ವಿಜಯನಗರ: ಲಕ್ಷಾನುಗಟ್ಟಲೆ ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಟ್ಟ ಶಾಲೆ ಇಂದು ಕಿಡಗೇಡಿಗಳ ದುರ್ವತನೆಗೆ ಅಕ್ಷರಶಃ ನಲುಗಿಹೋಗಿದೆ. ಶಾಲೆಯ ಸಂಜೆ ಮತ್ತು ರಜೆಯ ದಿನದಲ್ಲಿ ಕಿಡಗೇಡಿಗಳು ಶಾಲೆಯೊಳಗೆ ನುಗ್ಗಿ ವಸ್ತುಗಳನ್ನು ಹಾಳು ಮಾಡುತ್ತಿರುವ ಘಟನೆಗಳು ನಡೆದಿವೆ.
ವಿಜಯಪುರ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಸರ್ದಾರ್ ಪಟೇಲ್ ಪ್ರೌಢಶಾಲೆಯಲ್ಲಿ ವಸ್ತುಗಳ ಕಳ್ಳತನ ಹಾಗೂ ಕಿಟಕಿಗಳನ್ನು ಮುರಿಯುವುದು, ಕಾಂಪೌಂಡ್ ಲಾಕ್ ಮಾಡಿದ್ರೂ, ಹಿಂದಿನಿಂದ ಬಂದು ಗೋಡೆ ಕೆಡವುದು. ಶಾಲೆಯ ಆಸ್ತಿ ಪಾಸ್ತಿಯನ್ನು ನಾಶಮಾಡುತ್ತಿರು ಪ್ರಕರಣ ಬೆಳಕಿಗೆ ಬಂದಿದೆ. ಮುರಿದ ಕಿಟಕಿಗಳನ್ನು ದುರಸ್ತಿ ಮಾಡಿದರೂ, ಪುನಃ ಈ ರೀತಿ ಘಟನೆಗಳು ಸಮಾನ್ಯವಾಗಿಬಿಟ್ಟಿದೆ. ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವದೇ ಕ್ರಮಜರಗುತ್ತಿಲ್ಲ. ಇಂತಹ ಘಟನೆಗಳಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಇದು ಕೇವಲ ಈ ಶಾಲೆಯ ಗೋಳು ಮಾತ್ರವಲ್ಲ. ಇಂತಹ ಘಟನೆಗಳು ಹೊಸಪೇಟೆಯ ಅನೇಕ ಶಾಲೆಗಳಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿಡಿಗೇಡಿಗಳ ವಿರುದ್ಧ ಕ್ರಮ: ಸಂಜೆ ಹಾಗೂ ರಜೆಯ ದಿನದಲ್ಲಿ ಶಾಲೆಯ ಆವರಣದಲ್ಲಿ ರಾತ್ರಿವೇಳೆ ಕುಳಿತು ಬೇರೆ ಬೇರೆ ಅನೈತಿಕ ಚಟುವಟಿಕೆಗಳಿಗೆ ಶಾಲೆಯನ್ನ ಬಳಸಿಕೊಳ್ಳುತ್ತಿದ್ದು.ಇದರಿಂದ ಶಾಲಾ ಶೈಕ್ಷಣೀಕ ವಾತವರಣ ಹಾಳಾಗುತ್ತಿದೆ. ಶಾಲೆಯ ಸೌಲಭ್ಯಗಳನ್ನು ನಾಶ ಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದ್ದಾರೆ.
ಶಾಲೆಯನ್ನ ರಕ್ಷಣೆ ಮಾಡುವಂತದ್ದು ಎಲ್ಲರ ಕರ್ತವ್ಯ. ಶಾಲೆಯ ಆವರಣವನ್ನ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ದೊಡ್ಡ ಅಘಾತಕಾರಿ ವಿಷಯವಾಗಿದೆ. ಶಾಲೆಯ ವಾತಾವರಣವನ್ನು ಹಾಳು ಮಾಡುವ ಕಿಳಗೇಡಿಗಳ ವಿರುದ್ಧ ಸಾರ್ವಜನಿಕರು ದೂರನ್ನ ನೀಡಬೇಕು ಎಂದು ಮನವಿ ಮಾಡಿದ್ದಾರೆ.