ಕೋಲಾರ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆಗಸ್ಟ್ 17 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟ ಧರಣಿ ನಡೆಯಲಿದ್ದು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಮನವಿ ಮಾಡಿದರು
ನಗರದ ಸರಕಾರಿ ನೌಕರರ ಭವನದಲ್ಲಿ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಿನನಿತ್ಯ ಹಳ್ಳಿಗಳಲ್ಲಿ ಜನರ ಸೇವೆ ಮಾಡುತ್ತೇವೆ ಆದರೆ ನಮಗೆ ಸರಿಯಾದ ಸಂಬಳ ನೀಡುವಂತೆ ಮೇಲಾಧಿಕಾರಿಗಳ ಆದೇಶವಿದ್ದರೂ ಪಿಡಿಒಗಳು ಸಂಬಳ ಸೌಲಭ್ಯಗಳನ್ನು ನೀಡುತ್ತಿಲ್ಲ ಇದರ ಬಗ್ಗೆ ಸರಕಾರದ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರವು ಗ್ರಾಮ ಪಂಚಾಯತಿ ನೌಕರರ ಯೋಗಕ್ಷೇಮ ವಿಚಾರಿಸುವುದು ಅವರ ಜವಾಬ್ದಾರಿ ಕೊರೊನಾ ಸಂದರ್ಭದಲ್ಲಿ ಅವರ ಸೇವೆ ಅನನ್ಯವಾಗಿದೆ ಆದರೆ ಅಂತಹ ನೌಕರರನ್ನು ಮರೆತಿದ್ದಾರೆ ಸರಕಾರ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ಹುದ್ದೆಯಿಂದ ಗ್ರೇಡ್ -2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು ಹಾಗೂ 15 ನೇ ಹಣಕಾಸು ಯೋಜನೆಯಡಿ ಬಾಕಿವಿರುವ ವೇತನವನ್ನು ಈ ಕೂಡಲೇ ನೀಡುಬೇಕೆಂದು ಒತ್ತಾಯಿಸುವುದು ನಮ್ಮ ಧರಣಿಯ ಉದ್ದೇಶವಾಗಿದೆ ಎಂದರು.
ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸರಕಾರದ ಆದೇಶದಂತೆ 15 ನೇ ಹಣಕಾಸು ಯೋಜನೆಯಡಿ ಆಡಳಿತ ವೆಚ್ಚದಲ್ಲಿ ಶೇ10, ಹಾಗೂ ಸ್ಥಳೀಯ ತೆರಿಗೆ ಸಂಗ್ರಹದಲ್ಲಿ ಶೇ40 ಹಣವನ್ನು ಸಿಬ್ಬಂದಿ ವೇತನಕ್ಕೆ ಉಪಯೋಗಿಸಬೇಕು 2019 ಜುಲೈ 23 ರ ಸರ್ಕಾರಿ ಆದೇಶ ಪ್ರಕಾರ ಬಾಕಿ ಉಳಿದ ಎಲ್ಲಾ ನೌಕರರಿಗೂ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಬೇಕು . ಕರವಸೂಲಿಗಾರ , ಗುಮಾಸ್ತ , ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಸಿ ಗ್ರೂಪ್ ಹಾಗೂ ವಾಟರ್ ಮ್ಯಾನ್ , ಜವಾನ , ಸ್ವಚ್ಛತಗಾರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರದ ಆದೇಶದಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್, ಸಂಘಟನಾ ಕಾರ್ಯದರ್ಶಿ ವಿಜಯಕೃಷ್ಣ ಸೇರಿದಂತೆ ನೌಕರರು ಭಾಗವಹಿಸಿದ್ದರು.
Hii