ಬೆಂಗಳೂರು: ವಿವಾಹಿತ ಮಹಿಳೆಯಿಂದ ಪೂಜೆ ಹೆಸರಿನಲ್ಲಿ 1 ಕೋಟಿ ರೂ.ಅಧಿಕ ನಗದು, 100 ಗ್ರಾಂಗೂ ಅಧಿಕ ಚಿನ್ನ ಪಡೆದು ವಂಚಿಸಿದಲ್ಲದೆ, ಪ್ರಶ್ನಿಸಿದಾಗ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಗರದಲ್ಲಿ ನಡೆದಿದ್ದೂ, ಸ್ವಾಮೀಜಿ ಸೇರಿ ಇಬ್ಬರ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಾಯಿತ್ರಿನಗರ ನಿವಾಸಿ ರೂಪಶ್ರೀ ಎಂಬವರು ನೀಡಿದ ದೂರಿನ ಮೇರೆಗೆ ಡಾ. ಕಿರಣ್ ಕುಮಾರ್ ಸ್ವಾಮೀಜಿ ಮತ್ತು ಅವರ ಸಹಚರ ಲೋಹಿತ್ ಎಂಬಾತನ ವಿರುದ್ಧ ಸುಬ್ರಹ್ಮಣ್ಯನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನಕಗಿರಿ ಉತ್ಸವ: ಈವೆಂಟ್ ಮ್ಯಾನೇಜ್‌ಮೆಂಟ್ ಮಾಲೀಕನಿಗೆ ₹3 ಕೋಟಿ ವಂಚನೆ
ದೂರುದಾರ ಮಹಿಳೆಯ ಪತಿ ಮತ್ತು ಇಬ್ಬರು ಮಕ್ಕಳೂ ವಿದೇಶಿದಲ್ಲಿದ್ದಾರೆ. ಗಾಯಿತ್ರಿನಗರದಲ್ಲಿ ತಂದೆಯೊಂದಿಗೆ ವಾಸವಾಗಿದ್ದಾರೆ. ಈ ನಡುವೆ 3-4 ವರ್ಷಗಳ ಹಿಂದೆ ಪರಿಚಯವಾಗಿದ್ದ ಕಿರಣ್ ಕುಮಾರ್ ನಿಮ್ಮ ಕುಟುಂಬದ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಪತಿಯ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿದ್ದಾನೆ.
ಅದರಿಂದ ಹೆದರಿದ ಮಹಿಳೆ ಸೂಕ್ತ ಪೂಜೆ ಮಾಡುವಂತೆ ಕೋರಿದ್ದಾರೆ. ಬಳಿಕ ಗೂರೂಜಿ ಇದಕ್ಕೆ ಸಾಕಷ್ಟು ಖರ್ಚು ಆಗುತ್ತದೆ ಎಂದು ಹಂತ ಹಂತವಾಗಿ 1 ಕೋಟಿ ರೂ.ಗೂ ಅಧಿಕ ಹಣ ಪಡೆದಿದ್ದು, ಬಳಿಕ 100 ಗ್ರಾಮಕ್ಕೂ ಅಧಿಕ ಚಿನ್ನ ಪಡೆದಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖೀಸಿದ್ದಾರೆ.
ಅಲ್ಲದೆ, ಕೇಳಿದಾಗೆಲ್ಲ ಪೂಜೆಗಾಗಿ ಹಣ ನೀಡಿದರೂ ಸಹ ಸಮಸ್ಯೆ ಪರಿಹಾರವಾಗುತ್ತಿಲ್ಲ, ಮಾನಸಿಕ ನೆಮ್ಮದಿ ಇಲ್ಲ. ಹಣ ವಾಪಸ್ ಕೊಡಿ ಎಂದು ಅವರ ಮನೆಗೆ ಹೋಗಿ ಮಹಿಳೆ ಕೇಳಿದ್ದಾರೆ. ಆಗ ಕಿರಣ್ ಕುಮಾರ್ ಲೋಹಿತ್, ಅವಾಚ್ಯ ಪದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ ಬನ್ನಿ | Have – Had – Has ಬಳಸುವುದು ಹೇಗೆ? | ತೇಜಸ್ವಿನಿ Janashakthi Media