ದೇಶದ ರಾಜಧಾನಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು, ವಾಣಿಜ್ಯ ನಗರ ಮುಂಬೈ, ಮುತ್ತಿನ ನಗರಿ ಹೈದರಾಬಾದ್ ವಿಮಾನ ನಿಲ್ದಾಣಗಳು ಸಂಪೂರ್ಣವಾಗಿ ಖಾಸಗಿಯವರ ಪಾಲಾಗಲಿದೆ.
ನವದೆಹಲಿ : ದೇಶದ ನಾಲ್ಕು ಪ್ರಮುಖ ನಗರಗಳ ವಿಮಾನ ನಿಲ್ದಾಣಗಳು ಕೇಂದ್ರದ ವಿಮಾನಯಾನ ಸಚಿವಾಲಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ.
ಸಚಿವಾಲಯದ ಅಡಿಯಲ್ಲಿ ಎಎಐ 100ಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆಯ ಹೊಣೆ ಹೊತ್ತುಕೊಂಡಿರುವ ಸಂಸ್ಥೆ. ಹೆಚ್ಚುವರಿ ಸಂಪನ್ಮೂಲಗಳ ಸಂಗ್ರಹದ ಭಾಗವಾಗಿ ರೂ.2.5 ಲಕ್ಷ ಕೋಟಿ ಆಸ್ತಿ ಸಂಗ್ರಹಣೆಯ ಮಾಡಲು ಈಗಾಗಲೇ ಖಾಸಗೀಕರಣಗೊಂಡಿರುವ ದೆಹಲಿ, ಮುಂಬೈ, ಬೆಂಗಳುರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ನಿರ್ವಹಣೆಯಲ್ಲಿ ಸರಕಾರದ ಪಾಲನ್ನು ಸಂಪೂರ್ಣವಾಗಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಎಎಐನ ಪಾಲು ಶೇ.26ರಷ್ಟು ಇದ್ದರೆ, ಅದಾನಿ ಗ್ರೂಪ್ ಶೇ.74ರಷ್ಟು ಪಾಲು ಇದೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಎಎಐ ಪಾಲು ಶೇ.26ರಷ್ಟು ಇದ್ದರೆ, ಜಿಎಂಆರ್ ಗ್ರೂಪ್ ಶೇ.54ರಷ್ಟು ಪಾಲು ಮತ್ತು ಫ್ರಾಪೋರ್ಟ್ ಎಜಿ ಮತ್ತು ಎರಾಮನ್ ಮಲೇಷ್ಯಾ ತಲಾ 10% ಪಾಲು ಹೊಂದಿದೆ.
ಬೆಂಗಳೂರು ಮತ್ತು ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಕ್ರಮವಾಗಿ ಎಎಐ ಮತ್ತು ರಾಜ್ಯ ಸರಕಾರದೊಂದಿಗೆ ಪಾಲನ್ನು ಹೊಂದಿದೆ.
ಎಎಐ ನಿರ್ವಹಣೆಯಲ್ಲಿರುವ ಈಕ್ವಿಟಿ ಪಾಲನ್ನು ಮಾರಾಟ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆ ನಂತರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ.
ಖಾಸಗೀಕರಣಗೊಳ್ಳಲು ನಿರ್ಧರಿಸಿರುವ 13 ವಿಮಾನ ನಿಲ್ದಾಣಗಳಲ್ಲಿ ಲಾಭದಾಯಯಗೊಳಿಸಲು ಆಕರ್ಷಕವಾದ ಪ್ಯಾಕೇಜ್ ಗಳನ್ನು ಜಾರಿಗೆ ತರುವುದು ಮತ್ತು ಲಾಭರಹಿತವಾಗಿರುವ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಬಗ್ಗೆ ಪರಿಶೀಲನೆಯಲ್ಲಿವೆ.
ನಾಲ್ಕು ವಿಮಾನಗಳಲ್ಲಿ ಎಎಐ ಸಂಸ್ಥೆ ಪಾಲಿನ ಹಣಕಾಸು ಮಾರಾಟ ಮತ್ತು 2021-22ರ ಹಣಕಾಸು ವರ್ಷದಲ್ಲಿ 13 ವಿಮಾನ ನಿಲ್ದಾಣಗಳ ಖಾಸಗೀಕರಣ ನಿರ್ಣಯಿಸಿರುವ ಬಗ್ಗೆ ಕಾರ್ಯದರ್ಶಿ ಮಟ್ಟದ ಸಮಿತಿಯಲ್ಲಿ ಚರ್ಚೆಯಾಗಿರುವ ಬಗ್ಗೆ ಉನ್ನತ ಮೂಲಗಳಿಂದ ವರದಿ ವ್ಯಕ್ತವಾಗಿದೆ.
ಸರಕಾರವು ಮಹಾತ್ವಾಕಾಂಕ್ಷೆಯ ಹಣಗಳಿಕೆ ಪೈಪ್‌ಲೈನ್ ಭಾಗವಾಗಿ 2.5 ಲಕ್ಷ ಕೋಟಿ ರೂಪಾಯಿ ಸಂಗ್ರಹಣೆಯ ಗುರಿಯಿದ್ದು ಇದಕ್ಕಾಗಿ ದೇಶದ 100 ಬೃಹತ್ ಸಾರ್ವಜನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ಪಾಲಾಗಿಸಲು ಸರಕಾರ ನಿರ್ಧರಿಸಿದೆ.
ಕೇಂದ್ರದ ಬಿಜೆಪಿಯ ನರೇಂದ್ರಮೋದಿ ಸರಕಾರವು ಏಪ್ರಿಲ್ 1ರಿಂದ ಮುಂದಿನ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಒಡೆತನದ ಆಸ್ತಿಗಳ ಮಾರಾಟದಿಂದ 1.75 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ.
ವಿಮಾನ ನಿಲ್ದಾಣಗಳ ಖಾಸಗೀಕರಣದ ಮೊಲದ ಭಾಗವಾಗಿ ಕೇಂದ್ರದ ಬಿಜೆಪಿ ಸರಕಾರವು ಲಕ್ನೋ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಮತ್ತು ಗುವಾಹಟಿ ಖಾಸಗಿಯವರ ಪಾಲಾಗಿದೆ. ಇವುಗಳು ಅದಾನಿ ಗ್ರೂಪ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದೆ. ಮುಂದುವರೆದು ಈಗ ದೇಶದ ದೊಡ್ಡ ನಗರಗಳ ವಿಮಾನ ನಿಲ್ದಾಣಗಳು ಸಹ ಖಾಸಗೀಕರಣಗೊಳ್ಳಲಿದೆ.