ಗುವಾಹಟಿ: ಮಹಿಳಾ ಪೊಲೀಸ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಅಸ್ಸಾಂ ನ್ಯಾಯಾಲಯವು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಟ್ವೀಟ್‌ಗಳ ಪ್ರಕರಣದಲ್ಲಿ ಅಸ್ಸಾಂನ ಮತ್ತೊಂದು ನ್ಯಾಯಾಲಯವು ಜಾಮೀನು ನೀಡಿತ್ತು, ಅದರ ಬೆನ್ನಲ್ಲೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದ ಆಧಾರದಲ್ಲಿ ಮತ್ತೆ ಮರು ಬಂಧಿನಕ್ಕೊಳಗಾಗಿದ್ದರು.
ಅಸ್ಸಾಂನ ಕೊಕ್ರಜಾರ್‌ನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅವರ ವಿರುದ್ಧ ದೂರು ದಾಖಲಿಸಿದ ನಂತರ ಅಸ್ಸಾಂ ಪೊಲೀಸರ ತಂಡವು ಕಳೆದ ಗುರುವಾರ ಗುಜರಾತ್‌ನ ಪಾಲನ್‌ಪುರದಿಂದ ಮೇವಾನಿ ಅವರನ್ನು ಮೊದಲ ಬಾರಿಗೆ ಬಂಧಿಸಿತು. ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‌ಗೆ ಬರಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ಅನುಚಿತವಾಗಿ ವರ್ತಿಸಿರುವ ಮೇವಾನಿ ನಮ್ಮ ಮೇಲೆ ಕೋಪಗೊಂಡರು. ಹೆಚ್ಚು ಕೆಟ್ಟ ಪದಗಳನ್ನು ಬಳಸಿದರು” ಎಂದು ಅಧಿಕಾರಿ ದೂರು ನೀಡಿದ್ದರಿಂದ ಮರು ಬಂಧನವಾಗಿತ್ತು.
“ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ಇದನ್ನು ಮಾಡಿದ್ದಾರೆ. ಅವರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ಇದನ್ನು ರೋಹಿತ್ ವೇಮುಲಾಗೆ ಮಾಡಿದರು. ಈಗ ಅವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಈ ಹಿಂದೆ ಜಿಗ್ನೇಶ್ ಮೇವಾನಿ ಪ್ರತಿಕ್ರಿಯಿಸಿದ್ದರು.