- ಗ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ
- ಶೇ.65ರಷ್ಟು ಸಮೀಕ್ಷೆ ಕಾರ್ಯ ಪೂರ್ಣ – ನಾಳೆಗೆ ಮುಕ್ತಾಯ
- ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಸೀದಿಯಲ್ಲಿ ಸರ್ವೇ
ವಾರಣಾಸಿ: ಹಲವು ದಿನಗಳಿಂದ ವಿವಾದಕ್ಕೀಡಾಗಿದ್ದ ಗ್ಯಾನವಾಪಿ ಮಸೀದಿ ಸಮೀಕ್ಷೆಯು ಮುಗಿದಿದೆ. ಪಶ್ಚಿಮ ದಿಕ್ಕಿನಲ್ಲಿ ಕೈಗೊಂಡ ಸಮೀಕ್ಷೆ ವೇಳೆ ಪತ್ತೆಯಾದ ಶಿವಲಿಂಗ ಜಾಗವನ್ನು ನಿರ್ಭಂಧಿಸಬೇಕೆಂದು ಜಿಲ್ಲೆಯ ಅಧಿಕಾರಿಗಳಿಗೆ ನ್ಯಾಯಲಯವು ಆದೇಶ ನೀಡಿದೆ. ಅಲಹಾಬಾದ್ ಹೈಕೋರ್ಟ್ ಆದೇಶದ ಬೆನ್ನಲ್ಲೇ ಭಾರೀ ಸುರಕ್ಷತೆಯೊಂದಿಗೆ ಕೋರ್ಟ್ ನೇಮಿಸಿದ ಸಮಿತಿ ಸರ್ವೇ ಕಾರ್ಯ ಆರಂಭಿಸಿತ್ತು.
ಪತ್ತೆಯಾಗಿರುವ ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಮೊಘಲ್ ದೊರೆ ಔರಂಗಜೇಬ್ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯಲ್ಲಿ ನಡೆಸಲಾದ ವಿಡಿಯೋ ಚಿತ್ರೀಕರಣವು ‘ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ತಮ್ಮ ವಾದವನ್ನು ಮತ್ತಷ್ಟು ದೃಢೀಕರಿಸುತ್ತಿದೆ’ ಎಂದು ಅರ್ಜಿದಾರರ ಪರ ವಕೀಲ ಹರಿಶಂಕರ ಜೈನ್ ಹೇಳಿದ್ದಾರೆ.
ಸಮೀಕ್ಷೆ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ಮಂದಿರ ದರ್ಶನಕ್ಕೆ ಬರುವ ಭಕ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಂಗಾ ನದಿ ದ್ವಾರ ಹಾಗೂ ಧೂಂಡಿ ರಾಜ್ ಗಣೇಶ್ ಮಾರ್ಗದ ಮೂಲಕ ಭಕ್ತರು ದರ್ಶನ ಪಡೆದಿದ್ದಾರೆ.
ಇನ್ನೊಬ್ಬ ಹಿಂದೂಪರ ವಕೀಲ ಮದನ್ ಮೋಹನ್ ಯಾದವ್ ಮಾತನಾಡಿ, ‘ಶೇ.65ರಷ್ಟುಸಮೀಕ್ಷೆ ಮುಗಿದಿದೆ. ಉಳಿದ ಸಮೀಕ್ಷೆಗೆ ಸೋಮವಾರ ಮತ್ತು ಮಂಗಳವಾರದೊಳಗೆ ಕೋರ್ಟ್ ಸೂಚನೆಯಂತೆ ಸಮೀಕ್ಷೆ ಮುಗಿಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.