ಗದಗ: ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್‌ವೆಲ್‌ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ. ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಫ್ರಿಡ್ ಖರೀಸಿದ್ದು, ಮತ್ತೊಬ್ಬ ಮಹಿಳೆ ಮಗನಿಗೆ ದ್ವಿಚಕ್ರ ವಾಹನ ಕೊಡಿಸಿದ್ದನ್ನು ಕೇಳಿದ್ದೇವೆ. ಇದೀಗ ಗದಗ ಜಿಲ್ಲೆಯ ಅತ್ತೆ ಸೊಸೆಯರು ಸೇರಿಕೊಂಡು ಬೋರ್‌ವೆಲ್ ಕೊರೆಸಿದ್ದಾರೆ. ಅವರಿಗೆ ನೀರು ಕೂಡ ಸಿಕ್ಕಿದೆ.
ಇದನ್ನೂ ಓದಿ : ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ; ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ?
ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60 ಸಾವಿರ ರೂಪಾಯಿ ಖರ್ಚು ಆಗಿದೆ. ಅದಕ್ಕೆ ಯೋಜನೆಯ 44 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ ಹಣ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಕೃತಜ್ಞತೆ
ಸಲ್ಲಿಸುತ್ತೇವೆ ಎಂದು ಮಾಬುಬೀ ಹೇಳಿದ್ದಾರೆ.
ಇದನ್ನೂ ನೋಡಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media