ಮಸ್ಕಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶಿವಕುಮಾರ, ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮ್ಮವ್ವ ರ ಸದಸ್ಯತ್ವವನ್ನು ರದ್ದುಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ಹೊರಡಿಸಿದ್ದಾರೆ.
2023-24 ಮತ್ತು 2024-25 ನೇ ಸಾಲಿನಲ್ಲಿ ನರೇಗಾ ಯೋಜನೆಗಳಡಿ ಚೆಕ್ ಮೆಜರಮೆಂಟ್ ಇಲ್ಲದೆ ಹಣ ಪಾವತಿಸಿದ್ದು, 15ನೇ ಹಣಕಾಸು ಯೋಜನೆಯ ಕಾಮಗಾರಿಗಳಲ್ಲಿಯೂ ನಿಯಮ ಉಲ್ಲಂಘನೆ ಕಂಡುಬಂದಿದೆ.
ಇದನ್ನೂ ಓದಿ: ಹೊಸದಿಲ್ಲಿ |ಜಯ್ ಶಾಗೆ ಕ್ರಿಕೆಟ್ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ ಅವರು ಕ್ರೀಡೆ ನಡೆಸುತ್ತಿದ್ದಾರೆ ರಾಹುಲ್ ಗಾಂಧಿ ಆರೋಪ
ಇದರ ಹಿನ್ನೆಲೆಯಲ್ಲಿ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 43(ಎ) ಹಾಗೂ 43 (4)ರನ್ವಯ ಉಮ್ಮವ್ವ ಗ್ಯಾನಪ್ಪ ಅವರ ಸದಸ್ಯತ್ವ ರದ್ದು ಮಾಡಿ ಆರು ವರ್ಷಗಳ ಅನರ್ಹತೆ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ನೋಡಿ: ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ – ಎಂ.ಜಿ.ಹೆಗಡೆ Janashakthi Media
