ಗುತ್ತಿಗೆದಾರರ ಬಾಕಿ ಮೊತ್ತ ನೀಡಲು ರಾಜ್ಯ ಸರ್ಕಾರಕ್ಕೆ 600 ರೂ.ಕೋಟಿ ಸಾಲ ಕೋರಿ ಬಿಬಿಎಂಪಿ ಪ್ರಸ್ತಾವನೆ

ಬೆಂಗಳೂರು: ಗುತ್ತಿಗೆದಾರರಿಗೆ ರೂ.2500 ಕೋಟಿ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ಈ ತಕ್ಷಣ ಕೆಲವು ಬಾಕಿಯನ್ನು ತೀರಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ರೂ. 600 ಕೋಟಿ ಸಾಲ ನೀಡುವಂತೆ ಪ್ರಸ್ತಾವನೆ ಸಲ್ಲಿಸದೆ. ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿ ಮಾಡಬೇಕಾಗಿದೆ. ಪಾಲಿಕೆಯು 2020 ರಿಂದ ಗುತ್ತಿಗೆದಾರರಿಗೆ ಯಾವುದೇ ಹಣವನ್ನು ಪಾವತಿ ಮಾಡಿಲ್ಲ ಎಂದು ವರದಿಯಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಈ ಬಗ್ಗೆ ವರದಿ ಮಾಡಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು, 15 ದಿನಗಳ ಹಿಂದೆ 600 ಕೋಟಿ ರೂಪಾಯಿ ಸಾಲ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ಸಾಲವನ್ನು ಬಿಡುಗಡೆಗೊಳಿಸಬೇಕೆಂದು ಪಾಲಿಕೆಯು ರಾಜ್ಯ ಸರ್ಕಾರವನ್ನು ಮನವಿ ಮಾಡಿದೆ ಎಂದು ಹೇಳಿದ್ದಾರೆ.

ʻಬಿಲ್‌ ಮೊತ್ತವನ್ನು ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ನೀಡಲಾಗುತ್ತದೆ. “ಕಾಮಗಾರಿಗಳನ್ನು ಪೂರ್ಣಗೊಳಿಸಿದ ಮತ್ತು ಬಿಲ್‌ಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಿದ ಗುತ್ತಿಗೆದಾರರು ಮುಖ್ಯ ಖಾತೆ ಅಧಿಕಾರಿ ಕಚೇರಿಯ ಮೂಲಕ ಭಾಗಶಃ ಪಾವತಿಯನ್ನು ಪಡೆಯುತ್ತಾರೆ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಳವಡಿಕೆ, ಚರಂಡಿ ನಿರ್ಮಾಣ ಕಾಮಗಾರಿಗಳು, ರಸ್ತೆ ಡಾಂಬರೀಕರಣ ಮತ್ತು ಇತರ ಮೂಲಭೂತ ಸೌಕರ್ಯಗಳಂತಹ ಯೋಜನೆಗಳನ್ನು ಜಾರಿಗೊಳಿಸಿದ ಸುಮಾರು 1,300 ಗುತ್ತಿಗೆದಾರರು ಕೋವಿಡ್ ಸಾಂಕ್ರಾಮಿಕದಿಂದ ಪ್ರತಿಕೂಲ ಪರಿಣಾಮ ಬೀರಿದ್ದಾರೆ ಎನ್ನಲಾಗಿದೆ. ಸಾಲ ಮಾಡಿ ಬಿಬಿಎಂಪಿ ಯೋಜನೆಗಳಲ್ಲಿ ಹಣ ಹೂಡಿದ್ದ ಕೆಲವರು ನಿರೀಕ್ಷೆಗೂ ಮೀರಿ ತಿಂಗಳಿಗೆ ಬಡ್ಡಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.

ನಾಗರಿಕ, ಶಿಕ್ಷಣ, ತ್ಯಾಜ್ಯ ನಿರ್ವಹಣೆ, ಮೂಲಸೌಕರ್ಯ, ಯೋಜನೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾಮಗಾರಿ ಬಾಕಿ ಇದೆ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ. ಯೋಜನೆ ರೂಪಿಸಿ ಮಂಜೂರಾತಿ ನೀಡಿದ್ದರೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಮುಂದಾಗದ ಕಾರಣ ಕಾಮಗಾರಿ ಬಾಕಿ ಉಳಿದಿದೆ ಎಂದಿದ್ದಾರೆ.

ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಬಿಲ್ಲುಗಳ ಇತ್ಯರ್ಥಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

Donate Janashakthi Media

Leave a Reply

Your email address will not be published. Required fields are marked *