನೆಲಮಹಡಿಯ ಅಂಗಡಿಗಳು ಹಾಗೂ ಅಂಡರ್ ಪಾಸ್​​ಗಳನ್ನು ಬಂದ್ ಮಾಡುವಂತೆ ಬ್ರಿಗೇಡ್ ರಸ್ತೆ ಸಂಘಟನೆ ಹೇಳಿದೆ. ನೆಲಮಹಡಿಯಲ್ಲಿ ಪಾರ್ಟಿ ಹಾಗೂ ಮೋಜು ಮಸ್ತಿಯಿಂದ ಮಹಿಳೆಯರ ಸುರಕ್ಷತೆಗೆ ಧಕ್ಕೆ ಸಾಧ್ಯತೆ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *