ಶ್ರೀರಂಗಪಟ್ಟಣ: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶಕ್ಕೆ ಯತ್ನ

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ ವೇಳೆ ಪೊಲೀಸರೊಂದಿಗೆ ತೀವ್ರ ನೂಕಾಟ, ಮಾತಿನ ಚಕಮಕಿ ನಡೆದಿದೆ.

ಭಾನುವಾರ ಹನುಮ ಮಾಲಾಧಾರಿಗಳು ಯಾತ್ರೆ ವೇಳೆ ವೃತ್ತವೊಂದರ ಮಸೀದಿ ಮುಂದೆ ಕದಲದೇ ನಿಂತುಕೊಂಡಿದ್ದರು.  ನೋಡ ನೋಡುತ್ತಿದ್ದಂತೆ ಅನೇಕ ಮಾಲಾಧಾರಿಗಳು ಜಮಾವಣೆ ಆಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ : ಪಿಡಿಒ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅಭ್ಯರ್ಥಿಗಳು

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಪಕ್ಕವೇ ಯಾತ್ರೆ ಹಾದು ಹೋಗಬೇಕಿತ್ತು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಮೂರು ಕೆಎಸ್‌ಆರ್‌ಪಿ ತುಕಡಿಗಳು ನಿಯೋಜನೆಗೊಂಡಿವೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಮಾಲಾಧಾರಿಗಳು ಬ್ಯಾರಿಕೇಡ್ ತಳ್ಳಿ ಮಸೀದಿಯತ್ತ ಮಗ್ಗಲು ಯತ್ನಿಸಿದ್ದಾರೆ. ಈ ವೇಳೆ ಹೈಡ್ರಾಮಾವೇ ನಡೆದಿದೆ. ಮಾಲಾಧಾರಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಸ್ವತಃ ಖುದ್ದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳದಲ್ಲಿ ನಿಂತು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಹನುಮಧಾರಿಗಳು ಘೋಷಣೆ ಕೂಗುತ್ತಾ ಮಸೀದಿ ಮುಂದೆ ಕುಳಿದಿದ್ದಾರೆ. ರಸ್ತೆಯಲ್ಲಿಯೇ ಭಜನೆ ಮಾಡುತ್ತಾ ಘೋಷಣೆ ಕೂಗಿದ್ದಾರೆ. ಈ ವೇಳೆ ಅವರನ್ನು ಸ್ಥಳದಿಂದ ಕಳುಹಿಸಲು ಪೊಲೀಸರ ಯತ್ನ ವಿಫಲವಾಗಿದೆ. ನೂಕಾಟ ತಳ್ಳಾಟ ನಡೆದಿದೆ. ಹನುಮಧಾರಿಗಳು ಡಿಜೆ ಹಾಕಿ ಕುಣಿಯುತ್ತಿದ್ದಾರೆ. ಸ್ಥಳದಲ್ಲಿಯೇ ಹೆಚ್ಚು ಕಾಲ ಕಳೆದಿದ್ದು, ಕೆಲವರು ಬ್ಯಾರಿಕೇಡ್ ನೂಕಿ ಮಸೀದಿ ಪ್ರವೇಶಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಲಾಧಾರಿಗಳು ಮಸೀದಿಗೆ ಒಳಗೆ ಹೋಗದಂತೆ ತಡೆಯಲು ಪೊಲೀಸರು ರಸ್ತೆಗೆ ಅಡ್ಡವಾಗಿ ವಾಹನ ನಿಲ್ಲಿಸಿದ್ದಾರೆ. ಇನ್ನೊಂದು ಕಿಲೋ ಮೀಟರ್ ದೂರ ಹೋದರೆ ಈ ಸಂಕೀರ್ತನ ಯಾತ್ರೆ ಪೂರ್ಣಗೊಳ್ಳುತ್ತಿತ್ತು. ಆದರೆ ಯಾತ್ರೆ ಪೂರ್ಣಗೊಳಿಸುವಲ್ಲಿ ವಿಳಂಬ ಆಗಿದೆ. ಎಲ್ಲ ಮಾಲಾಧಾರಿಗಳು ವೃತ್ತದಲ್ಲಿಯೇ ಭಜನೆ, ಡಿಜೆ ನೃತ್ಯ ಹಾಕಿಕೊಂಡು ಘೋಷಣೆ ಕೂಗಿದಿದ್ದಾರೆ.

ಇದನ್ನೂ ನೋಡಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡ: ಹಿಂದುಳಿದ ಜಾತಿಗಳ ಒಕ್ಕೂಟ ಮನವಿ Janashakthi Media

Donate Janashakthi Media

Leave a Reply

Your email address will not be published. Required fields are marked *