ಗ್ಯಾನವಾಪಿ ಮಸೀದಿಯ ಸರ್ವೇಗೆ ಅನುಮತಿ ನೀಡಿದ ವಾರಣಾಸಿಕೋರ್ಟ್

ಲಖನೌ:ವಾರಣಾಸಿ ನ್ಯಾಯಲಯದ ಸೂಚನೆಯಂತೆ ಕಾಶಿಯ ಗ್ಯಾನವಾಪಿ ಮಸೀದಿಯ ಸರ್ವೇ ಶುಕ್ರವಾರದಿಂದ ನಡೆಯಲಿದೆ.ಸರ್ವೇ ನಡೆಸಿ ಮೇ17ರಂದು ವರದಿ ಸಲ್ಲಿಸುವಂತೆ ವಾರಣಾಸಿ ನ್ಯಾಯಲಯವು  ಸೂಚನೆ ನೀಡಿದೆ.

ಮಸೀದಿಯ ಸರ್ವೇ ಸಮಯದಲ್ಲಿ ಸ್ಥಳದಲ್ಲಿ ವಕೀಲರು ಮತ್ತು ಸಮಿತಿಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರ ಹಾಜರಿರಬೇಕು.ಇದನ್ನು ಹೊರತು ಪಡಿಸಿ ಮಸೀದಿಗೆ ಸಂಬಂಧಿಸಿದ ಧಾರ್ಮಿಕ ಮುಖಂಡರು ಇನ್ನಿತರರು ಅಲ್ಲಿ ಹಾಜರಿರಬಾರದೆಂದು ಕೋರ್ಟ್ ಕಮಿಷನರ್ ಅಜಯ್ ಮಿಶ್ರಾಗೆ ನೀಡಿದ್ದ ಕೋರ್ಟ್ ಸೂಚನೆಯಲ್ಲಿತ್ತು. ಕೋರ್ಟ್ ಆದೇಶಕ್ಕೆ ಮಸೀದಿ ಸಿಬ್ಬಂದಿಯು ಸಿದ್ಧತೆ ನಡೆಸಿದೆ.

ಅರ್ಜಿದಾರರು ಆಶಿಸಿದ ಎಲ್ಲ ಸ್ಥಳಗಳಲ್ಲೂ ವಿಡಿಯೋ ಮಾಡಲು ಕೋರ್ಟ್ ಅನುಮತಿ ನೀಡಿದೆ. ಅರ್ಜಿದಾರರ ಆಶಯದಂತೆ ನೆಲಮಾಳಿಗೆಯಲ್ಲು ಚಿತ್ರೀಕರಿಸಲು ವಕೀಲರು ಪರ ಮಾತಾಡಿದ್ದಾರೆ. ಈ ಎಲ್ಲ ಅರ್ಜಿಗಳಿಗು ಅನುಮತಿ ನೀಡಿದ ವಾರಣಾಸಿ ಕೋರ್ಟ್ ಮೇ 17ರೊಳಗೆ ಸರ್ವೇ ನಡೆಸಲು ಆದೇಶ ನೀಡಿದೆ.

ಕಾಶಿ ವಿಶ್ವನಾಥ ದೇವಸ್ಥಾನದ ಬದಿಯಲ್ಲಿರುವ ಗ್ಯಾನವಾಪಿ ಮಸೀದಿಯೊಳಗೆ ಹಿಂದೂ ದೇವರುಗಳ ವಿಗ್ರಹಗಳಿದ್ದು ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಇತ್ತೀಚೆಗೆ ಕೆಲ ಹಿಂದೂಗಳು ಒತ್ತಾಯ ಮಾಡುತ್ತಿದ್ದಾರೆ. ಐವರು ಮಹಿಳೆಯರು ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಕಾರ್ಮಿಕರು ತಕ್ಕ ಪಾಠ ಕಲಿಸುತ್ತಾರೆ: ಬೃಂದಾ ಕಾರಟ್

ಮೇ 6 ರಂದು ಮಸೀದಿಯೊಳಗೆ ಚಿತ್ರೀಕರಣ ಮಾಡಬೇಕೆಂದು ಹೋಗಿದ್ದ ಅಧಿಕಾರಿಗಳು ಬರಿಗೈಲಿ ವಾಪಸ್ಸಾಗಿದ್ದರು. ನಾವು ಅದಕ್ಕೆ ಅನುಮತಿ ಕೊಡಲ್ಲ ಕೋರ್ಟ್ ಆದೇಶ ಮಾಡಿಲ್ಲ. ಎಂದು ಗ್ಯಾನವಾಪಿ ಮಸೀದಿ ನಿರ್ವಹಣಾ ಸಮಿತಿ ಹೇಳಿತು. ಹೀಗಾಗಿ, ಮಸೀದಿಯೊಳಗೆ ಸರ್ವೇಕ್ಷಣೆ ಮಾಡಲು ಹೋದವರು ಬರಿಗೈಯಲ್ಲಿ ಮರಳಬೇಕಾಯಿತು.

ಹೀಗಾಗಿ ಇಂದು (13 ಮೇ2021) ರಂದು ಮಸೀದಿಯಲ್ಲಿ ಚಿತ್ರೀಕರಿಸಬಹುದೆಂದು ಇದಕ್ಕೆ ಯಾರ ಅಡ್ಡಿಯು ಬರಬಾರದೆಂದು ವಾರಣಾಸಿ ನ್ಯಾಯಲಯ ತಿಳಿಸಿದೆ.

ಸಿವಿಲ್ ಕೋರ್ಟಿನ ಆದೇಶ ಕಾನೂನಿನ ಉಲ್ಲಂಘನೆ : ವಾರಣಾಸಿಯ ಸಿವಿಲ್ ನ್ಯಾಯಾಲಯವೊಂದು ಅಲ್ಲಿರುವ ಗ್ಯಾನವಾಪಿ ಮಸೀದಿಯಿದ್ದಲ್ಲಿ ಒಂದು ದೇವಸ್ಥಾನ ಅಸ್ತಿತ್ವದಲ್ಲಿ ಇತ್ತೇ  ಎಂದು ಖಚಿತ ಪಡಿಸಿಕೊಳ್ಳಲು ಒಂದು ಸರ್ವೇ ನಡೆಸಬೇಕು ಎಂದು ಭಾರತದ  ಪುರಾತತ್ವ ಸರ್ವೇ (Archaeological Survey of India )ಗೆ ಆದೇಶ ನೀಡಿರುವುದು ಈ ವಿಷಯದಲ್ಲಿಈಗಿರುವ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಪ್ರತಿಕ್ರಿಯಿಸಿದೆ.

ಪೂಜಾಸ್ಥಳಗಳು (ವಿಶೇಷ ಉಪಬಂಧಗಳು) ಕಾಯ್ದೆ ಇಂಥ ಎಲ್ಲ ಪೂಜಾಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ವಿಧಿಸುತ್ತದೆ. ಆದ್ದರಿಂದ ಉನ್ನತ ನ್ಯಾಯಾಂಗ ತಕ್ಷಣವೇ ಮಧ್ಯಪ್ರವೇಶಿಸಿ ಕೆಳಗಣ ಕೋರ್ಟಿನ ಆದೇಶವನ್ನು ತೊಡೆದು ಹಾಕಬೇಕು ಎಂದು  ಸಿಪಿಐ(ಎಂ) ಪೊಲಿಟ್ ಬ್ಯುರೋ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *