ಗಾಂಧಿನಗರ: ಗುಜರಾತ್‌ನ ವಡೋದರಾದಲ್ಲಿ ಹರ್ನಿ ಸರೋವರದಲ್ಲಿ ದೋಣಿ ಮುಳುಗಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ ಗಂಟೆಗಳ ನಂತರ, ಗುರುವಾರ ರಾತ್ರಿ ಪೊಲೀಸರು ಬೋಟಿಂಗ್ ಸೌಲಭ್ಯವನ್ನು ನಡೆಸುತ್ತಿರುವ ಕಂಪನಿಯ ಉದ್ಯೋಗಿಗಳು ಮತ್ತು ಬೋಟ್ ನಿರ್ವಾಹಕರು ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೋಣಿ ದುರಂತ
ಹರ್ನಿ ಪೊಲೀಸ್ ಠಾಣೆಯಲ್ಲಿ ವಡೋದರಾ ಮುನ್ಸಿಪಲ್ ಕಾರ್ಪೊರೇಶನ್ (ವಿಎಂಸಿ) ಕಾರ್ಯನಿರ್ವಾಹಕ ಇಂಜಿನಿಯರ್ ಎಫ್‌ಐಆರ್ ದಾಖಲಿಸಿದ್ದು, “ಮಕ್ಕಳು ಲೈಫ್ ಜಾಕೆಟ್‌ಗಳಿಲ್ಲದೆ ಇದ್ದರು ಮತ್ತು ಮುಂಭಾಗದಿಂದ ನೀರು ನುಗ್ಗಿದ ನಂತರ ದೋಣಿ ಮಗುಚಿದೆ. ಆರೋಪಿಗಳು ಉದ್ದೇಶಪೂರ್ವಕ ಮತ್ತು ನಿರ್ಲಕ್ಷ್ಯದ ಕೃತ್ಯಗಳನ್ನು ಎಸಗಿದ್ದು, ಹೀಗಾಗಿ ಶಾಲೆಯ ಪಿಕ್ನಿಕ್‌ನಲ್ಲಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಸಾವಿಗೀಡಾಗಿದ್ದಾರೆ” ಎಂದು ದೂರಿದ್ದಾರೆ. ದೋಣಿ ದುರಂತ
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿ ಅಳವಡಿಸಲು ಕೇರಳ ಸರ್ಕಾರ ನಿರ್ಧಾರ!
“ಆರೋಪಿಗಳು ಬೋಟ್‌ನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಲೈಫ್ ಜಾಕೆಟ್‌ಗಳನ್ನು ಒದಗಿಸುವ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಿಲ್ಲ. ಜಜೊತೆಗೆ ದೋಣಿಯಲ್ಲಿ ಅದರ ನೈಜ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಪ್ರಯಾಣ ಮಾಡಿಸಲಾಗಿದೆ. ದೋಣಿ ಸವಾರಿ ಮಾಡುವವರಿಗೆ ಪ್ರಮುಖ ಎಚ್ಚರಿಕೆಗಳ ಫಲಕಗಳನ್ನು ಅಳವಡಿಸದಿರುವುದು ಸೇರಿದಂತೆ ದೋಣಿಗಳ ನಿರ್ವಹಣೆ ಮತ್ತು ಸುರಕ್ಷತಾ ಸಾಧನಗಳನ್ನು ಒದಗಿಸುವಲ್ಲಿ ಎಡವಿದ್ದಾರೆ” ಎಂದು ಎಫ್‌ಐಆರ್ ಹೇಳಿದೆ. ದೋಣಿ ದುರಂತ
ಲೇಕ್ ಜೋನ್ ಎಂದು ಕರೆಯಲ್ಪಡುವ ಹರ್ನಿ ಸರೋವರದಲ್ಲಿ ಬೋಟಿಂಗ್ ಸೌಲಭ್ಯವನ್ನು ಕೋಟಿಯಾ ಪ್ರಾಜೆಕ್ಟ್ಸ್ ಎಂಬ ಖಾಸಗಿ ಕಂಪನಿಯು ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌ನೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಪ್ಪಂದದಡಿಯಲ್ಲಿ ನಡೆಸುತ್ತಿದೆ.
ಇದನ್ನೂ ಓದಿ: ಬಿಲ್ಕೀಸ್ ಬಾನೋ ಪ್ರಕರಣ | ಅಪರಾಧಿಗಳ ಶರಣಾಗತಿಗೆ ಸಮಯಾವಕಾಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
ಈ ಮಧ್ಯೆ, ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಶುಕ್ರವಾರ ವಡೋದರಾದ ಸಮಾಧಿ ಮತ್ತು ಸ್ಮಶಾನದ ಮೈದಾನದಲ್ಲಿ ಸೇರಿದ್ದರು. ಶುಕ್ರವಾರ ನಸುಕಿನ 2 ಗಂಟೆಗೆ ನಗರದ ಪಾನಿಗೇಟ್ ಪ್ರದೇಶದ ಸ್ಮಶಾನದಲ್ಲಿ 4ನೇ ತರಗತಿ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಯಿತು. 3 ಮತ್ತು 6 ನೇ ತರಗತಿಯ ಇತರ ಇಬ್ಬರು ಮಕ್ಕಳ ಅಂತ್ಯಕ್ರಿಯೆಯ ವಿಧಿಗಳು ಶುಕ್ರವಾರವೆ ನಡೆಯಲಿದೆ.
“ನನ್ನ ಸೊಸೆ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು. ಇಬ್ಬರು ಒಡಹುಟ್ಟಿದವರಲ್ಲಿ ಅವಳು ಹಿರಿಯಳು. ದೋಣಿ ವಿಹಾರವನ್ನು ಒಳಗೊಂಡಿರುವ ಪಿಕ್ನಿಕ್ ಬಗ್ಗೆ ಅವಳು ಉತ್ಸುಕಳಾಗಿದ್ದಳು. ಮಕ್ಕಳನ್ನು ಪಿಕ್ನಿಕ್ಗಾಗಿ ತಿಂಡಿಗಳನ್ನು ಒಯ್ಯಲು ಶಾಲೆಯಿಂದ ಕೇಳಲಾಯಿತು. ಅವಳು ತನ್ನ ನೆಚ್ಚಿನ ತಿಂಡಿಯನ್ನು ತನ್ನ ತಾಯಿಯಿಂದ ಅಡುಗೆ ಮಾಡಿಸಿ ಕೊಂಡೊಯ್ದಿದ್ದಳು… ಈ ದುರಂತ ಸಂಭವಿಸುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪರಿಹಾರ ನಮ್ಮ ಮಗುವನ್ನು ಮರಳಿ ತರಲಾಗಲಿ, ನಮ್ಮ ನೋವನ್ನು ಕಡಿಮೆ ಮಾಡಲಾಗಲಿ ಸಾಧ್ಯವಿಲ್ಲ” ಎಂದು ಅಪಘಾತದಲ್ಲಿ ಸಾವನ್ನಪ್ಪಿದ 4 ನೇ ತರಗತಿಯ ವಿದ್ಯಾರ್ಥಿಯೊಬ್ಬರ ಸೋದರ ಮಾವ ಹೇಳಿದ್ದಾರೆ.
ವಿಡಿಯೊ ನೋಡಿ: ಕೆಮಿಕಲ್ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು