ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲೆಂಡ್ ಸತತವಾಗಿ ಐದನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದ್ದು. ಭಾರತ 136 ನೇ ಸ್ಥಾನದಲ್ಲಿದೆ.
146 ರಾಷ್ಟ್ರಗಳ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಫಿನ್ಲೆಂಡ್ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಡೆನ್ಮಾರ್ಕ್ ಇದ್ದು, ನಂತರದಲ್ಲಿ ಐಸ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ನೆದರ್ಲೆಂಡ್ ಸ್ಥಾನ ಪಡೆದಿವೆ. ಅಮೆರಿಕ 16ನೇ ಸ್ಥಾನದಲ್ಲಿದ್ದರೆ, ಬ್ರಿಟನ್ 15, ಫ್ರಾನ್ಸ್ 20 ನೇ ಸ್ಥಾನದಲ್ಲಿದೆ. ಚೀನಾ 72 ನೇ ಸ್ಥಾನದಲ್ಲಿದ್ದು, ಅಫ್ಗಾನಿಸ್ತಾನ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಭಾರತ 136ನೇ ಸ್ಥಾನದಲ್ಲಿದೆ. ಲೆಬನಾನ್ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಆ ರಾಷ್ಟ್ರವು ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಯುದ್ಧಗಳಿಂದ ಜರ್ಜರಿತವಾಗಿರುವ ಅಫ್ಗಾನಿಸ್ತಾನವು ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ನಂತರದಲ್ಲಿ ಮಾನವೀಯ ಪರಿಸ್ಥಿತಿ ಹದಗೆಟ್ಟಿದೆ. ಸಂತೋಷ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿಯೇ ಇದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸುವುದಕ್ಕೂ ಮುನ್ನ ಸಂತೋಷ ಸೂಚ್ಯಂಕದ ದತ್ತಾಂಶ ಕ್ರೋಢೀಕರಿಸಲಾಗಿದೆ.
ಸಂತೋಷದ ಸೂಚ್ಯಂಕ ನೋಡಲು ಈ ಲಿಂಕ್ ಕ್ಲಿಕ್ ಮಾಡಿ : https://public.tableau.com/views/WorldHappinessReport2022final/Figure2_1?:showVizHome=no
ಯುನಿಸೆಫ್ ಪ್ರಕಾರ, ಈ ಬಾರಿಯ ಚಳಿಗಾಲದ ಅವಧಿಯಲ್ಲಿ ನೆರವು ನೀಡದಿದ್ದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹತ್ತು ಲಕ್ಷ ಮಕ್ಕಳು ಹಸಿವಿನಿಂದ ಸಾಯುವ ಸಾಧ್ಯತೆ ಇರುವುದಾಗಿ ಅಂದಾಜಿಸಿದೆ.
ವರದಿ ಸಿದ್ಧಗೊಳ್ಳುವುದು ಹೇಗೆ ? ವೈಯಕ್ತಿಕ ಯೋಗಕ್ಷೇಮ,ಆದಾಯ, ಭ್ರಷ್ಟಾಚಾರದ ಮಟ್ಟ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದು ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ ಡೇಟಾದ ಆಧಾರದ ಮೇಲೆ ಸೊನ್ನೆಯಿಂದ 10 ರ ಸ್ಕೇಲ್‌ನಲ್ಲಿ ಸಂತೋಷದ ಸ್ಕೋರ್ ಅನ್ನು ನಿಯೋಜಿಸುತ್ತದೆ.
ಇದನ್ನೂ ಓದಿ :ಜಾಗತಿಕ ಹಸಿವು ಸೂಚ್ಯಂಕ : 101 ನೇ ಸ್ಥಾನಕ್ಕೆ ಕುಸಿದ ಭಾರತ
ಭಾರತದ ಸ್ಥಾನ: ಒಟ್ಟು 146 ದೇಶಗಳಿರುವ ಈ ಪಟ್ಟಿಯಲ್ಲಿ ಭಾರತ 136ನೇ ಸ್ಥಾನ ಪಡೆದಿದೆ. ಭಾರತ ಅತೃಪ್ತಿ ದೇಶವಾಗಿದೆ ಎಂಬ ಅಂಶವನ್ನು ಈ ಸೂಚ್ಯಂಕ ಹೊರಹಾಕಿದೆ. ಬಡತನ, ಹಸಿವು, ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರದ ರೋಗಕ್ಕೆ ಸಿಕ್ಕು ಭಾರತ ನರಳುತ್ತಿದೆ. ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ನಿರ್ಲಕ್ಷ್ಯದ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಈ ಕಳಪೆ ಸಾಧನೆಗೆ ವ್ಯಾಪಕ ಟೀಕೆಗಳು ಬರುತ್ತಿವೆ. ‘ವಿಶ್ವಗುರು’ ಆಗುವ ಕನಸು ಕಾಣುತ್ತಿರುವ ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಜನರನ್ನ ಸಂತೋಷವಾಗಿಡಲು ಸಾಧ್ಯವಾಗುತ್ತಿಲ್ಲ. ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ವಿಶ್ವಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಈ ಪಟ್ಟಿಯನ್ನು ನೀಡುತ್ತಿದೆ. 2015ರ 158 ದೇಶಗಳ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಭಾರತವು 117ನೇ ಸ್ಥಾನಗಳಲ್ಲಿ ಇತ್ತು. 2018ರ ಹೊತ್ತಿಗೆ ಭಾರತದ ರ್‍ಯಾಂಕಿಂಗ್ 133ಕ್ಕೆ ಇಳಿದಿದ್ದು, ಈ ವೇಳೆ ವಿಶ್ವಸಂಸ್ಥೆಯು 156 ದೇಶಗಳನ್ನು ಪಟ್ಟಿ ಮಾಡಿತ್ತು. ಕೊರೊನಾ ನಂತರದ ಭಾರತದ ರ್‍ಯಾಂಕಿಂಗ್ ಮತ್ತಷ್ಟು ಇಳಿದಿದ್ದು, 146 ದೇಶಗಳ ಪಟ್ಟಿಯಲ್ಲಿ 136ನೇ ರ್‍ಯಾಂಕ್ ಪಡೆದಿದೆ. ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ.