ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಕಂದಾಯ ಸಚಿವರು ಹಾಗೂ ಗೃಹ ಸಚಿವರು ಆರೋಗ್ಯ ಸಚಿವರ ಮೇಲೆ ಗರಂ ಆದ ಪ್ರಸಂಗ ನಡೆದಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೋವಿಡ್ ಸಂಬಂಧಿಸಿದಂತೆ ಟೆಸ್ಟಿಂಗ್ ನ ಡಾಟಾ ಎಂಟ್ರಿ ಸಮಸ್ಯೆಗಳು ಸಂಭವಿಸುತ್ತಿವೆ. ಹಲವು ಲೋಪಗಳು ಸಂಭವಿಸುತ್ತಿದ್ದರೂ ಸಹ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಗೃಹ ಸಚಿವರು ಗರಂ ಆದರು.
ಇದನ್ನು ಓದಿ: ಕೋವಿಡ್ ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಇರಲಿ – ನವಾಬ್ ಮಲ್ಲಿಕ್
ಕಳೆದ ವರ್ಷ ಆರಂಭವಾದ ಕೊರೊನಾಕ್ಕೆ ಸಂಬಂಧಿಸಿದ ಡಾಟಾ ಎಂಟ್ರಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆಗಲೇ ಅವುಗೆಲ್ಲವನ್ನು ಸರಿಪಡಿಸಬೇಕಾಗಿತ್ತು. ಆದರೂ ಸಹ ಸಮಸ್ಯೆ ಇನ್ನೂ ಮುಂದುವರೆದಿದೆ. ಇದು ಸರಿಯಾದುದ್ದಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಹಲವು ಜಿಲ್ಲಾಡಳಿತಗಳು ಗುತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇದುವರೆಗೂ ಸಂಬಳ ನೀಡಿಲ್ಲ ಎಂಬ ದೂರಿನ ಬಂದಿವೆ. ಮುಖ್ಯ ಕಾರ್ಯದರ್ಶಿ ಸಂಬಳ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೂ ದೂರುಗಳು ಬಂದಿವೆ. ಸಂಬಳವಿಲ್ಲದೇ ವೈದ್ಯರು ಹಾಗೂ ನರ್ಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮೇಲೆ ಕಂದಾಯ ಸಚಿವ ಆರ್ ಅಶೋಕ ಗರಂ ಆಗಿದ್ದಾರೆ.
ಇದನ್ನು ಓದಿ: ರೆಮಿಡಿಸಿವರ್ ಔಷಧ ಅಭಾವದಿಂದ ಸಾವಿನ ಪ್ರಮಾಣ ಹೆಚ್ಚಳ, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ಕೋವಿಡ್ ನಿಯಂತ್ರಣದಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿದ್ದೇವೆ ಎಂದಿರುವ ಸಚಿವರು ಟೆಸ್ಟಿಂಗ್ ಮತ್ತು ಟ್ರೇಸಿಂಗ್ ವಿಚಾರದಲ್ಲಿ ಯಾಕೆ ಸಾಕಷ್ಟು ಗಮನಹರಿಸುತ್ತಿಲ್ಲವೆಂದು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ರವರಿಗೆ ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಸೋಮವಾರ ವಿಡಿಯೊ ಸಂವಾದ: ‘ಬೆಂಗಳೂರು ವ್ಯಾಪ್ತಿಯ ಸಂಸದರು, ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸೋಮವಾರ(ಏಪ್ರಿಲ್ 19)ದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೊ ಸಂವಾದ ನಡೆಸಲಿದ್ದಾರೆ. ಅಂದು ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಚರ್ಚಿಸಲಿದ್ದೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ತಿಳಿಸಿದರು.
‘7,500 ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.