ಗ್ಯಾನವ್ಯಾಪಿ ಮಸೀದಿ ಸರ್ವೇ ಅಧಿಕಾರಿ ಅಜಯ್‌ ಕುಮಾರ್‌ ಮಿಶ್ರಾ ವಜಾ

  • ವರದಿ ನೀಡಲು ಇನ್ನೆರಡು ದಿನ ಅವಕಾಶ
  • ಸರ್ವೇ ಅಧಿಕಾರಿ ಅಜಯ್ ಕುಮಾರ್ ಮಿಶ್ರಾ ವಜಾ

ವಾರಾಣಾಸಿ: ಗ್ಯಾನವ್ಯಾಪಿ ಮಸೀದಿಯ ಚಿತ್ರೀಕರಣ ಮಾಡಲು ಆಯೋಜಿಸಿದ್ದ ಅಜಯ್ ಕುಮಾರ್ ಮಿಶ್ರಾ ಅವರನ್ನು ಕೋರ್ಟ್ ವಜಾಗೊಳಿಸಿದೆ. ಈ ಮೊದಲು ಮಿಶ್ರಾ ಅವರನ್ನು ಆಯುಕ್ತರನ್ನಾಗಿ ವಾರಣಾಸಿ ಕೋರ್ಟ್ ನೇಮಕ ಮಾಡಿತ್ತು. ಗ್ಯಾನವ್ಯಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಇರುವುದು, ವಾರಣಾಸಿ ನ್ಯಾಯಲಯಕ್ಕೆ ವರದಿ ಸಲ್ಲಿಸುವುದಕ್ಕೂ  ಮೊದಲೇ ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗಿ, ಸೋರಿಕೆ ಮಾಡಿದಕ್ಕಾಗಿ ಅಸಮಾಧಾನಗೊಂಡಿರುವ ನ್ಯಾಯಾಲಯವು ಮಿಶ್ರಾ ಅವರನ್ನು ವಜಾಗೊಳಿಸಿದೆ.

ಗ್ಯಾನವಾಪಿ ಮಸೀದಿಯ ಪ್ರಕರಣವು ದಿನದಿಂದ ದಿನಕ್ಕೆ ಹೆಚ್ಚು ವಿವಾದಕ್ಕೀಡುಮಾಡುತ್ತಿದೆ. ಗ್ಯಾನವ್ಯಾಪಿ ಮಸೀದಿಯ ಚಿತ್ರೀಕರಣಕ್ಕೆ ಮೂವರು ವಿಶೇಷ  ಅಧಿಕಾರಿಗಳನ್ನು ನೇಮಿಸಿತ್ತು. ಸಮೀಕ್ಷೆಯ ವರದಿಯನ್ನು ಇಂದು(ಮೇ 17) ನೀಡಲು ಆದೇಶಿಸಿಸಲಾಗಿತ್ತು. ಆದರೆ ಗ್ಯಾನವ್ಯಾಪಿ ಸಮೀಕ್ಷೆ ವರದಿಯನ್ನು ಅಂತಿಮಗೊಳಿಸದೆಯೇ ವಿವಾದಿತ ಸ್ಥಳದ ಪ್ರಮುಖ ಮಾಹಿತಿಗಳೆಲ್ಲವನ್ನೂ ಬಹಿರಂಗಪಡಿಸಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.

ಅಜಯ್‌ ಕುಮಾರ್‌ ಮಿಶ್ರಾ ಅವರೊಂದಿಗೆ, ಇನ್ನಿಬ್ಬರು ಆಯುಕ್ತರಾದ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಅವರು ಕೋರ್ಟ್ ಕಮಿಷನರ್ ಮತ್ತು ಡೆಪ್ಯುಟಿ ಕೋರ್ಟ್ ಕಮಿಷನರ್ ಆಗಿ ಮುಂದುವರಿದಿದ್ದಾರೆ. ಎರಡು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವುದಾಗಿ ಮನವಿ ಮಾಡಿಕೊಂಡ ವಿಶಾಲ್ ಸಿಂಗ್ ಅವರಿಗೆ  ನ್ಯಾಯಲಯವು ಅನುಮತಿ ನೀಡಿದೆ.

ಅಸಹಕಾರದ ಹಿನ್ನೆಲೆಯಲ್ಲಿ ಮಿಶ್ರಾ ಅವರನ್ನು ವಜಾಗೊಳಿಸಲಾಗಿದೆ ಎಂದು ಸಹಾಯಕ ವಕೀಲ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ. “ಸುಮಾರು 50 ಪ್ರತಿಶತ ವರದಿ ಸಿದ್ಧವಾಗಿದೆ. ವರದಿಯನ್ನು ಅಂತಿಮಗೊಳಿಸಲು ಕಾಲಾವಕಾಶ ಕಡಿಮೆ ಇತ್ತು.  ವರದಿ ಸಲ್ಲಿಸಲು ನ್ಯಾಯಾಲಯ ಎರಡು ದಿನಗಳ ಕಾಲಾವಕಾಶ ನೀಡಿದೆ. ಅವರು (ಅಡ್ವೊಕೇಟ್-ಕಮಿಷನರ್ ಅಜಯ್ ಕುಮಾರ್ ಮಿಶ್ರಾ) ಸಹಕರಿಸಲಿಲ್ಲ” ಎಂದು ಸಿಂಗ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *