ನವದೆಹಲಿ: ಚೀನಾದೊಂದಿಗೆ ಸಂಪರ್ಕ ಹೊಂದಿರುವ 138 ಬೆಟ್ಟಿಂಗ್ ಆ್ಯಪ್ ಹಾಗೂ 94 ಆನ್‌ಲೈನ್ ಸಾಲ ನೀಡುವಂತಹ ಆ್ಯಪ್ ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಕ್ರಿಯೆಗಳು ಆರಂಭವಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವರದಿಯಾಗಿದೆ.
ಚೀನಾ ದೇಶಕ್ಕೆ ಸಂಬಂಧಪಟ್ಟಿರುವ ಈ ಆ್ಯಪ್ ಗಳನ್ನು ಭಾರತ ಸರ್ಕಾರ ತಕ್ಷಣ ಮತ್ತು ತುರ್ತು ಆಧಾರದ ಮೇಲೆ ಸುಮಾರು 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 94 ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮತ್ತು ನಿರ್ಬಂಧಿಸುವ ಪ್ರಕ್ರಿಯೆಗೆ ಮುಂದಾಗಿದೆ.
ಇದನ್ನು ಓದಿ: ಟಿಪ್ಪುವಿನ ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ
ಕೇಂದ್ರ ಗೃಹ ಸಚಿವಾಲಯವು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಸಂವಹನ ನಡೆಸಿದೆ. ಈ ಪ್ರಕ್ರಿಯೆಗಳು ಆರು ತಿಂಗಳ ಹಿಂದೆಯೇ ಆರಂಭವಾಗಿದ್ದು, ಕೇಂದ್ರ ಗೃಹ ಸಚಿವಾಲಯ 28 ಚೀನೀ ಸಾಲ ನೀಡುವ ಅಪ್ಲಿಕೇಶನ್ ಹಿನ್ನೆಯಗಳನ್ನು ಕಲೆ ಹಾಕಲು ಮುಂದಾಗಿತು ಮತ್ತು ವಿಶ್ಲೇಷಣೆಗೊಳಪಡಿಸಿತು.
ನಿಷೇಧಕ್ಕೆ ಒಳಗಾಗಿದ್ದ 94 ಅಪ್ಲಿಕೇಶನ್‌ಗಳು ಇ-ಸ್ಟೋರ್‌ಗಳಲ್ಲಿ ಲಭ್ಯವಿವೆ ಮತ್ತು ಇತರವು ಮೂರನೇ ವ್ಯಕ್ತಿಯ ಲಿಂಕ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಕಂಡುಹಿಡಿಯಲಾಯಿತು.
ಈ ಹಿಂದೆ ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶ, ಕೇಂದ್ರ ಗುಪ್ತಚರ ಸಂಸ್ಥೆಗಳು ಅಪ್ಲಿಕೇಶನ್‌ಗಳ ನಿಷೇಧಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವಾಲಯಕ್ಕೆ ಕೋರಿತು. ಅದರಂತೆ ಇದೀಗ ಸರ್ಕಾರ ಆ್ಯಪ್ ಗಳ ನಿಷೇಧಕ್ಕೆ ಮುಂದಾಗಿದೆ. ಈ ಅಪ್ಲಿಕೇಶನ್‌ಗಳು ಐಟಿ ಕಾಯಿದೆಯ ಸೆಕ್ಷನ್ 69 ಅನ್ನು ಆಕರ್ಷಿಸುತ್ತವೆ ಎಂದು ದೃಢಪಡಿಸಿದ ನಂತರ ಕ್ರಮವನ್ನು ಪ್ರಾರಂಭಿಸಲಾಗಿದೆ. ಏಕೆಂದರೆ, ಅವುಗಳು ‘ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕರವಾದ ವಸ್ತು’ ವನ್ನು ಒಳಗೊಂಡಿವೆ.
ಇದನ್ನು ಓದಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಪಾಯಕಾರಿ ಮತ್ತು ಪ್ರತಿಗಾಮಿ ನಿಯಮಗಳನ್ನು ತೆಗೆದುಹಾಕಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ
ವರದಿಯ ಪ್ರಕಾರ, ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲು ಹಲವಾರು ಅಪ್ಲಿಕೇಶನ್‌ಗಳು ಈಗ ಲಭ್ಯವಿಲ್ಲ. ಆದರೆ, ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಸ್ವತಂತ್ರ ಲಿಂಕ್‌ಗಳು ಅಥವಾ ವೆಬ್‌ಸೈಟ್‌ಗಳ ಮೂಲಕ ಡೌನ್‌ಲೋಡ್ ಮಾಡಲಾಗುತ್ತಿದೆ ಮತ್ತು ಆನ್‌ಲೈನ್‌ನಲ್ಲಿ ನೇರವಾಗಿ ಪ್ಲೇ ಮಾಡಬಹುದು. ಇವುಗಳಲ್ಲಿ ಕೆಲವು ಕ್ರಿಪ್ಟೋ ಕರೆನ್ಸಿಗಳನ್ನು ಪಾವತಿಯಾಗಿ ಸ್ವೀಕರಿಸುತ್ತವೆ.
ಚೀನಾದಲ್ಲಿ ನೆಲೆ ಹೊಂದಿರುವ ಅಥವಾ ಚೀನಾ ಜೊತೆ ನಂಟು ಹೊಂದಿರುವ ಒಟ್ಟು 59 ಮೊಬೈಲ್ ಅಪ್ಲಿಕೇಷನ್‌ಗಳನ್ನು (ಆ್ಯಪ್‌ಗಳು) ಕೇಂದ್ರ ಸರ್ಕಾರವು 2020ರಲ್ಲಿ ಮೊದಲ ಬಾರಿಗೆ ನಿಷೇಧಿಸಿತ್ತು. ಅದಾದ ನಂತರವೂ, ಹಲವು ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಗೊಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ