ಗುಜರಿ ಬಸ್ಸುಗಳನ್ನೇ ಬಳಸುತ್ತಿರುವ ಬಿಎಂಟಿಸಿ-ಜನಸಾಮಾನ್ಯರಲ್ಲಿ ಆತಂಕ

  • ಕಳಪೆ ಗುಣಮಟ್ಟದ ಮೂಲೆ ಸೇರಿರುವ ಗುಜರಿ ಬಸ್ಸುಗಳ ಬಳಕೆ
  • 6400 ಬಸ್ಸುಗಳನ್ನೆ ಸರಿಯಾಗಿ ನಿರ್ವಹಣೆ ಮಾಡದ ಬಿಎಂಟಿಸಿ
  • ಗುಜರಿ ಬಸ್ಸುಗಳನ್ನೇ ಬಳಸಲಾಗುತ್ತಿದೆ

ಬೆಂಗಳೂರು: ಡಕೋಟಾ ಬಸ್ಸುಗಳಿಗೆ ಹೊಸ ರೂಪನೀಡಲು ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಹೊಸ ಬಸ್ಸುಗಳನ್ನು ಖರೀದಿಸಲುವ ಬದಲು ಹಳೇಯ ಬಸ್ಸುಗಳಿಗೆ ಶೃಂಗಾರ ಮಾಡಿ ರಸ್ತೆಗೆ ಇಳಿಸುತ್ತಿದೆ. ಇದರಿಂದ ಜನಸಾಮಾನ್ಯರಲ್ಲಿ ಆತಂಕ ಮುಡುಗಟ್ಟಿದೆ.

ಬಿಎಂಟಿಸಿ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತ ಇದ್ದು, ಈಗಲೂ ಅದನ್ನೇ ಮರುಕಳಿಸುತ್ತಿದೆ. ಈಗ ಮತ್ತೆ ಬಿಎಂಟಿಸಿ ಬಸ್ ವಿಚಾರವಾಗಿ ನಗರದಾದ್ಯಂತ ಸುದ್ದಿಯಾಗುತ್ತಿದ್ದು, ಕಳಪೆ ಗುಣಮಟ್ಟದಲ್ಲಿ ಮೂಲೆ ಸೇರಿರುವ ಗುಜರಿ ಬಸ್ಸುಗಳನ್ನು ಬಳಸಲಾರಂಭಿಸುತ್ತಿದೆ.

9 ಲಕ್ಷಕ್ಕಿಂತ ಹೆಚ್ಚು ಕಿಲೋಮೀಟರ್‌ ಓಡಿರುವ ಬಸ್ಸುಗಳು ಪ್ರಯಾಣಕರಿಗೆ ಸುರಕ್ಷತೆಯಲ್ಲ ಎಂದು ಗೊತ್ತಿದ್ದೆ, ಅಲ್ಲದೆ ಅವುಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಆದರೆ ರಾಜ್ಯ ರಸ್ತೆ ಸಾರಿಗೆ ನಿಗಮವು ಗುಜರಿಗೆ ಸೇರಿರುವ ನೂರಾರು ಬಸ್ಸುಗಳಿಗೆ ಹೊಸ ರೂಪ ನೀಡಲು ಮುಂದಾಗಿ ಎಂಬ ಮಾಹಿತಿ ಲಭ್ಯವಾಗಿದೆ.

ಗುಜರಿ ಸೇರಬೇಕಾದ 500ಕ್ಕೂ ಹೆಚ್ಚು ಬಸ್ಸುಗಳನ್ನು ಗುಜರಿಯವರು ಕೊಂಡುಕೊಳ್ಳಲು ನಿರಾಕರಿಸಿದ ಕಾರಣ, ಸ್ಕ್ರಾಫ್ ಮಾಡುವ ಬದಲು ಹೊಸ ಇಂಜನ್ ಅಳವಡಿಸಿಸಲಾಗುತ್ತಿದೆ. ಅವುಗಳನ್ನು ಸಾರಿಗೆ ನಿಗಮ ರಸ್ತೆಗಿಳಿಸಲು ಮುಂದಾಗಿದ್ದು, ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ಸಿಬ್ಬಂದಿಯವರಿಗೆ ಆತಂಕ ಮನೆಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಟಿಸಿ ಉಪಾಧ್ಯಾಕ್ಷ ವೆಂಕಟೇಶ್ ಎಂಬುವವರು, ಹಳೆಯ ಬಸ್ಸುಗಳನ್ನು ಮತ್ತೆ ಗುಣಮಟ್ಟವಾಗಿ ತಯಾರಿಸಲು 9 ರಿಂದ 10 ಲಕ್ಷ ವೆಚ್ಚ ತಗಲುತ್ತದೆ. ಇದು ಸ್ವಲ್ಪಮಟ್ಟಗೆ ನಮಗೆ ಹೊರೆಯಾಗುತ್ತದೆ ಇದರಿಂದ ಹೊಸ ಬಸ್ ಗಳ ಖರೀದಿಗೆ ಹಣವಿಲ್ಲ ಹಾಗಾಗಿ ಕಳೆದ ಹತ್ತು ವರ್ಷದ ಹಿಂದೆ  ಖರೀದಿಸಿ ಗುಜರಿಗೆ ಹಾಕಬೇಕಿದ್ದ ಬಸ್ಸುಗಳನ್ನ ಮತ್ತೆ ಓಡಿಸಬೇಬೇಕಾಗಿ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *