ಕೆರಗೋಡು ರಾಷ್ಟ್ರಧ್ವಜದ ಸ್ತಂಭದಲ್ಲಿ ಹನುಮ ಧ್ವಜ ವಿವಾದ | ಕರ್ತವ್ಯಲೋಪ ಆರೋಪದಡಿ ಪಂಚಾಯಿತಿ ಅಧಿಕಾರಿ ಅಮಾನತು

ಬೆಂಗಳೂರು: ಮಂಡ್ಯದ ಕೆರಗೋಡು ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಸ್ತಂಭದಲ್ಲಿ ಹನುಮಂತನ ಚಿತ್ರವಿರುವ ಧ್ವಜವನ್ನು ಹಾರಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಉಂಟಾದ ಘಟನೆಗೆ ಜವಾಬ್ದಾರನ್ನಾಗಿಸಿ ಕೆರಗೋಡು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಮಂಡ್ಯ ಜಿಲ್ಲಾಡಳಿತ ಅಮಾನತುಗೊಳಿಸಿದೆ. ಜನವರಿ 29ರಂದು ಹೊರಡಿಸಿದ ಆದೇಶದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಜೀವನ್ ಬಿಎಂ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದೆ.

ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ಗೆ ಧ್ವಜಸ್ತಂಭ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂಬ ಆರೋಪ ಈ ಅಧಿಕಾರಿ ಮೇಲಿದೆ. ಸರ್ಕಾರಿ ಜಮೀನು ಗುತ್ತಿಗೆ, ಮಾರಾಟ ಅಥವಾ ವರ್ಗಾವಣೆಗೆ ಸರ್ಕಾರ, ಜಿಲ್ಲಾ ಅಥವಾ ತಾಲ್ಲೂಕು ಪಂಚಾಯಿತಿಯಿಂದ ಪೂರ್ವಾನುಮತಿ ಇಲ್ಲದೆ ಅನುಮತಿ ನೀಡುವಂತಿಲ್ಲ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ನಡಾವಳಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನ ಗೆದ್ದ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುತ್ತೇವೆ – ಬೊಮ್ಮಾಯಿ

ಉನ್ನತ ಅಧಿಕಾರಿಗಳ ಗಮನಕ್ಕೆ ತಾರದೆ ಧ್ವಜಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕರ್ತವ್ಯಲೋಪ ಎಸಗಿದಂತಾಗಿದೆ. ಇದಲ್ಲದೆ, ಟ್ರಸ್ಟ್‌ಗೆ ರಾಷ್ಟ್ರ ಅಥವಾ ರಾಜ್ಯ ಧ್ವಜಾರೋಹಣಕ್ಕೆ ಮಾತ್ರ ಅವಕಾಶವಿದ್ದರೂ, ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಕಂಬದಲ್ಲಿ ಹನುಮ ಧ್ವಜವನ್ನು ಆರೋಹಣ ಮಾಡಿದ ನಂತರ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ನಿಯಮ 210ರ ಪ್ರಕಾರ ಪಿಡಿಒ ಅವರನ್ನು ಅಮಾನತುಗೊಳಿಸಲಾಗಿದೆ.

ಕೆರಗೋಡು ಗ್ರಾಮದ ಹನುಮ ಧ್ವಜದ ವಿಚಾರವನ್ನು ಎತ್ತಿಕೊಂಡಿರುವ ಬಿಜೆಪಿ ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಮಂಡ್ಯ ಜಿಲ್ಲೆಯ ಅಧಿಕಾರಿಗಳು ಭಾನುವಾರ ಧ್ವಜವನ್ನು ತೆಗೆಗಿದ್ದು, ಇದರ ನಂತರ ಕಾಂಗ್ರೆಸ್ ಸರ್ಕಾರವು ‘ಹಿಂದೂ ವಿರೋಧಿ’ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ತನ್ನ ಮಿತ್ರ ಪಕ್ಷ ಜೆಡಿಎಸ್‌ನೊಂದಿಗೆ ಗ್ರಾಮದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿತು.

ಇಷ್ಟೆ ಅಲ್ಲದೆ, ಇದನ್ನು ಕೋಮು ವಿಭಜನೆ ರಾಜಕೀಯಕ್ಕೆ ಬಳಸಿಕೊಡಿರುವ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿದೆ. ಬಿಜೆಪಿ 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ವಿವಾದಗಳನ್ನು ಹುಟ್ಟುಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ವಿಡಿಯೊ ನೋಡಿ: ಕಾಂತರಾಜ ವರದಿ ಸ್ವೀಕರಿಸುತ್ತೇವೆ – ಸಿಎಂ ಸಿದ್ದರಾಮಯ್ಯ ವಾಗ್ದಾನ Janashakthi Media

Donate Janashakthi Media

Leave a Reply

Your email address will not be published. Required fields are marked *