ಹುಬ್ಬಳ್ಳಿ: ಕಾನೂನು ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತಿ ನೌಕರರಿಗೆ ಗ್ರಾಹಕರ ಬೆಲೆ ಸೂಚ್ಯಾಂಕ, ಬೆಲೆ ಏರಿಕೆ ಒಳಗೊಂಡು, ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ವತಿಯಿಂದ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ಹಾಗೂ ತುಟ್ಯಿ ಭತ್ಯೆ ಸಮೇತ ಬಾಕಿ ವೇತನ ಉಳಿಸಿಕೊಂಡಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಹಾಗೂ ನಿವೃತ್ತರಾದ ನೌಕರರಿಗೆ ಉಪಧನ ನೀಡಲು ಒತ್ತಾಯಿಸಿ ಕಾರ್ಮಿಕ ಭವನದ ಎದುರು ನಡೆದ ಪ್ರತಿಭಟನೆಯಲ್ಲ ಆಗ್ರಹಿಸಲಾಯಿತು.
ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀಮತಿ ಶ್ವೇತಾ ಸಂಗಮ್ ಮುಖಾಂತರ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ.ಈಳಿಗೇರ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಮುಖಂಡರಾದ ರಮೇಶ ಹೊಸಮನಿ, ಮನೋಜ ತೋರಣಗಟ್ಟಿ, ಗೋವಿಂದ ವಾಲೇಕಾರ, ಮಂಜಯ್ಯ ಕರಿಯಣ್ಣವರ, ಕಲಾವತಿ ಹಿರೇಮಠ, ಸಿದ್ದಪ್ಪ ದೊಡ್ಡಮನಿ, ಉಳಿವೆಪ್ಪ ಬೇವಿನಕಟ್ಟಿ, ಗಂಗಪ್ಪ ಸಂಗಟಿ ಹಾಗೂ ವಿವಿಧ ಗ್ರಾಮ ಪಂಚಾಯತ್ ನೌಕರರು ಉಪಸ್ಥಿತರಿದ್ದರು.