ಉಡುಪಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 15 ರಷ್ಟು ಏರಿಕೆ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ಇಂದು ವಂಡ್ಸೆಯಲ್ಲಿ ಸಿಪಿಎಂ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸರಕಾರಿ
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ; ಕೇಂದ್ರ ಸರ್ಕಾರದ ಬೆಲೆಯೇರಿಕೆ ನೀತಿಯಿಂದಾಗಿ ಜನರು ಈಗಾಗಲೇ ಬದುಕು ನಿರ್ವಹಿಸುವುದು ಕಷ್ಟಪಡುತ್ತಿದ್ದಾರೆ ಇದರ ಮಧ್ಯೆಯೇ ರಾಜ್ಯ ಸರ್ಕಾರ ಬಡವರ ಜೀವನಾಡಿಯಾದ ಸರ್ಕಾರಿ ಬಸ್ ಗಳ ಪ್ರಯಾಣ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಸರಕಾರಿ ಬಹುತೇಕ ಬಸ್ ಗಳು ಗ್ರಾಮೀಣ ಪ್ರದೇಶಗಳಲ್ಲಿ ಓಡುತ್ತಿರುವುದರಿಂದ ನಷ್ಟಗಳು ಸಂಭವಿಸುತ್ತಿರುವುದು ಸಹಜ ಆದರೆ ಸರ್ಕಾರ ನಿಗಮಗಳಿಗೆ ಪೂರೈಕೆ ಮಾಡುವ ಇಂಧನದ ಮೇಲೆ ಸಬ್ಸಿಡಿ ನೀಡಬೇಕು ತೆರಿಗೆ ಕಡಿಮೆ ಮಾಡಬೇಕು ಹಾಗೂ ಇಲೆಕ್ಟ್ರಿಕ್ ಬಸ್ ಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ: ರಮೇಶ ಹಾಸನ್
ಖಾಸಗೀ ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಅವಕಾಶ ನೀಡಬಾರದು
ಖಾಸಗೀ ಬಸ್ ಮಾಲಕರು ಸರಕಾರಿ ಬಸ್ ಗಳ ಪ್ರಯಾಣ ದರ ನೆಪವಾಗಿಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಬಾರದು ಈಗಾಗಲೇ ಹಬ್ಬದ ದಿನಗಳಲ್ಲಿ ಮನಸ್ಸೋಯಿಚ್ಚೆ, ಕಾನೂನು ಬಾಹಿರವಾಗಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಇದು ಸರ್ಕಾರಕ್ಕೆ ಗೊತ್ತಿದ್ದರೂ ಖಾಸಗೀ ಬಸ್ ಗಳ ಮಾಲೀಕರ ಮೆಲೆ ಕ್ರಮ ವಹಿಸಿಲ್ಲ.
ಕೋವಿಡ್ ಸಂಧರ್ಭದಲ್ಲಿ ಹೆಚ್ಚಿಸಿದ ಪ್ರಯಾಣ ದರ ಕೋವಿಡ್ ಅನಂತರ ಇಳಿಸಿಲ್ಲ ಡೀಸೆಲ್ ದರ ಇಳಿಕೆಯಾದಾಗಲೂ ಕೂಡ ಪ್ರಯಾಣ ದರ ಇಳಿಕೆ ಮಾಡಿದ್ದಾರೆಯೇ? ಎಂದು ಸುರೇಶ್ ಕಲ್ಲಾಗರ ಈ ಸಂಧರ್ಭದಲ್ಲಿ ಪ್ರಶ್ನಿಸಿದರು.ಈಗಾಗಲೇ ಖಾಸಗಿ ಬಸ್ ಗಳು ಜಿಲ್ಲೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವುದರಿಂದ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಂಕರ, ಭಾಸ್ಕರ್ ಶಾರ್ಕೆ,ಪ್ರಭಾಕರ ಗಾಣಿಗ, ನೇತ್ರಾವತಿ, ಗುಲಾಬಿ,ಗಿರಿಜ, ಮೂಕಾಂಬಿಕಾ, ಕೇಶವ ಮೊದಲಾದವರಿದ್ದರು.
ಇದನ್ನೂ ನೋಡಿ: ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice