ಫೆ. 1 ಮತ್ತು 2ರಂದು: 50 ಸಾವಿರ ವರ್ಷಗಳ ನಂತರ ಹಸಿರು ಧೂಮಕೇತು ಭೂಮಿ ಸಮೀಪ ಹಾದು ಹೋಗಲಿದೆ

ಬೆಂಗಳೂರು: ಸುಮಾರು 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯ ಸಮೀಪ ಬಂದಿದ್ದ ಧೂಮಕೇತು, ಮತ್ತೆ ಇದೀಗ ಭೂಮಿಯ ಅತಿ ಸಮೀಪಕ್ಕೆ ಬರಲಿದೆ ಎಂದು ವರದಿಯಾಗಿದೆ. ಫೆಬ್ರವರಿ 1 ಮತ್ತು 2ರ ನಸುಕಿನ 3 ಗಂಟೆ ಸಮಯದಲ್ಲಿಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಧೂಮಕೇತು ಹಾದು ಹೋಗಲಿದ್ದು, ಬರಿಗಣ್ಣಿನಲ್ಲಿ, ಬೈನಾಕ್ಯುಲರ್‌ ಇಲ್ಲವೇ ದೂರದರ್ಶಕದ ಮೂಲಕ ನೋಡಬಹುದಾಗಿದೆ.

ಮೋಡಗಳು ಇಲ್ಲದೆ ಆಗಸವು ಶುಭ್ರವಾಗಿದ್ದಲ್ಲಿ ನೀಲಾಕಾಶದಲ್ಲಿ ಈ ಅದ್ಭುತ ದೃಶ್ಯವನ್ನು ಪ್ರತಿಯೊಬ್ಬರೂ ನೋಡಿ ಕಣ್ತುಂಬಿ ಕೊಳ್ಳಬಹುದಾಗಿದೆ. ಇದೊಂದು ವಿಭಿನ್ನ ರೀತಿಯ ಧೂಮಕೇತುವಾಗಿದ್ದು, ಸೌರವ್ಯೂಹದ ಆಚೆಗೆ ಇರುವ ಊತ್‌ರ್‍ ಕ್ಲೌಡ್‌ನಿಂದ ಹೊರಬಂದು ಇದೀಗ ಭೂಮಿಯ ಹತ್ತಿರ ಬರುತ್ತಿದೆ. ಆದ್ದರಿಂದ ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. ಈ ಧೂಮಕೇತು ನಮ್ಮಿಂದ 16 ಕೋಟಿ ಕೀ.ಮೀ ದೂರವಿದ್ದು, ಫೆಬ್ರವರಿ 1 ಮತ್ತು 2 ರಂದು ಕೇವಲ 4 ಕೋಟಿ 20 ಲಕ್ಷ ಕೀ.ಮೀ ಸಮೀಪಕ್ಕೆ ಬರಲಿದೆ.

ಬರಿಗಣ್ಣಿನಲ್ಲಿ ಬೆಳಗಿನ ಜಾವದಲ್ಲಿ ಎಲ್ಲರೂ ವೀಕ್ಷಿಸಬಹುದಾಗಿದೆ. ಈ ಧೂಮಕೇತು ಮತ್ತೊಮ್ಮೆ ಬರಲು 50 ಸಾವಿರ ವರ್ಷಗಳುಬೇಕು. ಇದರಿಂದ ಭೂಮಿಯ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಪ್ರತಿಯೊಬ್ಬರೂ ಈ ಅಪರೂಪದ ಧೂಮಕೇತು ನೋಡಿ ಆನಂದಿಸಿ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್‌.ಎಸ್‌.ಟಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 29ರ ಬೆಳಗಿನ ಜಾವ ಉತ್ತರ ಧ್ರುವ ನಕ್ಷತ್ರದ ಸಮೀಪ ಕಾಣಿಸಿಕೊಂಡಿದ್ದು, ಫೆಬ್ರವರಿ 1 ಹಾಗೂ 2 ರಂದು ಭೂಮಿಗೆ ಇನ್ನೂ ಸಮೀಪಕ್ಕೆ ಹಾದು ಬರಲಿದೆ. ಬೆಳಗಿನ ಜಾವ ಸಪ್ತರ್ಷಿ ಮಂಡಲದ ಸಮೀಪ ಇದನ್ನು ನೋಡಬಹುದಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *