‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’; ಗುಲಾಂ ನಬಿ ಆಜಾದ್‌ ಹೊಸ ಪಕ್ಷ ಅನಾವರಣ

ಜಮ್ಮು: ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟವನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಗುಲಾಂ ನಬಿ ತಾವೇ ಹೊಸದಾಗಿ ಕಟ್ಟಿದ ಪಕ್ಷಕ್ಕೆ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದರು.

ಆಜಾದ್‌ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇವರು ಕಾಂಗ್ರೇಸ್‌ ತೊರೆದು ಹೊಸ ಪಕ್ಷದ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಮುನ್ನವೇ ಘೋಷಣೆ ಮಾಡಿದ್ದರು.

‘ನಮ್ಮ ಹೊಸ ಪಕ್ಷಕ್ಕೆ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನನಗೆ ಕಳುಹಿಸಲಾಗಿತ್ತು. ‘ಹಿಂದೂಸ್ತಾನಿ’ ಎಂಬುದು ಹಿಂದಿ ಮತ್ತು ಉರ್ದು ಮಿಶ್ರಣವಾಗಿದೆ. ಪಕ್ಷದ ಹೆಸರೂ ಕೂಡ ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾನು ಬಯಸುತ್ತೇನೆ. ಹಾಗಾಗಿಯೇ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಹೆಸರಿಡಲಾಗಿದೆ‘ ಎಂದು ಅವರು ಹೇಳಿದರು.

ಹೊಸ ಪಕ್ಷದ ದ್ವಜವನ್ನು ಅನಾವರಣಗೊಳಿಸಿದ್ದು, ಸಾಸಿವೆ, ಬಿಳಿ, ನೀಲಿ ಮೂರು ಬಣ್ನಗಳನ್ನು ಹೊಂದಿರುವ ಧ್ವಜವನ್ನು ಗುಲಾಂ ನಬಿ ಬಿಡುಗಡೆ ಮಾಡಿದ್ದಾರೆ. ಸಾಸಿವೆ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿನ ಏಕತೆಯನ್ನು ಸೂಚಿಸಿದರೆ, ಬಳಿ ಬಣ್ಣವು ಶಾಂತಿಯನ್ನು ಮತ್ತು ನೀಲಿ ಬಣ್ಣವು ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಯನ್ನು ಸೂಚಿಸುತ್ತದೆ ಎಂದು ಹೇಳಿರುವ ಗುಲಾಂ ನಬಿ ನಮ್ಮ ಪಕ್ಷದಲ್ಲಿ ವಯೋಮಿತಿ ಇಲ್ಲ ಎಂದು ಹೇಳಿದ್ದು, ಯುವಕರು ಮತ್ತು ಹಿರಿಯರು ನಮ್ಮ ಪಕ್ಷದಲ್ಲಿ ಸಹಬಾಳ್ವೆ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *