ಹದಿನೆಂಟು ತಿಂಗಳ ತುಟ್ಟಿ ಭತ್ಯೆ ರದ್ದು: ಸರಕಾರದ ಕ್ರಮ ಖಂಡಿಸಿ ಸರಕಾರಿ ನೌಕರರ ಪ್ರತಿಭಟನೆ

ವಿಜಯಪುರ : ಅಖಿಲ ಕರ್ನಾಟಕ ರಾಜ್ಯಸರ್ಕಾರ ಒಕ್ಕೂಟ ವಿಜಯಪುರ ಜಿಲ್ಲಾ ಶಾಖೆ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೆದಾರ ಡಿ.ವೈ.ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖಲ ಲೆಂಡಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತಡದಲ್ಲಿ ಹೊಸ ಸವಾಲುಗಳನ್ನು ಎದುರುಸುತ್ತಿರುವ ಈ ಸಂದರ್ಭದಲ್ಲಿ ನೌಕರರ ಹದಿನೆಂಟು ತಿಂಗಳ ತುಟ್ಟಿ ಭತ್ಯೆ ರದ್ದುಗೊಳಿಸಿರುವುದು ಸಮಂಜಸವಲ್ಲ. ಕೂಡಲೇ ಸರ್ಕಾರ 18 ತಿಂಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಹಾಗೂ ಖಾಲಿ ಇರುವ 2.60 ಸಾವಿರ ಸರ್ಕಾರಿ ಹುದ್ದೆಗಳನ್ನು ಪೂರ್ಣ ನೇಮಕಗೊಳೀಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ  ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಸುರೇಶ ಜೀಬಿ ಮಾತನಾಡಿ, ಆಡಳಿತ ಸುಧಾರಣೆ ನೆಪದಲ್ಲಿ ಹುದ್ದೆಗಳ ಖಡಿತ. ಪೆನ್ಸನ್ ಖಾಸಗೀಕರಣ, ವೇತನ ತಾರತಮ್ಯ ಹೆಚ್ಚಾಗುತ್ತಿದೆ. ಹಾರನಳ್ಳಿ ರಾಮಸ್ವಾಮಿ ಆಯೋಗದ ಶಿಫಾರಸ್ಸುಗಳನ್ನು ಮುಂದುವರೆಸಿ ಆಡಳಿತ ಸುಧಾರಣೆ ಆಯೋಗ 2 ರಚಿಸಲಾಗಿದೆ. ಆಡಳಿತ ಸುಧಾರಣೆ ಹೆಸರಿನಲ್ಲಿ ಉದ್ಯೋಗ ಕಡಿತ ಮಾಡುವುದು ಸರಿಯಲ್ಲ. 2016 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದರು ರಾಜ್ಯದಲ್ಲಿ ದಿನಗೂಲಿ – ಹೊರಗುತ್ತಿಗೆ. ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೇಂದ್ರೆ ಸರ್ಕಾರವು 30 ವರ್ಷಗಳ ಸೇವೆ ಸಲ್ಲಿಸಿರುವ  50-55  ವಯೋಮಾನ ಪೂರೈಸಿರುವ ನೌಕರರ ದಕ್ಷತೆ ಮತ್ತು ವಿಶ್ವಾಸಾರ್ಹತೆಯ ಮೇರೆಗೆ ಕಡ್ಡಾಯ ನಿವೃತ್ತಿ ನೀಡುವ ಅಧಿಕೃತ ಜ್ಞಾಪನ ಹೊರಡಿಸಲಾಗಿದೆ ಎಂದು ಸುರೇಶ್‌ ಆರೋಪಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಲ್ಯಾಟರಲ್ ಎಂಟ್ರಿ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರದಲ್ಲಿ ಹಿರಿಯ ಐ.ಎ.ಎಸ್. ಹುದ್ದೆಯಾದ ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿ ರಂಗದ ವ್ಯಕ್ತಿಗಳನ್ನು ಪರಿಣಿತರ ಹೆಸರಿನಲ್ಲಿ ನೇರವಾಗಿ ನೇಮಿಸಿಕೊಳ್ಳಲು ಆರಂಭಿಸಿದೆ ಮತ್ತೊಂದೆಡೆ ಕೇಂದ್ರ ಸರ್ಕಾರವು ಜೀವ ವಿಮಾ ನಿಗಮ, ಬಿ.ಎಸ್.ಎನ್.ಎಲ್. ರಕ್ಷಣಾ ರಂಗ, ರೈಲ್ವೇಸ್, ಬ್ಯಾಂಕುಗಳು ಇತ್ಯಾದಿ ಸಾರ್ವಜನಿಕ ಉದ್ದೀಮೆಗಳನ್ನು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣಗೊಳಿಸುತ್ತಿರುವುದು ನಿಲ್ಲಿಸಬೇಕು. ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ ಶೇ. 70 ರಷ್ಟು ಸರ್ಕಾರದ ಅಯವ್ಯಯ ಖರ್ಚಾಗುತ್ತಿದೆಯೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವವಾಗಿ ಕರ್ನಾಟಕ ರಾಜ್ಯದಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಪರಿಸ್ಕರಣೆಯಾದ ನಂತರದಲ್ಲೂ 2020 21  ನೇ ಆಯವ್ಯಯದಲ್ಲಿ ಒಟ್ಟಾರೆ ರಾಜಸ್ವ ವೆಚ್ಚ ರೂ. 1,79,776  ಕೋಟಿಯಲ್ಲಿ ವೇತನದ ಪಾಲು ರೂ.33,000  ಕೋಟಿ ಮಾತ್ರ (ಶೇ. 18.35) ಇದ್ದು, ಈ ಪ್ರಮಾಣವು ದೇಶದಲ್ಲಿಯೇ ಅತಿ ಕಡಿಮೆಯಾಗಿದೆ. ಈಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಡಿತಗೊಳಿಸಿರುವ 18 ತಿಂಗಳ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ವಹಿಸುವುದು ನ್ಯಾಯಯೋಚಿತವಾಗಿದೆ ಎಂದು ಸುರೇಶ್‌ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಂಜುನಾಥ ಬಂಟನೂರ, ಸಂತೋಷ ಬಿರಾದಾರ, ಎಸ್.ಜಿ.ಸಂಗಾಪುರ, ನೀಲಮ್ಮ ಹಂದ್ರಾಳ, ಆರ್.ಎಸ್.ಮೆಣಸಗಿ, ಜಿ.ಬಿ.ಅಂಗಡಿ, ಸೋಮು ಹೇರಲಗಿ , ವಿಶ್ವ ಕಾಳಗಿ, ಬಗಲಿ, ಮೆಂಡೇಗರ, ಸಂಗಪ್ಪ , ಉದಯ ಕುಲಕರ್ಣಿ, ರಮೇಶ ಕುಂಬಾರ, ರುದ್ರವಾಡಿ ಖಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *