ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನವಜಾತ ಶಿಶುಗಳ ಆರೈಕೆ ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಶುಕ್ರವಾರ ಬೆಂಗಳೂರಿನಲ್ಲಿ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸೇವೆ – ನಿಯೋನಾಟಲ್ ಕೇರ್ ಆನ್ ವೀಲ್ಸ್ (ಮಾರ್ಸ್-ನೌ) ಗೆ ಚಾಲನೆ ನೀಡಿದರು.
ಹೃದಯ ಮತ್ತು ಶ್ವಾಸಕೋಶದ ಮಾನಿಟರ್‌ಗಳು, ಹೈ ಫ್ರೀಕ್ವೆನ್ಸಿ, ವೆಂಟಿಲೇಟರ್‌ಗಳು, ಆ್ಯಂಬುಲೆನ್ಸ್‌ಗಳಲ್ಲಿ ಶಿಶು ಇನ್ಕ್ಯುಬೇಟರ್‌ಗಳು,ನೈಟ್ರಿಕ್ ಆಕ್ಸೈಡ್ ಅಡ್ಮಿನಿಸ್ಟ್ರೇಷನ್, ಬ್ಲಾಂಕೆಟ್ ವಾರ್ಮರ್‌ಗಳು ಮತ್ತು ಸುಗಮ ಪ್ರಯಾಣಕ್ಕಾಗಿ ಅಗತ್ಯ ಸೇವೆಗಳನ್ನು ಇರಿಸಲಾಗಿದೆ.
ಇದನ್ನ ಓದಿ:“ತರಾತುರಿಯಲ್ಲಿ ರೈಲ್ವೇ ದುರಂತ ತನಿಖೆಗೆ ಸಿಬಿಐಯನ್ನು ನೇಮಿಸಿರುವುದು ಅಚ್ಚರಿ ಉಂಟು ಮಾಡಿದೆ” – ಇ ಎ ಎಸ್ ಶರ್ಮಾ
ತುರ್ತು ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತವೆ ಎಂದು ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ವಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸಿದರು.