ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಭಾರತ ಸರಕಾರ ಒಪ್ಪಿಕೊಂಡಿದೆಯೆನ್ನಲಾದ ವ್ಯಾಪಾರ ವ್ಯವಹಾರದ ವಿರುದ್ಧ ರೈತರ ಪ್ರತಿರೋಧ ಇನ್ನಷ್ಟು ಹೆಚ್ಚುತ್ತಿದೆ. ದೇಶಾದ್ಯಂತ ಹಲವಾರು ರೈತ ಸಂಘಟನೆಗಳ ಐಕ್ಯ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ಈ ಒಪ್ಪಂದದಲ್ಲಿ ಭಾರತದ ಕೃಷಿಯನ್ನು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ತೆರೆದಿರುವುದಾಗಿ ಘೋಷಿಸಿರುವ ಕೇಂದ್ರ ವಾಣಿಜ್ಯ ಮಂತ್ರಿ ಪೀಯೂಷ್ ಗೋಯಲ್ ರನ್ನು ವಜಾಮಾಡಬೇಕು ಮತ್ತು ಈ ಒಪ್ಪಂದಕ್ಕೆ ಸಹಿ ಹಾಕದಂತೆ ಪ್ರಧಾನ ಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿದೆ. ಫೆಬ್ರುವರಿ 17ರಂದು ಆನ್‍ಲೈನ್ ಪತ್ರಿಕಾಸಮ್ಮೇಳನದಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಈ ಆಗ್ರಹವನ್ನು ಮಾಡಲಾಗಿದೆ. ಯುಎಸ್

ಇದಲ್ಲದೆ ಭತ್ತ/ಗೋದಿ ರೈತರಿಗೆ ಕೊಡುವ ಬೋನಸ್ಸನ್ನು ಕೊನೆಗೊಳಿಸಬೇಕು ಎಂದು ಭಾರತ ಸರಕಾರದ ವೆಚ್ಚ ಕಾರ್ಯದರ್ಶಿ ಅಧಿಕೃತ ಪತ್ರ ಬರೆದಿರುವುದಾಗಿ ವರದಿಯಾಗಿದ್ದು, ಈ ರೈತ-ವಿರೋಧಿ ಪತ್ರವನ್ನು ಹಿಂತೆಗೆದುಕೊಳ್ಳಬೇಕು ಎಂದು ಎಸ್‍ಕೆಎಂ ಹಣಕಾಸು ಮಂತ್ರಿಗಳನ್ನು ಆಗ್ರಹಿಸಿದೆ, ಹಾಗೂ ಈ ವೆಚ್ಚ ಕಾರ್ಯರ್ದರ್ಶಿಯನ್ನು ತೆಗೆದು ಹಾಕಬೇಕು ಎಂದು ಸಂಪುಟ ಕಾರ್ಯರ್ದರ್ಶಿಗಳನ್ನು ಆಗ್ರಹಿಸಿದೆ.
ಇದನ್ನೂ ಓದಿ : ಮೈಕ್ರೋಫೈನಾನ್ಸ್ ಬಲೆಗೆ ಸಿಲುಕದಂತೆ ಮಾಡುವುದು ಹೇಗೆ?
ಅಲ್ಲದೆ, ಎಸ್‍ಕೆಎಂ ನಿಯೋಗಗಳು ಫೆಬ್ರುವರಿ 27 ರಂದು ಎಲ್ಲ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳನ್ನು ಮತ್ತು ಪ್ರತಿಪಕ್ಷದ ಮುಖಂಡರನ್ನು ಭೇಟಿ ಮಾಡಿ ಯುಎಸ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮತ್ತು ಭತ್ತ/ಗೋದಿಗೆ ಬೋನಸ್ಸನ್ನು ಕೊನೆಗೊಳಿಸುವ ಪತ್ರವನ್ನು ಹಿಂದಕ್ಕೆ ಪಡೆಯಲು ಒಕ್ಕೂಟ ಸರಕಾರದ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಲಾಗುವುದು, ಮತ್ತು ಪ್ರತಿಗಾಮಿ ಜಿಎಸ್‍ಟಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ರಾಜ್ಯಗಳ ತೆರಿಗೆ ವಿಧಿಸುವ ಹಕ್ಕುಗಳನ್ನು ಮರುಸ್ಥಾಪಿಸುವಂತೆ, ಸೆಸ್ ಮತ್ತು ಸರ್ಚಾರ್ಜ್ ಗಳು ಸೇರಿದಂತೆ ವಿಭಜಿಸಬಹುದಾದ ತೆರಿಗೆ ಸಂಗ್ರಹದಲ್ಲಿ 33%ದ ಬದಲು 60% ಪಾಲು ಕೊಡುವಂತೆ ಸಂಸತ್ತನ್ನು ಆಗ್ರಹಿಸಬೇಕು ದು ಕೇಳಲಾಗುವುದು ಮತ್ತು ಕೃಷಿಯ ಆಧುನೀಕರಣಕ್ಕೆ ಸಂಪನ್ಮೂಲಗಳನ್ನು ಬೆಳೆಸಬೇಕು, ಸಿ2+50% ಸೂತ್ರದಂತೆ ಎಂಎಸ್‍ಪಿಗೆ ಕಾನೂನು ತರಬೇಕು ಮತ್ತು ಸಾಲಮನ್ನಾಕ್ಕೆ ಆಗ್ರಹಿಸಲಾಗುವುದು ಎಂದು ಎಸ್‍ಕೆಎಂ ಹೇಳಿದೆ.
ಮಾರ್ಚ್ 9ರಂದು ಸಂಸತ್ತಿನ ಅಧಿವೇಶನ ಪುನರಾರಂಭವಾಗುವ ವೇಳೆಗೆ ಎಲ್ಲ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ರೈತ-ವಿರೋಧಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಪ್ರಧಾನ ಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಮತ್ತು ಭಾರತದ ಕೃಷಿ ಮತ್ತು ಹೈನು ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ತೆರೆದು ಕೊಡುವ ಹಾಗೂ ಭಾರತದ ಸ್ವಾವಲಂಬನೆ ಮತ್ತು ಸಾರ್ವಭೌಮತೆಯನ್ನು ಬಿಟ್ಟುಕೊಡುವಲ್ಲಿ ದೇಶದ್ರೋಹಿಯ ಪಾತ್ರ ವಹಿಸಿರುವ ವಾಣಿಜ್ಯ ಮಂತ್ರಿಯನ್ನು ವಜಾ ಮಾಡಬೇಕು ಎಂದು ಬಲವಾಗಿ ಆಗ್ರಹಿಸುವ ಪತ್ರವನ್ನು ಚಚರ್ಚಿಸಿ, ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳಿಸಬೇಕು ಎಂದು ಎಸ್‍ಕೆಎಂ ದೇಶಾದ್ಯಂತ ರೈತರಿಗೆ ಮನವಿ ಮಾಡಿದೆ
ಇದನ್ನೂ ನೋಡಿ : ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media
