ರಾಣಾ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್​

ಮುಂಬಯಿ: ಹನುಮಾನ್​ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸಂಸದೆ ನವನೀತ್‌ ಕೌರ್‌ ರಾಣ ಹಾಗೂ ರವಿ ರಾಣಾ ದಂಪತಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅಲ್ಲದೆ, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಎಫ್‌ಐಆರ್‌ ರದ್ದುಗೊಳಿಸುವಂತೆ ಮುಂಬೈ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಇದೀಗ ವಜಾಗೊಂಡಿದೆ. ತಮ್ಮ ಬಂಧನವನ್ನು ಪ್ರಶ್ನೆಸಿ ಮುಂಬೈ ಹೈಕೋರ್ಟಿಗೆ ದಂಪತಿಗಳು ಅರ್ಜಿ​ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಹೈಕೋರ್ಟ್​ ಅರ್ಜಿ ವಜಾಗೊಳಿಸಿದೆ.

ಇದನ್ನು ಓದಿ: ಹನುಮಾನ್ ಚಾಲೀಸ ಪಠಿಸುವ ವಿವಾದ: ಸಂಸದೆ, ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ

ರಾಣಾ ದಂಪತಿಗಳ ಬಂಧನಕ್ಕೆ ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪವಿದ್ದು, ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅಮರಾವತಿ ಸಂಸದೆ ನವನೀತ್ ಹಾಗೂ ಆಕೆಯ ಪತಿ ಶಾಸಕ ರವಿ ರಾಣಾ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಕೇಸ್​ನಲ್ಲಿ ದಂಪತಿಗಳಿಗೆ ಹೈಕೋರ್ಟ್​ನಿಂದಲೂ ಹಿನ್ನೆಡೆಯಾಗಿದೆ.

ನ್ಯಾಯಾಲಯವು ರಾಣಾ ದಂಪತಿಗೆ ಈಗಾಗಲೇ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ನವನೀತ್ ರಾಣಾ ಅವರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಮತ್ತು ಅವರ ಪತಿಯನ್ನು ನವಿ ಮುಂಬೈನ ತಲೋಜಾ ಜೈಲಿಗೆ ಕಳುಹಿಸಿದೆ.

ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ್ದ ದಂಪತಿಗಳನ್ನು ಶನಿವಾರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *