ಮೈಸೂರು: ನಾನು ಭ್ರಷ್ಟಾಚಾರ ಮಾಡಿರೋದನ್ನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಟಿ ದೇವೇಗೌಡ, ಶಾಸಕ ಯತ್ನಾಳ್‌ಗೆ ಬಹಿರಂಗ ಸವಾಲು ಹಾಕಿದ್ದಾರೆ. ಮೈಸೂರು
ಮುಡಾದ ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರವೂ ಇದೇ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಕೆರಳಿ ಕೆಂಡವಾದ ಅವರು, ಯತ್ನಾಳ್‌ಗೆ ಏಕವಚನದಲ್ಲೇ ಬಹಿರಂಗ ಸವಾಲು ಹಾಕಿದರು. ಮೈಸೂರು
ಇದನ್ನೂ ಓದಿ: “ಫ್ಯೂರರ್” ಟ್ರಂಪ್ ಪ್ರಪಂಚದ ಮೇಲೆ ಮತ್ತು ಕಾರ್ಮಿಕ ವರ್ಗದ ಮೇಲೆ ಯುದ್ಧ ಘೋಷಿಸುತ್ತಾರೆ
ನನ್ನ ಯೋಗ್ಯತೆ, ನನ್ನ ಆಸ್ತಿ ಲೆಕ್ಕ ನಿನಗೇನು ಗೊತ್ತು? ನಿನಗೆ ತಾಕತ್ ಇದ್ದರೆ ನಿನ್ನ ಬಳಿ ನನ್ನದೇನಿದೆ ಎಂಬುದನ್ನು ಬಹಿರಂಗಪಡಿಸು. ನಿನ್ನ ವಿಚಾರವು ನನಗೆ ಗೊತ್ತಿದೆ. ನಾನು ಬಹಿರಂಗಪಡಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿರೋದನ್ನು ನೀನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಶಾಸಕನಾಗಿ ಬಂದಾಗ ಇದ್ದ ಆಸ್ತಿಗೂ, ಇವತ್ತಿನ ಆಸ್ತಿಗೂ ಏನು ವ್ಯತ್ಯಾಸ ಇದೆ ಅನ್ನೋದನ್ನು ನೀನು ತೆಗಿ. ಸೌಹಾರ್ಧ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನು ಎಲ್ಲಿಗೆ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವ? ಎಲ್ಲದನ್ನೂ ತೆಗಿಬೇಕಾ? ಎಂದು ಶಾಸಕ ಯತ್ನಾಳ್ ವಿರುದ್ಧ ಕೆಂಡಾಮಂಡಲರಾದರು.
ಇದನ್ನೂ ನೋಡಿ: ತೊಗರಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿ “ಕಲಬುರಗಿ ಬಂದ್