ಹಕ್ಕಿಪಕ್ಕಿಸಮುದಾಯದವರಿಗೆ ಭೂಮಿ; ಶಾಸಕರ ನೇತೃತ್ವದಲ್ಲಿ ಸಭೆ

ಸಾಗುವಳಿದಾರರಿಗೆ ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಸೂಚನೆ

ನಾಗಮಂಗಲ: ತಾಲ್ಲೂಕಿನ ಶಿಕಾರಿಪುರ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದವರ ಭೂ ಸಾಗುವಳಿಗೆ ಬಹು ವರ್ಷಗಳಿಂದ ತೊಡಕಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಹಾಜರಿಯಲ್ಲಿ ಶಾಸಕ ಸುರೇಶ್ ಗೌಡ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ

ಸರಿಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಸಾವಿರ ಜನಸಂಖ್ಯೆ ಇರುವ ಶಿಕಾರಿಪುರ ಗ್ರಾಮದಲ್ಲೆ ಸಭೆ ನಡೆಸಿದ ಶಾಸಕರು, ತಹಶೀಲ್ದಾರ್ ಕುಂಞ ಅಹಮ್ಮದ್ ರಿಂದ ಭೂ ಮಂಜೂರಾತಿ ಜಮೀನಿನ ಮಾಹಿತಿ ಪಡೆದರು

ಹತ್ತಾರು ವರ್ಷಗಳಿಂದಲೂ ಶಿಕಾರಿಪುರ ಗ್ರಾಮದಲ್ಲೇ ವಾಸಿಸುತ್ತಿರುವ ನಮ್ಮಲ್ಲಿ ಕೇವಲ 52 ಕುಟುಂಬಗಳಿಗೆ ಮಾತ್ರವೇ ಸಾಗುವಳಿ ಪತ್ರ ನೀಡಿದ್ದು, ಉಳಿದವರಿಗೆ ಭೂ ಸಾಗುವಳಿ ಮಾಡಲೂ ಅರಣ್ಯ ಇಲಾಖೆಯಿಂದ ತೊಂದರೆಗಳಾಗುತ್ತಿರುವುದರಿಂದ ನಮ್ಮಲ್ಲಿ ವಲಸೆ ಜೀವನ ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಈ ವೇಳೆ ಹಾಜರಿದ್ದ ಅರಣ್ಯ ಇಲಾಖೆ ಎಸಿಎಫ್ ಶಂಕರೇಗೌಡ ಹಾಗೂ ತಹಶೀಲ್ದಾರ್ ಕುಂಞ ಅಹಮ್ಮದ್ ನಡುವೆ ಅರಣ್ಯ ಭೂಮಿ ಮತ್ತು ಸರ್ಕಾರಿ ಹಾಗೂ ಭೂ ಮಂಜೂರಾತಿ ಭೂಮಿ ನಿಖರ ಅಂಕಿ ಅಂಶ ಸಿಗದ ಕಾರಣ ಎರಡೂ ಇಲಾಖೆ ಅಧಿಕಾರಿಗಳು ವಾರದೊಳಗೆ ಜಂಟಿ ಸಭೆ ನಡೆಸಿ ವರದಿ ನೀಡಲು ಶಾಸಕ ಸುರೇಶ್ ಗೌಡ ಸೂಚಿಸಿದರು ಅಲ್ಲದೆ ಸರಿಯಾದ ಮಾಹಿತಿ ಇಲ್ಲದೆ ಭೂ ಸಾಗುವಳಿದಾರ ಕುಟುಂಬಗಳಿಗೆ ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು

ಈ ವೇಳೆ ಮಾತನಾಡಿದ ತಹಶೀಲ್ದಾರ್ ಕುಂಞ ಅಹಮ್ಮದ್, ಅರಣ್ಯ ಹಕ್ಕು ಕಾಯ್ದೆ ಅನ್ವಯ ಬುಡಕಟ್ಟು ಜನಾಂಗಕ್ಕೆ ಭೂ ಮಂಜೂರಾತಿ ನೀಡಲು ಅವಕಾಶವಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ವಹಿಸುವ ಭರವಸೆ ನೀಡಿದರು.

ಈ ವೇಳೆ ತಾ.ಪಂ.ಅದ್ಯಕ್ಷ ದಾಸೇಗೌಡ, ಸಮಾಜಕಲ್ಯಾಣಾಧಿಕಾರಿ ರವಿಕುಮಾರ್, ತುಪ್ಪದ ಮಡು ಪಿಡಿಒ ಬಸವಶೆಟ್ಟಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಚಂದ್ರೇಗೌಡ, ಡಿಟಿ ಶ್ರೀನಿವಾಸ್ ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *