ಬೆಂಗಳೂರು : ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವಾರು ಕುತೂಹಲಗಳು ನಡೆದಿವೆ. ಇಂದು ನಡೆಯುತ್ತಿರುವ ಮತ ಎಣಿಕೆ ವೇಳೆ ಕೆಲವು ಸ್ಥಳಗಳಲ್ಲಿ ಅಚ್ಚರಿ ಎನಿಸುವಂಥ ಘಟನೆಗಳು ಜರುಗಿವೆ. ಬಹುತೇಕ ಕಡೆಗಳಲ್ಲಿ ಒಂದು ಮತದಿಂದ ಗೆಲ್ಲುವ ಮೂಲಕ ಮತದ ಮೌಲ್ಯವನ್ನು ಪ್ರದರ್ಶಿಸಿದ್ದಾರೆ. ಕೆಲವೆಡೆ ಸಮಮತ ಬಂದ ಹಿನ್ನಲೆಯಲ್ಲಿ ಟಾಸ್ ಅವರನ್ನು ಗೆಲ್ಲಿಸಿತ್ತು.
ಒಂದೊಂದು ಮತವು ಮುಖ್ಯವಿರುವಾಗಿ ತೀರಾ ಅಪರೂಪ ಎನ್ನುವಂಥ ಘಟನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರೆಬೊಮ್ಮನಹಳ್ಳಿಯ ಗೋವಿಂದಪುರ ಕ್ಷೇತ್ರ ಸಾಕ್ಷಿಯಾಗಿದೆ.
ಮತಗಟ್ಟೆ 153ರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ನಿಂತಿದ್ದರು. ಈ ಪೈಕಿ ಜಬಿಉಲ್ಲಾ ಬಾಗ್ 129 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೈಯದ್ ಅಬ್ದುಲ್ಲಾ ಎನ್ನುವವರು 95 ಮತ, ಸೈಯದ್ ಖಜರ್ ಎನ್ನುವವರು 33 ಮತ ಪಡೆದಿದ್ದಾರೆ. ಆದರೆ ಇನ್ನೋರ್ವ ಅಭ್ಯರ್ಥಿ ಹಬೀದ್ ಉಲ್ಲಾ ಎನ್ನುವವರು ಜೀರೋ ಮತ ಪಡೆದಿದ್ದಾರೆ! ಇದರ ಅರ್ಥ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಈ ವಾರ್ಡ್ನಲ್ಲಿ 259 ಮಂದಿ ಮತದಾನ ಮಾಡಿದ್ದು, ಒಂದು ಮತ ತಿರಸ್ಕೃತಗೊಂಡಿದೆ.
ಗ್ರಾ.ಪಂ ನಲ್ಲಿ ಗೆದ್ದ ಹೋರಾಟಗಾರರು
ಆ ತಿರಸ್ಕೃತಗೊಂಡಿರುವ ಮತ ಹಬೀದ್ ಉಲ್ಲಾ ಅವರದ್ದೇ ಅಥವಾ ತಮ್ಮ ಮತವನ್ನು ಅವರು ತಮಗೇ ಹಾಕಿಕೊಳ್ಳಲು ಮರೆತರೆ ಎನ್ನುವುದು ಸ್ಪಷ್ಟವಾಗಿಲ್ಲ. ಇಲ್ಲವೆ ಯಾರನ್ನೊ ಸೊಲಿಸಲು, ಹೆಸರಿನಲ್ಲಿ ಗೊಂದಲ ಸೃಷ್ಟಿಸಲು ಯಾರದ್ದೊ ಮಾತು ಕೇಳಿ ಹಬೀಬ್ ರವರು ಸ್ಪರ್ಧೆ ಮಾಡಿರಬೇಕು. ಒಟ್ಟಿನಲ್ಲಿ ಅವರಿಗೆ ಜೀರೋ ಮತಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ಪೋಸ್ಟ್ ಬಾರೀ ಟ್ರೋಲ್ ಆಗುತ್ತಿದೆ.