ಹಾಸನ : ಹಸಿರುಭೂಮಿ ಪ್ರತಿಷ್ಠಾನದಿಂದ 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳ ನೆಡುವಿಕೆ ಅಭಿಯಾನ

ಹಾಸನ:  ಹಾಸನ ನಗರದ ಜಯನಗರ ಬಡಾವಣೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಯನಗರ ಘಟಕ, ಮುಂಜಾನೆ ಮಿತ್ರರು,‌ ಹಾಗೂ ಸ್ಥಳೀಯ ನಾಗರೀಕರ ಸಹಭಾಗಿತ್ವದಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣಕಾರ್ಯ ಆರಂಭಗೊಂಡಿದೆ.   ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ.

ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭದ ಮೊದಲಿಗೆ ಗಿಡನೆಡುವುದರ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭವಾಯಿತು. ಈ ಪ್ರಕ್ರಿಯೆಯಲ್ಲಿ ರಾಜೀವ್ ಎಂಜಿನೀಯರಿಂಗ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಪಾಲ್ಗೊಂಡು ಗಿಡಳಗನ್ನು ನೆಟ್ಟರು.

ಇದನ್ನೂ ಓದಿ: ಶಾಲಾ ಮಕ್ಕಳಿಂದ 2 ಲಕ್ಷ ಗಿಡ ನೆಡುವ ಹಸಿರು ರಕ್ಷಕ ಅಭಿಯಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಪುಟ್ಟಡವಿ ನಿರ್ಮಾಣ ಸಂಚಾಲಕ ಹಾಗೂ ಮುಂಜಾನೆ ಮಿತ್ರರು ಅಧ್ಯಕ್ಷ  ಸಿ.ಬಿ. ವೆಂಕಟೇಗೌಡ ಮಾತನಾಡಿ, ಅರಣ್ಯೀಕರಣ ಪ್ರಕ್ರಿಯೆಯನ್ನು ಸಂಚಾಲಿಸಿ ಹಾಸನ ನಗರ ಕಳೆದ ತಿಂಗಳು ದಾಖಲೆಯ 41ಡಿಗ್ರಿ ಉಷ್ಣತೆಯನ್ನು ದಾಖಲಿಸಿತು ಇಡಿ ತಿಂಗಳು ಹಾಸನ ನಗರದ ಜನತೆ ಬಿಸಿಗಾಳಿಯಿಂದ ತತ್ತರಿಸಿದರು ನಗರವನ್ನು ತಂಪಾಗಿಡಲು ಅಗತ್ಯವಾದ ಮರಗಿಡಗಳು ಹಾಸನ ನಗರದಲ್ಲಿ ಇಲ್ಲ, ಇದ್ದ ಮರಗಿಡಗಳೆಲ್ಲಾ ಅವೈಜ್ಞಾನಿಕ ಅಭಿವೃದ್ಧಿ ಎಂಬ ಹೆಬ್ಬಾವಿಗೆ ಬಲಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಆ ಕಾರಣಕ್ಕೆ ಹಾಸನ ನಗರ ಬಿಸಿಲ ಬೇಗೆಯಿಂದ ತತ್ತರಿಸಿತು ಎಂದು ವಿವರಿಸಿದ ಅವರು ಹಾಸನ ನಗರದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪುಟ್ಟಡವಿ ನಿರ್ಮಾಣ ಕಾರ್ಯ ಪ್ರಾರಂಬಿಸುವ ಆಂದೋಲನವನ್ನು ಹಸಿರುಭೂಮಿ ಪ್ರತಿಷ್ಠಾನವು BGVS ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡು ಪ್ರಾರಂಭಿಸಿದೆ. ಈ ಸಂಬಂಧ ನಗರದ ಎಲ್ಲಾ ಕಾಲೇಜುಗಳು, ಸಂಘಟನೆಗಳು ಕನಿಷ್ಠ ಒಂದೊಂದು ಪುಟ್ಠಡವಿ ನಿರ್ಮಿಸುವ ಜವಾಬ್ದಾರಿ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ‌ ಮೂಲಕ ಸಭೆಕರೆದು ವಿನಂತಿಸಿತು ಅದಲ ಭಾಗವಾಗಿ ಈ ತಿಂಗಳಲ್ಲಿ ಇದು ಮೂರನೇ ಪುಟ್ಟಡವಿ ನಿರ್ಮಾಣ ಆಂದೋಲನ ಎಂದರು.

ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಮಾತನಾಡಿ, ಮಾನವನ ಸುಸ್ಥಿರ ಬದುಕಿಗೆ ನಿಗಧಿತ ವೇಳೆ‌ ಹಾಗೂ ಸಮಯದಲ್ಲಿ ಮಳೆ, ಬೆಳೆ ಆಗಬೇಕು ಆದರೆ ಹವಾಮಾನ ವ್ಯತ್ಯಯದಿಂದ ಇಡಿ ಮಾನವನ ನಡಾವಳಿ ದಿಕ್ಕುತಪ್ಪಿದೆ ಅದಕ್ಕೆ ಮೂಲಕಾರಣ ಭೂಗೋಳ ಬಿಸಿ ಈ ಬಿಸಿಯನ್ನು ತಹಬಂದಿಗೆ ತರಲು ಪರಿಸರ ಪೂರಕ ಅಭಿವೃದ್ಧಿ ಮಾನದಂಡ ಹಾಗೂ ಅರಣ್ಯೀಕರಣದ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂದ ಅವರು ಈ ಪರಿಸರ ಸುಸ್ಥಿರಕ್ಕೆ 33% ಕಾಡಿರಬೇಕು ಈಗ ಇರುವುದು 18% ಮಾತ್ರ, ಪುಟ್ಟಡವಿ ನಿರ್ಮಾಣ ಕಾರ್ಯ ಈ ಅರಣ್ಯ ಏರಿಕೆಗೆ ಪುಟ್ಟದಾದ ಕೊಡುಗೆ ಕೊಡಲಿದೆ ಎಂದರು.

ಹಸಿರುಭೂಮಿ ಪ್ರತಿಷ್ಠಾನದ “ಹಸಿರುಸಿರಿ” ಸಂಚಾಲಕ ಪುರುಶೋತ್ತಮ ಗಿಡನೆಡುವ ಮಾದರಿ ವಿವರಿಸಿದರು. ನಗರದ ನಡುವೆ ನಿರ್ಮಾಣವಾಗುವ ಕಾಡು ನಗರವಾಸಿಗಳಿಗೆ ಶುದ್ಧಗಾಳಿ ನೀಡಿ ನೆಮ್ಮದಿಯ ಜೀವನ ಹಾಗೂ ಕೂಡಿಬಾಳುವ ಚಿಂತನೆ ಮೂಡಿಸುತ್ತದೆ ಬಡಾವಣೆಯ ಜನತೆ ಸಮಿತಿ ರಚಿಸಿಕೊಂಡು ಈ ಪುಟ್ಟಡವಿಯನ್ನು ಕಾಪಾಡಿಕೊಂಡು ಹೋಗಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಮಾತನಾಡಿದ ಸ್ಛಳಿಯ ನಿವಾಸಿ ನೇತ್ರ ಹಸಿರುಭೂಮಿ ಪ್ರತಿಷ್ಠಾನ ಹಾಗೂ BGVS ಗೆಳೆಯರು ನಮ್ಮ ಬಡಾವಣೆಗೊಂದು ಚಂದದ ವನ ನಿರ್ಮಿಸಿಕೊಡುತ್ತಿದ್ದಾರೆ ಈ ಬಡಾವಣೆಯ ಜನತೆ ಪ್ರತಿಯೊಂದು ಗಿಡವನ್ನು ಬಾಡದಂತೆ ಜೋಪಾನವಾಗಿ ಕಾಪಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ. ಮಂಜುನಾಥ್, ಕಾರ್ಯದರ್ಶಿ ಅಹಮದ್ ಹಗರೆ, ಜಯನಗರ ಬಿಜಿವಿಎಸ್ ಘಟಕದ ಅಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೋನಿಕಾ, ಸಹಕಾರ್ಯದರ್ಶಿ ಆಶಾ, ಸದಸ್ಯ ಧರ್ಮಾನಂದ, ಗೀತಾ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯರಾದ ಅಪ್ಪಾಜಿಗೌಡ, ಶಿವಶಂಕರಪ್ಪ, ಗಿರಿಜಾಂಬಿಕ, ಚಂದ್ರಶೇಖರ್, ಮಮತಾಪಾಟೀಲ್ ಹಾಗೂ ಸ್ಥಳಿಯ ಪುಟ್ಟಡವಿ ಕೇರ್ ಟೇಕರ್ ಗಳಾದ ನೇತ್ರ, ಶಿವು, ಮಧುಕಾವ್ಯ, ಶುಭ , ಯೋಗೇಶ್, ರೇಖಾ ರಂಗಸ್ವಾಮಿ, ತಾರಾ ಪ್ರಸಾದ್, ಚೇತನ, ಶಿವಕುಮಾರ್, ಮಮತಾ, ಆದರ್ಶ, ಶಿಲ್ಪ, ಚಂದನ, ಮೀನ, ಕೇಶವಮೂರ್ತಿ, ಕವಿತಾ, ಹಾಗೂ ಮ್ಯಾಥ್ಸ್ ಅಕಾಡೆಮಿಯ ವೇದಾ ಮತ್ತು ಸ್ನೇಹಿತರು ಇದ್ದರು.

ಇದನ್ನೂ ನೋಡಿ: ಮೋದಿ 3.O ಸರ್ಕಾರ ತನ್ನ ಹಿಂದಿನ ಸರ್ವಾಧಿಕಾರಿ ನೀತಿ ಮುಂದುವರೆಸುತ್ತದೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *