ನವದೆಹಲಿ: ಕಳೆದ ಎರಡು-ಮೂರು ತಿಂಗಳುಗಳಿಂದ ಭಾರತದಲ್ಲಿ ಕೆಮ್ಮು, ತೀವ್ರ ಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್3ಎನ್2 ಕಾರಣವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಎರಡು-ಮೂರು ತಿಂಗಳುಗಳಿಂದ ದೇಶದಲ್ಲಿ ಕೆಮ್ಮು, ಜ್ವರದಂತಹ ಸೋಂಕಿನ ಕಾರಣಗಳಿಂದಾಗಿ ಹೆಚ್ಚು ಜನ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಇದಕ್ಕೆ ವ್ಯಾಪಕವಾಗಿ ಚಲಾವಣೆಯಲ್ಲಿರುವ ಹೆಚ್3ಎನ್2, ಇತರ ಉಪವಿಭಾಗಗಳ ಸೋಂಕಿನ ಕಾರಣವಾಗಿದೆ ಎಂದು ಐಸಿಎಂಆರ್ ಹೇಳಿದೆ.
ಇದನ್ನು ಓದಿ: ಆರೋಗ್ಯ ವಲಯದ ನಿರ್ಲಕ್ಷ್ಯವೂ ಸಾರ್ವಜನಿಕ ಸ್ವಾಸ್ಥ್ಯವೂ
ದೇಶಾದ್ಯಂತ ಹೆಚ್ಚುತ್ತಿರುವ ಕೆಮ್ಮು, ತೀವ್ರ ಶೀತ ಮತ್ತು ವಾಕರಿಕೆ ಪ್ರಕರಣಗಳ ನಿವಾರಣೆಗಾಗಿ ಜನರು ಅವೈಜ್ಞಾನಿಕ ರೀತಿಯಲ್ಲಿ ಆಂಟಿಬಯೋಟಿಕ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ. ಇವುಗಳ ಬಳಕೆ ಬಗ್ಗೆ ಎಚ್ಚರವಹಿಸಿ ಎಂದು ಸಲಹೆ ನೀಡಿರುವ ಐಎಂಎ ಸಾಮಾನ್ಯವಾಗಿ ಋತುಮಾನದ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳ ಕೊನೆಯಲ್ಲಿ ಹೋಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ಈ ಬಗ್ಗೆ ಆತಂಕ ಬೇಡ ಎಂದು ಹೇಳಿದೆ.
ವೈರಸ್‌ಗಳಿಂದ ಉಂಟಾಗುವ ಕಾಯಿಲೆಗಳ ಸಂಶೋಧನೆಗಾಗಿ ರೋಗನಿರ್ಣಯ ಪ್ರಯೋಗಾಲಯಗಳನ್ನು ವಿಸ್ತರಿಸಲಾಗುತ್ತಿದೆ. ಅಲ್ಲದೆ, ಜನರು ಅನುಸರಿಸಬೇಕಾದ ವಿಧಾನಗಳು ಮತ್ತು ಅವಶ್ಯಕವಾಗಿ ಕೈಗೊಳ್ಳಬೇಕಾದ ಎಚ್ಚರಿಕೆ ಮತ್ತು ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಹ ಐಸಿಎಂಆರ್ ಬಿಡುಗಡೆ ಮಾಡಿದೆ.
ಅಸೋಸಿಯೇಷನ್ ವೈದ್ಯರಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ಸೂಚಿಸುವಂತೆ ಹೇಳಿದ್ದು, ಪ್ರತಿಜೀವಕಗಳನ್ನು ಶಿಫಾರಸ್ಸು ಮಾಡದಂತೆ ತಿಳಿಸಿದೆ. ಈ ಪ್ರತಿಜೀವಕಗಳು ಅಥವಾ ಆ್ಯಂಟಿ ಬಯಾಟಿಕ್ ಗಳು ರೋಗಿಯ ರೋಗನಿರೋಧಕತೆಯನ್ನು ಕುಂದಿಸುವ ಅಪಾಯವೂ ಇದೆ ಎಂದು ಐಸಿಎಂಆರ್ ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ