ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣವೇನು? ಗುರುಪ್ರಸಾದ್ ಅವರ 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದ ಪೋಲೀಸರು-ಸಾಕ್ಷಿಗಳಿಗಾಗಿ ಹುಡುಕಾಟ

ಬೆಂಗಳೂರು : ಕನ್ನಡ ಬೆಳ್ಳಿತೆರೆಯ ಖ್ಯಾತ ನಿರ್ದೇಶಕರೆಂದೇ ಹೆಸರಾದ ಗುರುಪ್ರಸಾದ್ ಸಾವಿನ ಕುರಿತು ಇನ್ನೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಗುರುಪ್ರಸಾದ್ ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಮೃತದೇಹ ಅರ್ಧಂಬರ್ಧ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆದರೆ  ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸರಿಯಾದ ಕಾರಣ ಏನೆಂಬುದು ಇದುವರೆಗೂ ಪತ್ತೆಯಾಗಿಲ್ಲ.

ನಿರ್ದೇಶಕ ಗುರುಪ್ರಸಾದ್‌ ಅವರ ಹೆಂಡತಿ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಸಾಲಗಾರರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ ಕೊಟ್ಟು ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದುರು ದಾಖಲಿಸಿದ್ದರು.

ಇದನ್ನೂ ಓದಿ : ಫೆಂಗಲ್ ಚಂಡಮಾರುತ ಅನಾಹುತ :‌ ಪ್ರವಾಹದಿಂದ ಕೊಚ್ಚಿ ಹೋದ ಕಾರು – ಬಸ್

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಗುರುಪ್ರಸಾದ್ ಅವರ 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡು ಅವುಗಳಲ್ಲಿ ಆತ್ಮಹತ್ಯೆಗೆ ಕಾರಣವಾಗುವಂತಹ ಏನಾದರೂ ಸಾಕ್ಷಿಗಳು ಸಿಗಬಹುದಾ ಎಂದು ಪರಿಶೀಲನೆ ಮಾಡಿದ್ದಾರೆ.

ಕೆಲವು, ಮೊಬೈಲ್‌ಗೆ ಸ್ಟ್ಯಾಂಗ್ ಪಾಸ್‌ವರ್ಡ್ ಇದ್ದ ಅವುಗಳನ್ನು ತಜ್ಞರಿಂದ ತೆಗೆಸಿ ನೋಡಿದ್ದರು. ಆದರೂ ಹೆಚ್ಚಿನ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸ್ವತಃ ಗುರುವಸಾದ್ ಅವರೇ ಕೆಲವು ಮಾಹಿತಿಗಳನ್ನು ಡಿಲೀಟ್ ಮಾಡಿರಬಹುದು ಎಂದು ಅವರ ನಾಲ್ಕು ಮೊಬೈಲ್‌ಗಳಲ್ಲಿನ ಎಲ್ಲ ಮಾಹಿತಿಗಳನ್ನು ಕಲೆಹಾಕಲು ಎಫ್‌ಎಸ್‌ಎಲ್‌ಗೆ ಕಳುಹಿಸಿ ರಿಡ್ರೈವ್ ಮಾಡಿಸಲಾಗಿದೆ.

ಆದರೆ, ಎಫ್‌ಎಸ್‌ಎಲ್ ವರದಿಯಲ್ಲಿಯೂ ಕೂಡ ಯಾವುದೇ ಆತ್ಮಹತ್ಯೆಗೆ ಕಾರಣವಾಗಿವ ಅಂಶಗಳು ಕಂಡುಬಂದಿಲ್ಲ. ಇನ್ನು ಫೋನ್ ಕರೆಗಳ ಲಿಸ್ಟ್‌ನಲ್ಲಿಯೂ ಅನುಮಾನಾಸ್ಪದವಾಗಿ ಮಾತನಾಡಿರುವ ಅಂಶಗಳು ಪತ್ತೆಯಾಗಿಲ್ಲ. ಸಿನಿಮಾಗೆ ಸಂಬಂಧಪಟ್ಟ ವಿಚಾರಗಳು, ಸಂಭಾಷಣೆಗಳು ಹಾಗೂ ಚಾಟಿಂಗಳು ಮಾತ್ರ ಸಿಕ್ಕಿವೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ : ವಾಯುಭಾರ ಕುಸಿತ: ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ಭರ್ಜರಿ ಮಳೆ ನಿರೀಕ್ಷೆ – IMD ಮುನ್ಸೂಚನೆ Janashakthi Media

Donate Janashakthi Media

Leave a Reply

Your email address will not be published. Required fields are marked *