ಕೊಡಗು,ಫೆ.09 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿ ಸಿಪಿಐಎಂ ಕಾರ್ಯಕರ್ತರು ಜೀಪಿಗೆ ಹಗ್ಗಕಟ್ಟಿ ಎಳೆದು ವಿಭಿನ್ನ ರೀತಿಯಲ್ಲಿ ಪ್ರತಿಭಟಿನೆ ನಡೆಸಿದ್ದಾರೆ.
ಜೀಪಿಗೆ ಹಗ್ಗಕಟ್ಟಿ ಎಳೆಯುವುದರ ಮೂಲಕ ಪೆಟ್ರೋಲ್, ಡೀಸೆಲ್ ಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎನ್ನೋದನ್ನು ಬಿಂಬಿಸಿದ್ದಾರೆ. ಆಟೋ ಮತ್ತು ಬೈಕ್ ಗಳನ್ನು ನೂಕಿಕೊಂಡೇ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ ಗ್ಯಾಸ್ ಬೆಲೆಯೂ ಜಾಸ್ತಿ ಮಾಡಲಾಗಿದ್ದು ಸಬ್ಸಿಡಿಯನ್ನು ಕಡಿತ ಮಾಡಲಾಗಿದೆ ಎಂದು ದೂರಿದ ಪ್ರತಿಭಟನಾ ನಿರತ ಮಹಿಳೆಯರು ಖಾಲಿ ಸಿಲಿಂಡರ್ ಒಂದನ್ನು ಜೀಪ್ ಮೇಲೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ
ಪ್ರತಿಭಟನೆ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.