ನವದೆಹಲಿ: ಚೀನೀ ಕಂಪನಿಯ 12000 ಸಾವಿರಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಗಳನ್ನು ದೇಶದಲ್ಲಿ ನಿಷೇಧಿಸುವ ಯಾವುದೇ ಆಲೋಚನೆಗಳಿಲ್ಲ ಎಂದು ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿಕೆ ನೀಡಿದ್ದು, ಭಾರತ ಸರ್ಕಾರವು ಚೀನಾದ ಮೊಬೈಲ್ ಕಂಪನಿಗಳಿಗೆ ರಫ್ತುಗಳನ್ನು ಹೆಚ್ಚಿಸಲು ಕೇಳಿದೆಯೆಂದು ಮಾಹಿತಿ ನೀಡಿದ್ದಾರೆ.
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ದೇಶಿ ಕಂಪನಿಗಳ ಪಾತ್ರವು ಪ್ರಮುಖವಾಗಿದ್ದು, ಹಾಗೆಂದ ಮಾತ್ರಕ್ಕೆ ವಿದೇಶಿ ಬ್ರಾಂಡ್ ಗಳನ್ನು ಹೊರಗಿಡುವುದು ಇದರ ಅರ್ಥವಲ್ಲ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ಮಿನಿಸ್ಟರ್ ಹೇಳಿಕೆ ಕೊಟ್ಟಿದ್ದಾರೆ.
ಚೀನೀ ಕಂಪನಿಯ ಮೊಬೈಲ್ ಗಳನ್ನು ನಿರ್ಬಂಧಿಸಬೇಕೆಂಬ ಸರ್ಕಾರದ ಯೋಜನೆಯ ಕುರಿತು ಉತ್ತರ ನೀಡಿದ ಸಚೀವರು, 2025-26 ರ ವೇಳೆಗೆ $300 ಬಿಲಿಯನ್ ಅಷ್ಟು ಎಲೆಕ್ರ್ಟಾನಿಕ್ ಉತ್ಪಾದನೆಯನ್ನು ಮತ್ತು $120 ಬಿಲಿಯನ್ ಅಷ್ಟು ರಪ್ತುಗಳನ್ನು ಹೆಚ್ಚಿಸುವುದರ ಬಗ್ಗೆ ಸರ್ಕಾರ ಅಂದಾಜು ಮಾಡಿದೆಯೆಂದು ವಿವರಿಸಿದ್ದಾರೆ.
ಈ ಹಿಂದೆ ಸರ್ಕಾರ ಚೀನೀ ವಸ್ತುಗಳ ಮಾರಟವನ್ನು ನಿಷೇಧಿಸಲಾಗುವುದೆಂದು ಹೇಳಿದ್ದು, ಇದೀಗ ಮತ್ತೇ ಸರ್ಕಾರವೇ ಚೀನೀ ಸ್ಮಾರ್ಟ್ಫೋ ಫೋನ್ ಬಾನ್ ಮಾಡುವ ಸಾಧ್ಯತೆ ಇಲ್ಲವೆಂದು ಹೇಳಿರುವುದು ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂಬ ಆರೋಪ ಇದೇ ವೇಳೆ ಕೇಳಿ ಬಂದಿದೆ.