ಕೊಡಗು : ಕೊಡಗು, ಮಡಿಕೇರಿಯಲ್ಲಿ ವಾಸವಿದ್ದ ಸಂಬಂಧಿಕರಿಗೆ ತನ್ನ ಮದುವೆಯ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಮದುಮಗ ಸೇರಿ, ಇಬ್ಬರು ಸಮೀಪದ ಸಂಪಿಗೆಕಟ್ಟೆಯಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೈಸೂರಿನ ವಿಶ್ವನಾಥ್ (32) ಹಾಗೂ ಅತ್ತಿಗೋಡಿನ ದಿನೇಶ್ (23) ಮೃತಪಟ್ಟ ವ್ಯಕ್ತಿಗಳು.
ಮೈಸೂರಿನ ವಿಶ್ವನಾಥ್ ನ ಮದುವೆ ಬೆಂಗಳೂರಿನ ಹುಡುಗಿಯೊಂದಿಗೆ ಫಿಕ್ಸ್ ಆಗಿತ್ತು. ಇದೇ ಸಪ್ಟೆಂಬರ್ 19 ಮದುವೆಯ ದಿನಾಂಕ ನಿಗದಿಯಾಗಿತ್ತು. ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ಬುಲೆಟ್ ಬೈಕ್ ಮೂಲಕ ಮೈಸೂರಿನಿಂದ ಹುಣಸೂರಿಗೆ ಬಂದು ಅಲ್ಲಿದ್ದ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಅದೇ ದಿನ ಅತ್ತಿಗೋಡಿಗೆಯಲ್ಲಿನ ದೊಡ್ಡಮ್ಮನಿಗೆ ಆಮಂತ್ರಣ ಪತ್ರ ನೀಡಿ ದೊಡ್ಡಮ್ಮನ ಮಗ ದಿನೇಶ್ ನನ್ನು ಕರೆದುಕೊಂಡು ಮಡಿಕೇರಿಯಲ್ಲಿರುವ ಸಂಬಂಧಿಗಳಿಗೆ ಮದುವೆ ಪತ್ರ ನೀಡಲು ಹೋರಾಟಗ ಅಪಘಾತ ಸಂಭವಿಸಿದೆ.
ಮಡಿಕೇರಿ ಹೊಲವಲಯದ ಸಂಪಿಗೆ ಕಟ್ಟೆ ಬಳಿ ಅಪಘಾತ ನಡೆದಿದೆ.ರಾತ್ರಿ ಸಮಯವಾಗಿದ್ದರಿಂದ ರಸ್ತೆ ಅಂದಾಜಿಗೆ ಸಿಗದೆ ಬೈಕ್ ಕೆಳಗೆ ಬಿದ್ದಿದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ ಹರಿದು ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಹಸಮಣೆ ಏರಬೇಕಾಗಿದ್ದ ವಿಶ್ವನಾಥ್ ದಾರುಣವಾಗಿ ಮಸಣ ಸೇರಿದ್ದಾನೆ.
ಟಿಪ್ಪರ್ ಲಾರಿಗಳು ಹೈವೆನಲ್ಲಿ ಬೇಕಾಬಿಟ್ಟಿ ಮತ್ತು ಅತೀ ವೇಗವಾಗಿ ಓಡಾಡುತ್ತವೆ. ಇವಗಳನ್ನು ನಿಯಂತ್ರಿಸಲು ಯಾಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ನಮ್ಮ ಹುಡುಗರ ಜೀವ ಹೋಗುವಂತಾಯ್ತು. ಟಿಪ್ಪರ್ ನವರು ಯಾರೆಂದು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮೃತ ವಿಶ್ವನಾಥ್ ಮತ್ತು ದಿನೇಶ್ ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.