ಬೆಂಗಳೂರಿನ ಕಲಾಗ್ರಾಮದಲ್ಲಿ ‌ ಜರುಗಿದ ಹಾಡ್ಲಹಳ್ಳಿ ರಂಗೋತ್ಸವ  

ಬೆಂಗಳೂರು: ಹಾಡ್ಲಹಳ್ಳಿ ರಂಗೋತ್ಸವ  ಬೆಂಗಳೂರಿನ  ಕಲಾಗ್ರಾಮದಲ್ಲಿ  ನಡೆಸಲಾಯಿತು.ಈ ರಂಗೋತ್ಸವದಲ್ಲಿ ಹಾಡ್ಲಹಳ್ಳಿ ನಾಗರಾಜ್ ಅವರ ಕೃತಿಗಳ ಆಧಾರಿತ  ನಾಟಕಗಳು ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ಆಗಸ್ಟ್‌ 21-22ರ ಎರಡೂ ದಿನಗಳ ಕಾಲ  ಪ್ರದರ್ಶನಗೊಂಡವು.

ಈ ರಂಗೋತ್ಸವದಲ್ಲಿ ರತಿ ಹೆಚ್‌ ಜಿ, ನಿರ್ದೇಶನದ “ಕಡವೆ ಬೇಟೆ” , ಉಲಿವಾಲ ಮೋಹನ್‌ ಕುಮಾರ್‌ ನಿರ್ದೇಶನದ “ನಿಲುವಂಗಿಯ ಕನಸು” ಎಂಬ ಎರಡು ನಾಟಕಗಳು ಪ್ರರ್ದಶನಗೊಂಡವು.

ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ನಡೆದ ಈ ಎರಡು ದಿನಗಳು ನಮ್ಮ ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ಎಂದಿಗೂ ಮರೆಯಲಾಗದ ದಿನಗಳಾಗಿದ್ದಕ್ಕೆ ಕಾರಣರಾದ ಅದಷ್ಟೂ ಆಪ್ತ ಜೀವಗಳಿಗೆ ನಮ್ಮ ತಂಡದ ವತಿಯಿಂದ ಎದೆಯಾಳದ ಕೃತಜ್ಞತೆಗಳು.

ಎರಡು ದಿನದ ಸಂಜೆಗಳು ಮಲೆನಾಡಿನ ವಾತಾವರಣ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಖುಷಿಯ ವಿಚಾರ. ಬೇಟೆ, ಕಾಡು, ತೋಟ, ಮುಳುಗಡೆ, ಸಣ್ಣ ರೈತರು ಎಲ್ಲರ ಪರಿಚಯದ ಜೊತೆಗೆ ಯೋಚನೆಗಳು ಹಾದು ಹೋದವು ಅಂದರೆ ನಮ್ಮ ಶ್ರಮ ಸಾರ್ಥಕ ಅಂತಲೇ ಅರ್ಥ‌. ಹಿರಿಯ ಸಾಹಿತಿ ಎಸ್‌ಜಿ ಸಿದ್ದರಾಮಯ್ಯ, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ನಿರ್ದೇಶಕ ಬಿಎಂ ಗಿರಿರಾಜ್‌ ರಂಗಭೂಮಿಯ ಪ್ರಮುಖರಾದ ಬೇಲೂರು ರಘು ನಂದನ್‌, ಲವ ಕುಮಾರ್‌, ಕೃಷ್ಣಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇದನ್ನೂ ಓದಿ:ರಂಗಾಯಣಕ್ಕೆ ರಂಗ ಸ್ಪರ್ಶ ನೀಡಬೇಕಿದೆ

ರಂಗೋತ್ಸವದ ಯಶಸ್ವಿಗೆ ಕಾರಣರಾದ ಪ್ರೇಕ್ಷಕರನ್ನೂ ನಾವು ಎಂದೂ ಮರೆಯಲು ಸಾಧ್ಯವಿಲ್ಲ. ನಾವೂ ಒಂದಷ್ಟು ದಿನ ಅವರ ಮನದಲ್ಲಿ ಉಳಿಯುವಂತಾದರೆ ಮತ್ತೆ ಸಿಕ್ಕಿ ನಾಟಕ, ಪುಸ್ತಕ, ಹಾಡು, ಕುಣಿತ ಅಂತ ಸಾಂಸ್ಕೃತಿಕವಾಗಿ ಮುಖಾಮುಖಿಯಾಗಲು ಅವಕಾಶವಾಗುತ್ತದೆ‌ ಎಂದು ಹಾಡ್ಲಹಳ್ಳಿ ನಾಗರಾಜ್‌ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *